Advertisement

Special Article ಶಾಂತ ಸ್ವಭಾವದ ಗಟ್ಟಿ ನಾಯಕ ಶಾಂತಗೌಡ ಪಾಟೀಲ

04:22 PM Nov 01, 2023 | Team Udayavani |

ಇವರು ಹೆಸರಿಗೆ ತಕ್ಕಂತೆ ಶಾಂತ ಸ್ವಭಾವದವರು. ಸಂಘಟನೆ ವಿಷಯಕ್ಕೆ ನಿಂತರೆ ಬಾದಾಮಿ ಬಂಡೆಗಳಷ್ಟೇ ಗಟ್ಟಿ. ಗ್ರಾಮಮಟ್ಟದಿಂದ ಹಿಡಿದು ಜಿಲ್ಲಾಮಟ್ಟದವರೆಗೆ ತಮ್ಮ ಶಾಂತ ಸ್ವಭಾವದಿಂದಲೇ ಎಲ್ಲಾ ಹಂತದ ನಾಯಕರ ವಿಶ್ವಾಸ ಗಳಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.

Advertisement

ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡರೂ ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರಿಗೆ ಧೈರ್ಯ ತುಂಬುತ್ತ ಸಾಗಿರುವ ಶೈಲಿ ಎಲ್ಲರಿಗೆ ಇಷ್ಟವಾಗಿದೆ. ಚುನಾವಣೆಯಲ್ಲಿ ಸೋತವರು ಆಪ್ತರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ಸೇರಿ ಚರ್ಚೆ ನಡೆಸಿ ಸೋಲಿಗೆ ಕಾರಣ ಹುಡುಕುತ್ತಾರೆ. ಆದರೆ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಬಾದಾಮಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಶಾಂತಗೌಡ ಟಿ. ಪಾಟೀಲರು ಸೋತ ಬಳಿಕ ಪುನಃ ಕ್ಷೇತ್ರದಲ್ಲಿ ಸಂಚರಿಸಿ ಗಮನ ಸೆಳೆದಿದ್ದಾರೆ.

ಚುನಾವಣೆಯಲ್ಲಿ ಸೋಲು-ಗೆಲುವು ಸಹಜ ಎಂಬುದನ್ನು ಅರಿತಿರುವ ಶಾಂತಗೌಡರು ಚುನಾವಣೆ ಸಂದರ್ಭದಲ್ಲಿ ಎಲ್ಲಿ ಪ್ರಚಾರ ಕೈಗೊಂಡಿದ್ದರೋ ಸೋತ ಬಳಿಕ ಅಲ್ಲಿಯೇ ಸಂಚರಿಸುವ ಮೂಲಕ ಮತದಾರರಿಗೆ ಬಿಜೆಪಿಗೆ ಮತ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ನಿಮ್ಮ ಕಷ್ಟಗಳಿಗೆ ಸ್ಪಂದಿಸಲು ಬಿಜೆಪಿ ಹಾಗೂ ನಾನು ಸದಾ ನಿಮ್ಮ ಜತೆರುತ್ತೇವೆ ಎಂಬ ಅಭಯ ನೀಡಿದ್ದಾರೆ.
ಎಸ್‌.ಟಿ.ಪಾಟೀಲರ ಈ ಕಾರ್ಯ ಅನೇಕ ಮುಖಂಡರಿಗೆ ಮಾದರಿಯಾಗಿದೆ ಎಂಬ ಮಾತು ಬಾದಾಮಿ ಕ್ಷೇತ್ರದ ಜನರಿಂದ ಕೇಳಿ ಬಂತು. ಜತೆಗೆ ಅಧ್ಯಕ್ಷರೇ ನಿಮ್ಮ ಜತೆಗೆ ನಾವಿದ್ದೇವೆಂಬ ಮಾತುಗಳು ಕೇಳಿ ಬಂದವು. ಜಿಲ್ಲೆಯ ಅನೇಕ ನಾಯಕರು ಶಾಂತಗೌಡರ ಈ ಕೆಲಸಕ್ಕೆ ಶಬ್ಟಾಸಗಿರಿ ನೀಡಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷರಾದ ಮೇಲೆ ಶಾಂತಗೌಡರು ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರಗಳ ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಳಮಟ್ಟದಿಂದ ಪಕ್ಷ ಗಟ್ಟಿಗೊಳಿಸಿದರು. ಪ್ರತಿಯೊಬ್ಬ ಕಾರ್ಯಕರ್ತರನ್ನು ಆತ್ಮೀಯವಾಗಿ ಮಾತನಾಡಿಸುವ ಶಾಂತಗೌಡರು ಎಂದರೆ ಕಾರ್ಯಕರ್ತರಿಗೂ ಅಷ್ಟೇ ಪ್ರೀತಿ. ಎಂದೂ ಯಾರ ಮೇಲೂ ಸಿಟ್ಟಾಗದ ಶಾಂತಗೌಡರು ತಮಗೆ ನೀಡಿದ್ದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

