Advertisement

ಅಭಿವೃದ್ಧಿಗೆ ಮಾದರಿಯಾದ ಶಾಂತಿನಗರ

11:40 AM Apr 25, 2018 | |

ಬೆಂಗಳೂರು: ಸಿಲಿಕಾನ್‌ ಸಿಟಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾದ ಶಾಂತಿನಗರ ಕಳೆದ 10 ವರ್ಷದಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದು, ನಾಗರಿಕ ಮತ್ತು ಅತ್ಯಾಧುನಿಕ ಸೌಲಭ್ಯಕಲ್ಪಿಸಿದೆ ಎಂದು ವಿವಿಧ ಸಂಘಟನೆಗಳು ಹೇಳಿವೆ.

Advertisement

ದಶಕಗಳಿಂದಲೂ ಸೌಲಭ್ಯಗಳಿಲ್ಲದೆ ಹಿಂದುಳಿದಿದ್ದ ಕ್ಷೇತ್ರದಲ್ಲಿ ಮೂಲಸೌಲಭ್ಯ ಒದಗಿಸುವ ಮೂಲಕ ಶಾಸಕ ಎನ್‌. ಎ. ಹ್ಯಾರಿಸ್‌ ಅವರು ಸತತ ಪರಿಶ್ರಮ ಹಾಕಿ ಕ್ಷೇತ್ರದ ಅಭಿವೃದ್ಧಿಯ ಕನಸು ನನಸು ಮಾಡಿದ್ದಾರೆ ಎಂದು ಸಂಘ, ಸಂಸ್ಥೆಗಳು ಅವರ ಸಾಧನೆಯನ್ನು ಶ್ಲಾ ಸಿವೆ.

ಜೆಎಲ್‌ಎಲ್‌ ಸಂಸ್ಥೆ ಇತ್ತೀಚಿಗೆ ನಡೆಸಿದ ಅಧ್ಯಯನ ಪ್ರಕಾರ ಬೆಂಗಳೂರು ಸೌಲಭ್ಯ ಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಶಾಂ ಸಿಲಿಕಾನ್‌ ತಾಣವನ್ನೇ ಹಿಂದಿಕ್ಕಿದೆ. ಇದಕ್ಕೆ ಶಾಂತಿನಗರ ಕ್ಷೇತ್ರದ ಕಾಣಿಕೆ ಅಪಾರವಾಗಿದೆ ಎಂದು ಕ್ಷೇತ್ರದ ವಿವಿಧ ಸಂಘಟನೆಗಳು ಹೇಳಿವೆ.

ಟೆಂಡರ್‌ ಶ್ಯೂರ್‌ ರಸ್ತೆಗಳು, ಇಂದಿರಾ ಕ್ಯಾಂಟೀನ್‌ನಲ್ಲಿ ಸಮರ್ಪಕ ಸೇವೆ, ನಮ್ಮ ಮೆಟ್ರೋ ಸೌಲಭ್ಯ, ಸ್ಟಾರ್ಟ್‌ಅಪ್‌ ಕರ್ನಾಟಕ, ನಿರಂತರ ವಿದ್ಯುತ್‌ ಪೂರೈಕೆ ಸೇರಿ ಅನೇಕ ಯೋಜನೆಗಳು ಬೆಂಗಳೂರಿನ ಜೀವನ ಮಟ್ಟವನ್ನು ಸುಧಾರಿಸುವಂತೆ ಮಾಡಿದೆ. ಇದರ ಫ‌ಲವಾಗಿ ಬೆಂಗಳೂರು ಈಗ ವಿಶ್ವ ಮಟ್ಟದ ಹಿರಿಮೆಗೆ ಪಾತ್ರವಾಗಿದೆ ಎಂದು ಸಂಘಟನೆಗಳ ಪದಾಧಿಕಾರಿಗಳು ತಿಳಿಸಿದರು.

