ಉದ್ಯಮ ಲೋಕದ ದಿಗ್ಗಜ ರತನ್ ಟಾಟಾ ತನ್ನದೇ ಆದ ಭಿನ್ನತೆ, ಸರಳತೆ ಹೊಂದಿರುವ ಮೆಚ್ಚಿನ ವ್ಯಕ್ತಿತ್ವದವರು.ಅವರು ಸೃಜನಶೀಲ ವ್ಯಾಪಾರ ಮನಸ್ಸಿನೊಂದಿಗೆ ನಾಯಿಗಳ ಬಗ್ಗೆ ಅಪಾರ ಪ್ರೀತಿ, ಕಾಳಜಿಯನ್ನು ಹೊಂದಿದ್ದಾರೆ.ಆ ಕಾಳಜಿ ಬಹಿರಂಗ ಗೊಳಿಸಿದ್ದು, 28 ವರ್ಷದ ಯುವಕ. ಶಂತನು ನಾಯ್ಡು ಎಂಬ ಯುವಕ ಉದ್ದಿಮೆ ಲೋಕದ ಹಿರಿಯಜ್ಜ ರತನ್ ಟಾಟಾ ಅವರೊಂದಿಗೆ ಸುತ್ತಾಡುತ್ತಿರುವುದನ್ನು ನೀವು ನೋಡಿರಬಹುದು, ಈ ಬಗ್ಗೆ ಹೇಳಲು ಒಂದು ಆಸಕ್ತಿದಾಯಕ ಕಥೆಯಿದೆ.
ಯಾರಿವರು ಶಂತನು?
ಶಂತನು ಐದನೇ ತಲೆಮಾರಿನ ಟಾಟಾ ಉದ್ಯೋಗಿಯಾಗಿದ್ದು, ಅವರ ಕುಟುಂಬವು ಟಾಟಾ ಬ್ರಾಂಡ್‌ನೊಂದಿಗೆ ಸುದೀರ್ಘ ವೃತ್ತಿಪರ ಸಂಬಂಧವನ್ನು ಹೊಂದಿದ್ದರೂ, ರತನ್ ಟಾಟಾ ಅವರೊಂದಿಗೆ ವೈಯಕ್ತಿಕವಾಗಿ ನಿಕಟವಾಗಿ ಕೆಲಸ ಮಾಡುವ ಮೊದಲಿಗರಾಗಿದ್ದಾರೆ. ಅವರು ಪುಣೆ ವಿಶ್ವವಿದ್ಯಾನಿಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಟಾಟಾ ಎಲ್ಕ್ಸಿಯಲ್ಲಿ ಜೂನಿಯರ್ ಡಿಸೈನ್ ಎಂಜಿನಿಯರ್ ಆಗಿ ಸೇರಿದರು.
ಶಂತನು ತನ್ನ ಜೀವನದಲ್ಲಿ, ಕ್ರಾಂತಿಯನ್ನುಂಟುಮಾಡುವ ಸಂಸ್ಥೆಯಾದ ಮೋಟೋಪಾಸ್‌ನ ಕಲ್ಪನೆಯೊಂದಿಗೆ ಬಂದಿದ್ದರು. ಜೂನಿಯರ್ ಇಂಜಿನಿಯರ್ ಆಗಿ, ಅವರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಬೇಕಾಗಿತ್ತು. ಈ ವೇಳೆ ಬೀದಿಯಲ್ಲಿ ನಾಯಿಗಳು ಕಾರುಗಳಿಗೆ ಅಡ್ಡಲಾಗಿ ಸಿಲುಕಿ ದಾರುಣವಾಗಿ ಸಾಯುವುದನ್ನು ನೋಡಿ ಮಮ್ಮಲ ಮರುಗಿದರು. ಇದು ಏಕೆ ಹೆಚ್ಚಾಗಿ ನಡೆಯುತ್ತಿದೆ ಎಂದು ಅವರು ಲೆಕ್ಕಾಚಾರ ಮಾಡಲು ಪ್ರಯತ್ನಿಸಿ, ಸುತ್ತ ಮುತ್ತಲಿನ 80-100 ಸಾಮಾನ್ಯ ಚಾಲಕರನ್ನು ಸಂದರ್ಶಿಸಿದರು. ಇದು ಹೇಗೆ ಸಂಭವಿಸುತ್ತಿದೆ ಎಂದು ಶಂತನು ಕಂಡುಹಿಡಿದರು,ವಿಚಾರವೆಂದರೆ ರಾತ್ರಿಯಲ್ಲಿ ಮನುಷ್ಯರು ನಾಯಿಗಳನ್ನು ಗಮನಿಸುವುದೇ ಇಲ್ಲ.