Advertisement

ಶಿಸ್ತಿನ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನ ಪಡೆದ ಬಳಿಕ ಜಿಲ್ಲಾದ್ಯಂತ ಪ್ರವಾಸ ಕೈಗೊಂಡ ಶಾಂತಗೌಡರು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಜಾರಿಗೆ ತಂದಿರುವ ಅನೇಕ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಕಾರ್ಯಕರ್ತರನ್ನು ಹುರುದುಂಬಿಸಿದ್ದಾರೆ. ಜಿಲ್ಲೆಯ ಜನರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಯೋಜನೆಗಳ ಲಾಭ ಪಡೆಯುವಲ್ಲಿ ಶಾಂತಗೌಡರು ಮಹತ್ವದ ಪಾತ್ರ ವಹಿಸುತ್ತಾರೆ ಎಂದರೆ ತಪ್ಪಾಗಲಾರದು.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಾದಾಗ ಖುದ್ದು ಬಾದಾಮಿ ಕ್ಷೇತ್ರದ ಅಭ್ಯರ್ಥಿಯಾದರೂ ಶಾಂತಗೌಡರು ಜಿಲ್ಲೆಯ ಏಳೂ ವಿಧಾನಸಭೆ ಕ್ಷೇತ್ರಗಳಲ್ಲಿ ಸಂಚರಿಸಿ ಪಕ್ಷ ಸಂಘಟಿಸಿದ್ದಾರೆ. ಕಾರ್ಯಕರ್ತರಲ್ಲಿದ್ದ ಅನೇಕ ಗೊಂದಲಗಳನ್ನು ಬೆಣ್ಣೆಯಲ್ಲಿನ ಕೂದಲು ತೆಗೆದ ರೀತಿಯಲ್ಲಿ ಬಗೆಹರಿಸಿ ಎಲ್ಲರನ್ನೂ ಒಟ್ಟುಗೂಡಿಸಿ ಚುನಾವಣೆ ಎದುರಿಸಿದ್ದಾರೆ.

ಬಾದಾಮಿ ಕ್ಷೇತ್ರದಲ್ಲಿ ತಾವು ಸೋತರೂ ಮೊದಲ ಚುನಾವಣೆಯಲ್ಲಿ 53,120 ಮತಗಳನ್ನು ನೀಡಿದ ಬಾದಾಮಿ ಕ್ಷೇತ್ರದ ಜನತೆ ಬಳಿ ತೆರಳಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅನೇಕ ಒಳ ರಾಜಕೀಯ ನಡೆದರೂ ಅದರ ಬಗ್ಗೆ ಇಲ್ಲಿಯವರೆಗೆ ಮಾತನಾಡದ ಶಾಂತಗೌಡರು ಎಲ್ಲರನ್ನೂ ಕರೆದುಕೊಂಡು ಹೋಗುವ ಕೆಲಸ ಮಾಡಿದ್ದಾರೆ.

ಸಂಘಟನಾ ಚತುರ: ಆರ್ಥಿಕವಾಗಿ ಸದೃಢರಾಗಿರುವ ಶಾಂತಗೌಡರು ಸೌಮ್ಯ ಸ್ವಭಾವದವರಾದರು. ಸಂಘಟನೆಯಲ್ಲಿ ಮುಂದು. ಬಾದಾಮಿ ತಾಲೂಕಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಯುವಕರ ಪಡೆ ಕಟ್ಟಿದ್ದರು. ಅವರ ಸಂಘಟನೆಯ ಚತುರತೆಯನ್ನು ನೋಡಿಯೇ ಪಕ್ಷದ ಮುಖಂಡರು ಜಿಲ್ಲಾಧ್ಯಕ್ಷ ಸ್ಥಾನ ನೀಡಿದರು. ಶಾಂತಗೌಡರು ಜಿಲ್ಲಾಧ್ಯಕ್ಷರಾದ ಸಂದರ್ಭದಲ್ಲಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರೂ. ಅವರ ಜತೆ ಸೇರಿ ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಗೊಳಿಸಿದ್ದಾರೆ.

ಹಮ್ಮು ಬಿಮ್ಮು ಇಲ್ಲದ ಗೌಡರು: ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದ ಶಾಂತಗೌಡ ಪಾಟೀಲ ಅವರು ಹಮ್ಮು ಬಿಮ್ಮು ಇಲ್ಲದ ರೈತ ನಾಯಕರು. ಗ್ರಾಮೀಣ ಭಾಗದಿಂದ ರಾಜಕೀಯ ಆರಂಭಿಸಿದ ಅವರು, ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಅಲಂಕರಿಸಿದವರು. ಇಷ್ಟಿದ್ದರೂ ಎಂದಿಗೂ ಯಾರ ಮೇಲೂ ಸೊಕ್ಕು ತೋರಿಸದ ಸಭ್ಯ ರಾಜಕಾರಣಿ. ಸಂಕಷ್ಟ ಎಂದು ಬಂದವರಿಗೆ ಕೈಲಾದ ಸಹಾಯ ಮಾಡುವ ವ್ಯಕ್ತಿತ್ವ. ಎಲ್ಲರನ್ನೂ ಗೌರವದಿಂದ ಕಾಣುವ ಗೌಡರನ್ನು ಕಂಡರೆ ಬಾದಾಮಿ ಕ್ಷೇತ್ರದ ಜನರಿಗೂ ಅಷ್ಟೇ ಪ್ರೀತಿ.

