ಇಲ್ಲಿಯವರೆಗೆ ಹೋಮ್ಲಿ ಪಾತ್ರಗಳಿಂದ, ಗ್ಲಾಮರಸ್ ಪಾತ್ರಗಳವರೆಗೆ ಹಲವು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿ ಶಾನ್ವಿ ಶ್ರೀವಾಸ್ತವ್, ಇದೇ ಮೊದಲ ಬಾರಿಗೆ ಇದೆಲ್ಲದಕ್ಕಿಂತಲೂ ಹೊರತಾಗಿರುವ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅದು “ಬ್ಯಾಂಗ್’ ಚಿತ್ರದಲ್ಲಿ.
ಹೌದು, ಈಗಾಗಲೇ ಸದ್ದಿಲ್ಲದೆ “ಬ್ಯಾಂಗ್’ ಚಿತ್ರದ ಬಹುತೇಕ ಚಿತ್ರೀಕರಣ ಮತ್ತು ಒಂದಷ್ಟು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಇದೀಗ “ಬ್ಯಾಂಗ್’ ಚಿತ್ರದ ಫಸ್ಟ್ ಲುಕ್ ಮತ್ತು ಟೀಸರ್ ಬಿಡುಗಡೆಯಾಗಿದೆ.
ಮೊದಲ ಬಾರಿಗೆ ಇಂಥದ್ದೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರು ವುದಕ್ಕೆ ಶಾನ್ವಿ ಕೂಡ ಫುಲ್ ಖುಷಿ ಯಾಗಿದ್ದಾರೆ. “ಬ್ಯಾಂಗ್’ನಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡುವ ಶಾನ್ವಿ, “ಈ ಹಿಂದೆ ನಾನು ಯಾವತ್ತೂ ಈ ಥರದ ಕ್ಯಾರೆಕ್ಟರ್ ಮಾಡಿರಲಿಲ್ಲ. ಈ ಥರದ ಕ್ಯಾರೆಕ್ಟರ್ ನನಗೆ ಸರಿ ಹೊಂದುತ್ತದೆಯೋ, ಇಲ್ಲವೋ ಎಂದು ಮೊದಲು ತುಂಬ ಯೋಚನೆ ಮಾಡಿದ್ದೆ. ತುಂಬ ಗೊಂದಲದಲ್ಲೇ ಈ ಕ್ಯಾರೆಕ್ಟರ್ ಒಪ್ಪಿಕೊಂಡಿದ್ದೆ.
ಆದ್ರೆ ಫಸ್ಟ್‌ಡೇ ಶೂಟಿಂಗ್‌ಗೆ ಹೋದಾಗ, ನಾನು ತೆಗೆದುಕೊಂಡ ನಿರ್ಧಾರ ಸರಿ ಅನಿಸಿತು. ಇಲ್ಲಿಯವರೆಗೆ, ಹೀರೋಯಿನ್ ಆಗಿ ತುಂಬ ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಇಂಥ ಸ್ಟೋರಿ, ಕ್ಯಾರೆಕ್ಟರ್‌ಗಳು ಸಿಗೋದು ಅಪರೂಪ. ನನ್ನ ಹೊಸ ಲುಕ್ ಆಡಿಯನ್ಸ್‌ಗೂ ಇಷ್ಟವಾಗುತ್ತದೆ ಎಂಬ ಭರವಸೆ ಇದೆ’ ಎನ್ನುತ್ತಾರೆ.
ಇನ್ನು ಡಾರ್ಕ್ ಕಾಮಿಡಿ ಹಾಗೂ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ “ಬ್ಯಾಂಗ್’ ಚಿತ್ರದಲ್ಲಿ ನಟಿ ಶಾನ್ವಿ ಶ್ರೀವಾಸ್ತವ್ ಜೊತೆ ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಕೂಡ ಮತ್ತೂಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರಿತ್ವಿಕ್ ಮುರಳಿಧರ್, ಸುನೀಲ್, ನಾಟ್ಯ ರಂಗ ಹಾಗೂ ಸಾತ್ವಿಕ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಶ್ರೀಗಣೇಶ್ ಪರಶು ರಾಮ… “ಬ್ಯಾಂಗ್’ ಚಿತ್ರವನ್ನು ನಿರ್ದೇಶಿಸು ತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಶ್ರೀಗಣೇಶ್, “ಎಲ್ಲ ವರ್ಗದ ಆಡಿಯನ್ಸ್‌ಗೂ ಇಷ್ಟವಾಗುವಂಥ, 48 ಗಂಟೆಗಳಲ್ಲಿ ನಡೆಯುವ ಘಟನೆಯೊಂದನ್ನು ಸಿನಿಮಾ ದಲ್ಲಿ ವಿಭಿನ್ನವಾಗಿ ಹೇಳಿ ದ್ದೇವೆ. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಸಿನಿಮಾ ತಯಾರಾ ಗುತ್ತಿದ್ದು, ಮುಂಬರುವ ಫೆಬ್ರವರಿ ವೇಳೆಗೆ ಸಿನಿಮಾ ತೆರೆಗೆ ತರುವ ಯೋಚನೆ ಇದೆ’ ಎಂದರು. “ಯು.ಕೆ.ಪೊ›ಡಕ್ಷನ್ಸ್’ ಬ್ಯಾನರ್‌ನಲ್ಲಿ ಪೂಜಾ ವಸಂತಕುಮಾರ್ “ಬ್ಯಾಂಗ್’ ಚಿತ್ರವನ್ನು ನಿರ್ಮಿಸಿದ್ದಾರೆ.