Advertisement

Shanvi Srivastava: ‘ಬ್ಯಾಂಗ್‌’ ಎಂಟ್ರಿಗೆ ಶಾನ್ವಿ ರೆಡಿ

12:51 PM Jul 21, 2023 | Team Udayavani |

ಇಲ್ಲಿಯವರೆಗೆ ಹೋಮ್ಲಿ ಪಾತ್ರಗಳಿಂದ, ಗ್ಲಾಮರಸ್‌ ಪಾತ್ರಗಳವರೆಗೆ ಹಲವು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿ ಶಾನ್ವಿ ಶ್ರೀವಾಸ್ತವ್‌, ಇದೇ ಮೊದಲ ಬಾರಿಗೆ “ಬ್ಯಾಂಗ್‌’ ಸಿನಿಮಾದಲ್ಲಿ ಗ್ಯಾಂಗ್‌ಸ್ಟರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Advertisement

ಈಗಾಗಲೇ ಸದ್ದಿಲ್ಲದೆ “ಬ್ಯಾಂಗ್‌’ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಪೂರ್ಣಗೊಂಡಿದ್ದು, ನಿಧಾನವಾಗಿ ಚಿತ್ರತಂಡ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿದೆ. ಇದೀಗ ಸಿನಿಮಾದ ಬಿಡುಗಡೆಗೂ ಮುಹೂರ್ತ ನಿಗಧಿಯಾಗಿದ್ದು, ಇದೇ ಆಗಸ್ಟ್‌ 18ರಂದು “ಬ್ಯಾಂಗ್‌’ ಸಿನಿಮಾ ಬಿಡುಗಡೆಯಾಗುತ್ತಿದೆ.

ಇನ್ನು ಮೊದಲ ಬಾರಿಗೆ ಇಂಥದ್ದೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವುದಕ್ಕೆ ಶಾನ್ವಿ ಕೂಡ ಫ‌ುಲ್‌ ಖುಷಿಯಾಗಿದ್ದಾರೆ. “ಬ್ಯಾಂಗ್‌’ನಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡುವ ಶಾನ್ವಿ, “ಈ ಹಿಂದೆ ನಾನು ಯಾವತ್ತೂ ಈ ಥರದ ಕ್ಯಾರೆಕ್ಟರ್‌ ಮಾಡಿರಲಿಲ್ಲ. ಈ ಥರದ ಕ್ಯಾರೆಕ್ಟರ್‌ ನನಗೆ ಸರಿ ಹೊಂದುತ್ತದೆಯೋ, ಇಲ್ಲವೋ ಎಂದು ಮೊದಲು ತುಂಬ ಯೋಚನೆ ಮಾಡಿದ್ದೆ. ತುಂಬಾ ಗೊಂದಲದಲ್ಲೇ ಈ ಕ್ಯಾರೆಕ್ಟರ್‌ ಒಪ್ಪಿಕೊಂಡಿದ್ದೆ. ಆದರೆ ಫ‌ಸ್ಟ್‌ಡೇ ಶೂಟಿಂಗ್‌ ಗೆ ಹೋದಾಗ, ನಾನು ತೆಗೆದುಕೊಂಡ ನಿರ್ಧಾರ ಸರಿ ಅನಿಸಿತು. ಇಲ್ಲಿಯವರೆಗೆ, ಹೀರೋಯಿನ್‌ ಆಗಿ ತುಂಬಾ ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಇಂಥ ಸ್ಟೋರಿ, ಕ್ಯಾರೆಕ್ಟರ್‌ಗಳು ಸಿಗೋದು ಅಪರೂಪ. ನನ್ನ ಹೊಸ ಲುಕ್‌ ಆಡಿಯನ್ಸ್‌ಗೂ ಇಷ್ಟವಾಗುತ್ತದೆ ಎಂಬ ಭರವಸೆ ಇದೆ’ ಎನ್ನುತ್ತಾರೆ.

ಇನ್ನು ಡಾರ್ಕ್‌ ಕಾಮಿಡಿ ಹಾಗೂ ಆಕ್ಷನ್‌ ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ಬ್ಯಾಂಗ್‌’ ಚಿತ್ರದಲ್ಲಿ ನಟಿ ಶಾನ್ವಿ ಶ್ರೀವಾಸ್ತವ್‌ ಜೊತೆ ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್‌ ಕೂಡ ಮತ್ತೂಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರಿತ್ವಿಕ್‌ ಮುರಳಿಧರ್‌, ಸುನೀಲ್‌, ನಾಟ್ಯ ರಂಗ ಹಾಗೂ ಸಾತ್ವಿಕ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಶ್ರೀಗಣೇಶ್‌ ಪರಶುರಾಮ್ “ಬ್ಯಾಂಗ್‌’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. “ಯು. ಕೆ. ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಪೂಜಾ ವಸಂತಕುಮಾರ್‌ “ಬ್ಯಾಂಗ್‌’ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ರಿತ್ವಿಕ್‌ ಮುರಳಿಧರ್‌ ಸಂಗೀತ, ಉದಯಲೀಲ ಛಾಯಾಗ್ರಹಣ, ವಿಜೇತ್‌ ಚಂದ್ರ ಸಂಕಲನವಿದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next