2 ಬಾರಿ ಗ್ರಾಪಂ ಸದಸ್ಯ: 2 ಬಾರಿ ಗ್ರಾಪಂ ಸದಸ್ಯರಾದ ಎಸ್‌.ಟಿ.ಪಾಟೀಲರು ಒಮ್ಮೆ ಗ್ರಾಪಂ ಉಪಾಧ್ಯಕ್ಷರಾಗಿ ಜನಸೇವೆ ಆರಂಭಿಸಿದ್ದಾರೆ. ಈ ಅವಧಿಯಲ್ಲಿ ಗ್ರಾಮಗಳಿಗೆ ಬೇಕಾಗುವ ಮೂಲಭೂತ ಸೌಲಭ್ಯಗಳಾದ ಪೈಪ್‌ಲೈನ್‌, ಸಿಸಿ ರಸ್ತೆ ನಿರ್ಮಾಣ, ಶೌಚಾಲಯ ನಿರ್ಮಾಣ, ಶುದ್ಧ ಕುಡಿಯುವ ನೀರು ಪೂರೈಕೆ, ಬಡವರಿಗಾಗಿ 900ಕ್ಕೂ ಹೆಚ್ಚು ಆಶ್ರಯ ಮನೆಗಳನ್ನು ಕಲ್ಪಿಸಿಕೊಟ್ಟಿದ್ದಾರೆ.

ಯುವ ಸಂಘಟನೆ ಅಧ್ಯಕ್ಷ : 1993ರಿಂದ ಸುಮಾರು 25 ವರ್ಷಗಳ ಕಾಲ ಲಕ್ಷ್ಮಿ ವೆಂಕಟೇಶ್ವರ ಯುವಕ ಸಂಘದ ಅಧ್ಯಕ್ಷರಾಗಿ ಗ್ರಾಮೀಣ ಕ್ರೀಡೆ ಬೆಳೆಸುವ ಜತೆಗೆ ಕ್ರೀಡಾಪಟುಗಳಿಗೆ ಪೊÅàತ್ಸಾಹ ನೀಡಿದ್ದಾರೆ. ಜಾಳಿಹಾಳದ ಲಕ್ಷ್ಮೀ ವೆಂಕಟೇಶ್ವರ ಜಾತ್ರೆ ಅಂಗವಾಗಿ ಸಾಮೂಹಿಕ ಮದುವೆಗಳನ್ನು ಮಾಡಿಸಿದ್ದಾರೆ. ಶ್ರೀ ಸಿದ್ಧೇಶ್ವರ ಪತ್ತಿನ ಸಹಕಾರಿ ಸಂಘದಿಂದ 50 ಜನರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿದ ಶಾಂತಗೌಡರು ರಾಜಕೀಯದಲ್ಲಿ ಇನ್ನೂ ಹೆಚ್ಚಿನ ಹುದ್ದೆಗಳನ್ನು ಅಲಂಕರಿಸಲಿ ಎಂಬುದು ಜಾಲಿಹಾಳ ಗ್ರಾಮಸ್ಥರ ಆಶಯವಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ: ಶಿಕ್ಷಣ ಪ್ರೇಮಿಯಾಗಿರುವ ಶಾಂತಗೌಡರು ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡಬೇಕೆಂಬ ಉದ್ದೇಶದಿಂದ ಧಾರವಾಡದ ಸಂಕಲ್ಪ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ಬಾದಾಮಿ ತಾಲೂಕಿನ 100 ವಿದ್ಯಾರ್ಥಿಗಳಿಗೆ ವಸತಿ ಸಹಿತ ಉಚಿತ ತರಬೇತಿ ನೀಡಿದ್ದಾರೆ.
ಒಟ್ಟಾರೆ, ಶಾಂತ ಸ್ವಭಾವದ ಶಾಂತಗೌಡರೆಂದರೆ ಬಿಜೆಪಿಯ ಎಲ್ಲಾ ಹಂತದ ನಾಯಕರಿಗೆ ಅಚ್ಚುಮೆಚ್ಚು. ಅವರ ಅವಧಿಯಲ್ಲಿ ಜಿಲ್ಲಾ ಕೇಂದ್ರವಾದ ಬಾಗಲಕೋಟೆಯಲ್ಲಿ ಪಕ್ಷ ಭವ್ಯ ಕಟ್ಟಡ ತಲೆ ಎತ್ತಿ ನಿಂತಿರುವುದು ಮತ್ತೂಂದು ಮೈಲಿಗಲ್ಲು.

Advertisement

Udayavani is now on Telegram. Click here to join our channel and stay updated with the latest news.

Next