ಕೆಜಿಎಫ್: ಬಂಗಾರಪೇಟೆಯಲ್ಲಿ ಷಣ್ಮುಗಂ ಟ್ರೇಡರ್ ಮತ್ತು ರೈಸ್‌ಮಿಲ್ನಿಂದ ಹಣ ಕಳೆದುಕೊಂಡ ನೂರಾರು ಹೂಡಿಕೆದಾರರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್.ಮಹಮದ್ ಸುಜೀತ ಮತ್ತು ಡಿವೈಎಸ್ಪಿ ಬಿ.ಎಲ್.ಶ್ರೀನಿವಾಸಮೂರ್ತಿ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದರು.
ವಾಪಸ್ ಕೊಡಿಸಿ:ವಂಚಕ ಷಣ್ಮುಗಂ ನೂರಾ ರು ಮಂದಿಯ ಮನೆ ಹಾಳು ಮಾಡಿದ್ದಾನೆ. 5 ಸಾವಿರಕ್ಕೂ ಹೆಚ್ಚು ಕೋಟಿ ರೂ. ಹಣ ದುರುಪಯೋಗ ಮಾಡಿಕೊಂಡಿದ್ದಾನೆ. ಈತನ ವಂಚನೆಯಿಂದ ಹಲವಾರು ಮಂದಿ ಈಗಾಗಲೇ ನೊಂದು ಪ್ರಾಣ ತ್ಯಜಿಸಿದ್ದಾರೆ. ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದ್ದಾರೆ. ಜಿಲ್ಲಾ ಪೊಲೀಸ ವರಿಷ್ಠಾ ಧಿಕಾರಿಗಳ ಮೇಲೆ ನಂಬಿಕೆ ಇಟ್ಟು ಬಂದಿ ದ್ದೇವೆ. ನಮಗೆ ನ್ಯಾಯ ಕೊಡಿಸಿ. ನಮ್ಮ ಹಣ ವಾಪಸ್ ಕೊಡಿಸಿ ಎಂದರು.
ಹಣ ಕೇಳಲು ಹೋದರೆ ಷಣ್ಮುಗಂ ಬೆದ ರಿಕೆ ಹಾಕುತ್ತಾರೆ. ಹಣ ಕೊಡಲು ಆಗುವು ದಿಲ್ಲ. ಏನು ಮಾಡಿಕೊಳ್ಳುತ್ತೀರೋ ಮಾಡಿ ಕೊಳ್ಳಿ ಎಂದು ದಬಾಯಿಸುತ್ತಿದ್ದಾರೆ. ಜೀವನ ವಿಡೀ ಸಂಪಾದನೆ ಮಾಡಿದ ಹಣವನ್ನೆಲ್ಲಾ ಆತನ ಮಡಿಲಿಗೆ ಹಾಕಿದ್ದೇವೆ. ಜೀವನ ಮಾಡುವುದು ಕಷ್ಟವಾಗಿದೆ ಎಂದು ಹಲವಾರು ಕಣ್ಣೀರಿಟ್ಟರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಎಸ್.ಮಹಮದ್ ಸುಜೀತ, ಹಣ ಕಳೆದು ಕೊಂಡವರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸ ಲಾಗುತ್ತದೆ. ಘಟನೆ ಬಗ್ಗೆಯೂ ವಿವರ ಕಲೆ ಹಾಕಲಾಗುವುದು. ದೂರುದಾರರ ಅನು ಕೂಲಕ್ಕಾಗಿ ವಿಶೇಷ ತನಿಖಾಧಿಕಾರಿಯನ್ನು ನೇಮಕ ಮಾಡಲಾಗುವುದು. ಸರ್ಕಲ್ ಇನ್ಸ್ ಪೆಕ್ಟರ್ ಆಂಜಪ್ಪ ತನಿಖಾಧಿಕಾರಿಯಾಗಿರುತ್ತಾರೆ ಎಂದು ಹೇಳಿದರು.
ಡಿವೈಎಸ್ಪಿ ಬಿ.ಎಲ್.ಶ್ರೀನಿವಾಸಮೂರ್ತಿ, ಎಲ್ಲರೂ ಪ್ರತ್ಯೇಕವಾಗಿ ದೂರು ಕೊಡಿ. ಹಣಇಟ್ಟ ಬಗ್ಗೆ ದಾಖಲೆ ಕೊಡಿ. ವಂಚಕನ ವಿರುದ್ಧ ಖಂಡಿತವಾಗಿಯೂ ಎಫ್ ಐಆರ್ ಹಾಕುತ್ತೇವೆ. ಹೂಡಿಕೆದಾರರಿಗೆ ಪೊಲೀಸ್ ರಕ್ಷಣೆ ಕೊಡುತ್ತೇವೆಂದು ತಿಳಿಸಿದರು.