ಕ್ಷೇತ್ರದ ವಿವಿಧ ವಾರ್ಡ್‌ಗಳಲ್ಲಿ ಕುಡಿಯಲು ಶುದ್ಧ ನೀರು ಪೂರೈಕೆ ಮಾಡಲು ಜಲಶುದ್ಧೀಕರಣ ಯಂತ್ರ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿದೆ. ಕ್ರೀಡಾಸಕ್ತರನ್ನು ಪ್ರೋತ್ಸಾಹಿಸಿ ಬೆಳೆಸಲು ಕ್ಷೇತ್ರದಲ್ಲಿ ಉತ್ತಮ ಫ‌ುಟ್ಬಾಲ್‌ ಕ್ರೀಡಾಂಗಣ ಅಭಿವೃದ್ಧಿ ಮಾಡಲು ಸಿದ್ಧತೆ ನಡೆದಿದೆ.

Advertisement

ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಂದ ಇಲ್ಲಿನ ಮಕ್ಕಳಿಗೆ ತರಬೇತಿ ಕೊಡಿಸುವುದು ಮತ್ತು ಭವಿಷ್ಯದಲ್ಲಿ ಫ‌ುಟ್ಬಾಲ್‌ ವಿಶ್ವಕಪ್‌ ಪಂದ್ಯಾವಳಿಗೆ ಭಾರತ ತಂಡದಲ್ಲಿ ಇಲ್ಲಿಂದ ಆಟಗಾರರನ್ನು ಕಳುಹಿಸುವುದು ಹ್ಯಾರಿಸ್‌ ಅವರ ಕನಸಾಗಿದೆ. ಅದನ್ನು ನಾವೆಲ್ಲಾ ಸಾಕಾರಗೊಳಿಸಬೇಕು ಎಂದು ಹೇಳಿದರು.

ಕಳೆದ ಹತ್ತು ವರ್ಷಗಳಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹ್ಯಾರಿಸ್‌ ಅವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಮೂಲಭೂತ ಸೌಕರ್ಯ ಅಭಿವೃದ್ಧಿ ಸೇರಿದಂತೆ ಎಲ್ಲ ವರ್ಗದ ಹಿತ ಕಾಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

ಶಾಂತಿನಗರ ಹಳೇ ಬೆಂಗಳೂರು ಪ್ರದೇಶವಾಗಿದ್ದರಿಂದ ಒಳಚರಂಡಿ ವ್ಯವಸ್ಥೆ ಬ್ರಿಟಿಷರ ಕಾಲದ್ದು, ಹೀಗಾಗಿ,  ಹಳೇ ಪೈಪ್‌ಲೈನ್‌ಗಳನ್ನು ಬದಲಿಸಿ ಯಾವುದೇ ಸಮಸ್ಯೆ ತಲೆದೋರದಂತೆ ಮಾಡಲಾಗಿದೆ. ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಂಡಿದ್ದೇನೆ. ತ್ಯಾಜ್ಯ ವಿಲೇವಾರಿ ಸಮಸ್ಯೆ ಉಂಟಾಗದಂತೆ ನೋಡಿಕೊಂಡಿದ್ದೇನೆ. ರಸ್ತೆಗಳ ಅಭಿವೃದ್ಧಿ, ಬೀದಿ ದೀಪಗಳು, ಅಪರಾಧ ಕೃತ್ಯಗಳನ್ನು ತಡೆಯಲು  ಸಿಸಿಟಿವಿ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ. ಕ್ಷೇತ್ರದ ಜನತೆಯ  ಆಶೀರ್ವಾದದೊಂದಿಗೆ ನಾನು ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದು, ಗೆಲವು ಸಾಧಿಸುವ ವಿಶ್ವಾಸವಿದೆ.
-ಎನ್‌.ಎ.ಹ್ಯಾರಿಸ್‌

Advertisement

Udayavani is now on Telegram. Click here to join our channel and stay updated with the latest news.

Next