Advertisement
ಬೆಳ್ತಂಗಡಿ ತಾಲೂಕು ಪಾರೆಂಕಿಯ ರಿಯಾಜ್, ಪುತ್ತೂರು ತಾಲೂಕು ನೆಲ್ಯಾಡಿಯ ಸಾದಿಕ್ ಮತ್ತು ಚಾಮರಾಜನಗರದ ಖಲೀಂ ಯಾನೆ ಖಲೀಮುಲ್ಲಾ ಬಂಧಿತ ಆರೋಪಿಗಳು.
Related Articles
Advertisement
ಇದೇ ಆರೋಪದ ಮೇಲೆ ಇಲ್ಲಿವರೆಗೆ ಒಟ್ಟು ಐವರು ಆರೋಪಿಗಳನ್ನು ಚಾಮರಾಜನಗರ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಿಂದ ಈಗಾಗಲೇ ಪೊಲೀಸರು ಬಂಧಿಸಿರುವುದು ಗಮನಾರ್ಹ. ಆದರೆ ಶರತ್ ಅವರನ್ನು ಮಾರಕಾಯುಧಗಳಿಂದ ಕಡಿದು ಕೊಲೆ ಕೃತ್ಯ ಎಸಗಿದ ಆರೋಪಿಗಳ ಬಂಧನ ಇನ್ನಷ್ಟೇ ಆಗಬೇಕಾಗಿದೆ. ಅಂದರೆ, ಶರತ್ ಅವರನ್ನು ಹತ್ಯೆ ಮಾಡಿ ಪರಾರಿಯಾಗಿರುವ ಈ ಪ್ರಕರಣದ ಪ್ರಮುಖ ಆರೋಪಿಗಳು ಯಾರು ಎಂಬುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.
ಪಿಎಫ್‌ಐ ನಾಯಕರುಆರೋಪಿ ರಿಯಾಜ್ ಪಾರಂಕಿ ಬೆಳ್ತಂಗಡಿಯ ಪಿಎಫ್‌ಐ ನಾಯಕನಾಗಿದ್ದು, ಆರೋಪಿ ಸಾದಿಕ್ ಕೂಡ ಪಿಎಫ್‌ಐ ಸದಸ್ಯನಾರುತ್ತಾನೆ. ಮಂಗಳವಾರ ಚಾಮರಾಜನಗರದಲ್ಲಿ ಬಂಧನ ಕ್ಕೊಳಗಾಗಿರುವ ಖಲೀಲ್‌ವುಲ್ಲಾ ಕೂಡ ಪಿಎಫ್‌ಐ ಸಂಘಟನೆಗೆ ಸೇರಿದವನು. ಆದರೆ, ಈ ಕೊಲೆ ಪ್ರಕ ರಣದ ಸೂತ್ರ ಧಾರರು ಯಾರು ಮತ್ತು ಯಾವ ಕಾರಣಕ್ಕೆ ಶರತ್ ಮಡಿವಾಳ ಅವರನ್ನು ಕೊಲೆ ಮಾಡಲಾಗಿದೆ ಎಂಬುದು ಪೊಲೀಸರ ತನಿಖೆ ಪೂರ್ಣಗೊಂಡು ಎಲ್ಲ ಆರೋಪಿಗಳ ಬಂಧನವಾದ ಬಳಿಕವಷ್ಟೇ ಗೊತ್ತಾಗಲಿದೆ. ಇಬ್ಬರಿಗೆ ಪೊಲೀಸ್ ಕಸ್ಟಡಿ
ಮಂಗಳವಾರ ಬಂಧಿತರಾದ ಅಬ್ದುಲ್ ಶಾಫಿ ಮತ್ತು ಖಲೀಲ್‌ವುಲ್ಲಾನನ್ನು ಬಂಟ್ವಾಳ ನಗರ ಪೊಲೀಸರು ಬುಧವಾರ ಬಂಟ್ವಾಳ ಜೆ.ಎಂ.ಎಫ್.ಸಿ.ನ್ಯಾಯಾಲಯಕ್ಕೆ ಹಾಜರುಪಡಿ ಸಿದ್ದು, ಹೆಚ್ಚಿನ ವಿಚಾರಣೆಗಾಗಿ ಒಂದು ವಾರದ ಪೊಲೀಸ್ ಕಸ್ಟಡಿಗೆ ವಿಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಬಳಿಕ ಹೆಚ್ಚಿನ ವಿಚಾರಣೆಗಾಗಿ ಅವರನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಪಡೆಯಲಾಗುವುದು ಎಂದು ಮಂಗಳವಾರ ಐಜಿಪಿ ಕೂಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಇನ್ನುಳಿದ ಆರೋಪಿಗಳ ಶೀಘ್ರ ಬಂಧನ ಈ ಪ್ರಕರಣದಲ್ಲಿ ಭಾಗಿಯಾದ ಇನ್ನೂ 2- 3 ಮಂದಿ ಆರೋಪಿಗಳಿದ್ದು, ಅವರನ್ನು ಶೀಘ್ರ ಬಂಧಿ ಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತ ಪಡಿಸಿದ್ದಾರೆ. ಶರತ್ ಮಡಿವಾಳ ಅವರ ಮೇಲೆ ಜು. 4 ರಂದು ರಾತ್ರಿ ಬಿ.ಸಿ.ರೋಡ್‌ನಲ್ಲಿ ಮಾರಕಾಯುಧಗಳಿಂದ ಹಲ್ಲೆ ನಡೆದಿತ್ತು. ಜು. 6/7 ರಂದು ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಸಾವನ್ನಪ್ಪಿದ್ದರು.