ಶಂತನು ನಾಯಿಗಳನ್ನು ರಕ್ಷಿಸುವ ಸಲುವಾಗಿ ದೂರದಿಂದ ಗೋಚರಿಸುವಂತೆ ‘ಗ್ಲೋ-ಇನ್-ದ-ಡಾರ್ಕ್’ ಕಾಲರ್‌ಗಳನ್ನು ನಿರ್ಮಿಸಲು ಬಯಸಿದರು ಮತ್ತು ತನ್ನ ಪ್ರಯತ್ನವನ್ನು ಮುಂದುವರಿಸಲು ಲಾಭೋದ್ದೇಶವಿಲ್ಲದ ಮೋಟೋಪಾವ್‌ಗಳನ್ನು ರಚಿಸಿದರು.
ಈ ಪ್ರಯತ್ನವು ಜನಪ್ರಿಯತೆಯಲ್ಲಿ ಮುಂದುವರಿಯುತ್ತಿದ್ದಂತೆ, ಟಾಟಾ ಕಂಪನಿಯ ಸುದ್ದಿಪತ್ರದಲ್ಲಿ ಕಾಣಿಸಿಕೊಂಡಿತು, ಶಂತನು ಅವರಿಗೆ ಇನ್ನೊಬ್ಬ ಶ್ವಾನಗಳ ಪ್ರೇಮಿಯಾಗಿರುವ ರತನ್ ಟಾಟಾ ಅವರು ವೈಯಕ್ತಿಕ ಆಹ್ವಾನವನ್ನು ನೀಡಿದರು.
ವರ್ಷಗಳಲ್ಲಿ, ಇಬ್ಬರೂ ನಿಕಟ ಸಂಪರ್ಕವನ್ನು ಬೆಳೆಸಿಕೊಂಡರು. ಶಂತನು ಆವರ ಪ್ರಭಾವವು ರತನ್ ಟಾಟಾ ಅವರಿಗೆ ಸಾಮಾಜಿಕ ಮಾಧ್ಯಮದ ಸಂವೇದನೆಯಾಗಲು ಸಹಾಯ ಮಾಡಿತು! ಸಕ್ರಿಯ ಇನ್ ಸ್ಟಾಗ್ರಾಮ್ ಖಾತೆಯನ್ನು ಹೊಂದಿರುವ 84 ವರ್ಷ ಪ್ರಾಯದ ಸಿಇಒಗಳಲ್ಲಿ ಟಾಟಾ ಒಬ್ಬರು.
ಶಂತನು ಇತ್ತೀಚಿನ ಟ್ರೆಂಡ್‌ಗಳು, ಪರಿಭಾಷೆಗಳು, ಎಮೋಜಿಗಳು ಮತ್ತು ಹ್ಯಾಶ್‌ಟ್ಯಾಗ್‌ಗಳು ಸೇರಿದಂತೆ ಸಾಮಾಜಿಕ ಮಾಧ್ಯಮದ ಬಗ್ಗೆ ರತನ್ ಟಾಟಾ ಅವರಿಗೆ ಎಲ್ಲವನ್ನೂ ಕಲಿಸಿದರು. ರತನ್ ಟಾಟಾ ಅವರ ಟ್ವಿಟರ್ ಹ್ಯಾಂಡಲ್ ಪ್ರಸ್ತುತ 5 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿದೆ.
ಶಂತನು ಅವರ ಪುಸ್ತಕ, ‘ಐ ಕ್ಯಾಮ್ ಅಪಾನ್ ಎ ಲೈಟ್‌ಹೌಸ್: ಎ ಶಾರ್ಟ್ ಮೆಮೊಯಿರ್ ಆಫ್ ಲೈಫ್ ವಿತ್ ರತನ್ ಟಾಟಾ’ ಕಳೆದ ವರ್ಷ ಬಿಡುಗಡೆಯಾಯಿಗಿತ್ತು. ನಾಯ್ಡು ಮತ್ತು ಬಿಲಿಯನೇರ್ ರತನ್ ಟಾಟಾ ನಡುವಿನ ಸಂಬಂಧವನ್ನು ವಿವರಿಸುತ್ತದೆ.