ಮುಂಬಯಿ:ಸಮಾನ ಮನಸ್ಕ ವ್ಯಕ್ತಿಗಳು, ಪಕ್ಷಗಳು ಒಟ್ಟು ಸೇರುವ ಅಗತ್ಯವಿದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಪ್ರತಿಪಾದಿಸುವ ಮೂಲಕ ಬಿಜೆಪಿಯೇತರ ಶಕ್ತಿಗಳ ಒಗ್ಗೂಡುವಿಕೆ ಬಗ್ಗೆ ಪರೋಕ್ಷವಾಗಿ ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ:ಬಳಸಿದ ಕಾರ್ ಖರೀದಿಗೆ ಬೆಂಗಳೂರಿಗರ ಸ್ಪಂದನೆ ಹೆಚ್ಚು.! ಕಾರ್ ಖರೀದಿಯಲ್ಲಿ ಮಹಿಳೆಯರೇ ಹೆಚ್ಚು!
ಪುಣೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿರುವ ಅವರು, ಕಾಂಗ್ರೆಸ್ ಮುನ್ನೆಲೆಗೆ ಬರುವುದು ಸೇರಿದಂತೆ ದೇಶದಲ್ಲಿನ ರಾಜಕೀಯ ಆತಂಕ ಬದಿಗೆ ಸರಿಸಬೇಕಿದ್ದರೆ ಸಮಾನ ಮನಸ್ಕರು, ಸಮಾನ ಚಿಂತನೆಯ ವ್ಯಕ್ತಿಗಳು ಒಟ್ಟು ಸೇರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ನಿಂದ ಹೊರಗೆ ಬಂದರು ನಾನು ಹಾಗೂ ನನ್ನ ಕುಟುಂಬ ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರು, ಯಶವಂತರಾವ್ ಚವ್ಹಾಣ್ ಅವರ ತತ್ವಾದರ್ಶಗಳನ್ನು ಬಿಟ್ಟಿಲ್ಲ. 1999 ರವರೆಗೂ ನಾನು ಕಾಂಗ್ರೆಸ್‌ನ ಬಹುತೇಕ ನಿಲುವುಗಳಿಗೆ ನಾನು ವ್ಯತಿರಿಕ್ತ ಧೋರಣೆ ಹೊಂದಿರಲಿಲ್ಲ ಎಂದು ಹೇಳಿದ್ದಾರೆ.
ನನ್ನ ಕುಟುಂಬ ಮೊದಲಿನಿಂದಲೂ ತುಸು ವಿಭಿನ್ನವಾದ ತತ್ವದಲ್ಲಿ ನಂಬಿಕೆ ಇಟ್ಟಿದೆ. ಅದು ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಹತ್ತಿರವಾಗಿದೆ. ಗಾಂಧಿ, ನೆಹರು ಸೇರಿದಂತೆ ಕಾಂಗ್ರೆಸಿನ ಬಹುತೇಕರು ಆ ತತ್ವಕ್ಕೆ ಹತ್ತಿರವಾಗಿದ್ದರು. 1958 ರಲ್ಲಿ ನಮ್ಮಂತ ಯುವಕರು ಮುಂಬಯಿಗೆ ಬಂದಾಗ ಈ ವಿಚಾರಧಾರೆಯನ್ನು ಬಲವಾಗಿ ಅನುಸರಿದೆವು ಎಂದಿದ್ದಾರೆ.
ನಾನಾಗಿಯೇ ಕಾಂಗ್ರೆಸ್ ತೊರೆಯುವ ಬಗ್ಗೆ ಎಂದೂ ಯೋಚಿಸಿರಲಿಲ್ಲ. ಆದರೆ ಕಾಂಗ್ರೆಸ್ ಆರು ವರ್ಷಗಳ ಕಾಲ ನನ್ನನ್ನು ಉಚ್ಚಾಟನೆ ಮಾಡಿತು. ಆಗ ಹೊಸ ಪಕ್ಷ ಕಟ್ಟುವುದು ಅನಿವಾರ್ಯವಾಯಿತು ಎನ್ನುವ ಮೂಲಕ ಕಾಂಗ್ರೆಸ್ ಕಡೆಗೆ ಮತ್ತೆ ಮಮತೆ ತೋರಿದ್ದಾರೆ.