Advertisement
ಪ್ರಫುಲ್ ಪಟೇಲ್, ಸುನೀಲ್ ತತ್ಕರೆ ಮತ್ತು ಬಂಡಾ ಯವೆದ್ದು ಹೊರನಡೆದಿರುವ ಎಲ್ಲ 9 ಶಾಸಕರನ್ನು ಉಚ್ಚಾಟನೆ ಮಾಡುವಂಥ ಮಹತ್ವದ ನಿರ್ಧಾರವನ್ನು ಕಾರ್ಯಕಾರಿಣಿಯಲ್ಲಿ ಕೈಗೊಳ್ಳಲಾಗಿದೆ. ಜತೆಗೆ ಇತರ 8 ನಿರ್ಣಯಗಳನ್ನೂ ಸಭೆಯಲ್ಲಿ ಕೈಗೊಳ್ಳಲಾಗಿದೆ. “ಎಲ್ಲ 27 ರಾಜ್ಯ ಘಟಕಗಳು ಕೂಡ ಶರದ್ ಬೆಂಬ ಲ ಕ್ಕಿದ್ದು, ಮಹಾರಾಷ್ಟ್ರದ ರಾಜ್ಯ ಘಟಕವೂ ಅವರ ಬೆನ್ನಿಗೆ ನಿಂತಿದೆ’ ಎಂದು ಸಭೆಯ ಬಳಿಕ ನಾಯಕರು ಹೇಳಿ ದ್ದಾರೆ. ಇದೇ ವೇಳೆ ಈ ಕಾರ್ಯಕಾರಿಣಿಯನ್ನು ಅಜಿತ್ ಅವರು “ಕಾನೂನುಬಾಹಿರ ನಡೆ’ ಎಂದು ದೂಷಿಸಿದ್ದಾರೆ.
Related Articles
Advertisement
ಸಿಎಂ ಏಕನಾಥ ಶಿಂಧೆ ಬಣದೊಳಗೆ ಢವ ಢವ!ಅತ್ತ ಅಜಿತ್ ಪವಾರ್ ಬಣ ಸರಕಾರದೊಳಗೆ ಸೇರುತ್ತಲೇ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನೆಯ ಶಾಸಕರಲ್ಲಿ ಆತಂಕ ಮನೆ ಮಾಡಿದೆ. ಬುಧವಾರವೇ ಶಾಸಕರಲ್ಲಿನ ತಳಮಳವನ್ನು ತಣ್ಣಗಾಗಿಸುವ ನಿಟ್ಟಿನಲ್ಲಿ ಶಿಂಧೆ ಅವರು ಶಾಸಕರೊಂದಿಗೆ ಸಮಾಲೋಚನೆ ನಡೆಸಿ, ಯಾರೂ ಭೀತಿಗೊಳಗಾಗಬೇಕಿಲ್ಲ ಎಂದು ಭರವಸೆ ನೀಡಿದ್ದರು. ಆದರೂ ಕೆಲವು ಶಾಸಕರು ತಾವು “ಮಾತೋಶ್ರೀ’ಯ ಕ್ಷಮೆ ಯಾಚಿಸುತ್ತೇವೆ, ಉದ್ಧವ್ ಬಣ ನಮ್ಮನ್ನು ಸಂಪರ್ಕಿಸಿದರೆ ಸಕಾರಾತ್ಮಕವಾಗಿ ಸ್ಪಂದಿಸುತ್ತೇವೆ ಎಂಬ ಸಂದೇಶಗಳನ್ನು ರವಾನಿಸಿದ್ದಾರೆ ಎಂದು ಶಿವಸೇನೆ ಸಂಸದ ವಿನಾಯಕ ರಾವತ್ ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆ ಗುರುವಾರ ಪ್ರತಿಕ್ರಿಯಿಸಿರುವ ಸಿಎಂ ಶಿಂಧೆ, “ನಾವು ರಾಜೀನಾಮೆ ಪಡೆಯುವವರೇ ಹೊರತು, ರಾಜೀನಾಮೆ ನೀಡುವವರಲ್ಲ. ನಮ್ಮ ಬಣದೊಳಗೆ ಯಾವುದೇ ಬಂಡಾಯ ಆರಂಭವಾಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಕಟ್ಟಪ್ಪ ಪೋಸ್ಟರ್‌ಗಳು ಪ್ರತ್ಯಕ್ಷ!
ಎನ್‌ಸಿಪಿಯ ಎರಡು ಬಣಗಳ ನಡುವೆ ಕದನ ಏರ್ಪಟ್ಟಿರುವ ನಡುವೆಯೇ, ಪಕ್ಷದ ವಿದ್ಯಾರ್ಥಿ ಘಟಕವು ಗುರುವಾರ ದಿಲ್ಲಿಯಲ್ಲಿ ಬಾಹುಬಲಿ ಸಿನೆಮಾದ ಪೋಸ್ಟರ್ ಅನ್ನು ಅಂಟಿಸಿ ಗಮನ ಸೆಳೆಯಿತು. ಕಟ್ಟಪ್ಪನು ಅಮರೇಂದ್ರ ಬಾಹುಬಲಿಯ ಬೆನ್ನ ಹಿಂದಿನಿಂದ ಬಂದು ಚೂರಿ ಇರಿಯುವ ಫೋಟೋವನ್ನು ಮುದ್ರಿಸಿ, “ದ್ರೋಹಿ’ ಎಂಬ ಶೀರ್ಷಿಕೆ ನೀಡಿ ಎಲ್ಲ ಕಡೆ ಅಂಟಿಸಲಾಗಿದೆ. ಜತೆಗೆ ಇದರಲ್ಲಿ ಅಜಿತ್‌ರನ್ನು “ಕಟ್ಟಪ್ಪ’ನೆಂದೂ, ಶರದ್‌ರನ್ನು ಬಾಹುಬಲಿ ಎಂದೂ ಚಿತ್ರಿಸಲಾಗಿದೆ.