Advertisement
ಕೋಟತಟ್ಟು ಸೀಲ್ಡೌನ್ಕೋಟ: ಸಮೀಪ ಕೋಟತಟ್ಟುವಿನ ನಿವಾಸಿ ಮಹಿಳಾ ಕಾನ್‌ಸ್ಟೆಬಲ್‌ಗೆ ಕೋವಿಡ್ ಬಾಧಿಸಿರುವ ಹಿನ್ನೆಲೆಯಲ್ಲಿ ಅವರ ಮನೆಯ ಪರಿಸರದ 50 ಮೀಟರ್ ವ್ಯಾಪ್ತಿಯ ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ ಹಾಗೂ ಸ್ಥಳೀಯರಿಗೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.
ಕುಂದಾಪುರ: ಕ್ವಾರಂಟೈನ್ ಅವಧಿ ಮುಗಿದು ಗಂಟಲ ದ್ರವ ಪರೀಕ್ಷಾ ವರದಿ ಬರುವ ಮುನ್ನವೇ ಮನೆಗೆ ಮರಳಿದ ಕೆಲವರಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಆ ಮನೆಗಳ ಸುಮಾರು 200 ಮೀ. ಪ್ರದೇಶವನ್ನು ಸೀಲ್‌ಡೌನ್ ಮಾಡುವ ಕ್ರಮ ಸೋಮವಾರವೂ ಮುಂದುವರಿದಿದೆ. ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಚುಂಗಿಗುಡ್ಡೆ, ಆಲೂರು ಪಂಚಾ ಯತ್ ವ್ಯಾಪ್ತಿಯ ಸೆಳಕೋಡು, ಹರ್ಕೂರು, ದೊಂಬೆ ಶಿರೂರು, ಯಡ್ತರೆ, ಕೆರ್ಗಾಲ್ ಗ್ರಾಮಗಳಲ್ಲಿನ ಒಟ್ಟು 6 ಕಡೆಗಳಲ್ಲಿ ಒಟ್ಟು 15 ಪ್ರಕರಣಗಳು ಕಂಡು ಬಂದಿದ್ದು ಕಂಟೈನ್ಮೆಂಟ್ ಝೋನ್ ಎಂದು ಸೀಲ್‌ಡೌನ್ ಮಾಡಲಾಗಿದೆ. ಶಂಕರನಾರಾಯಣ ಠಾಣೆಗೆ ಸೋಂಕಿತರೊಬ್ಬರು ಭೇಟಿ ನೀಡಿದ್ದಾರೆ ಎಂಬ ಸಂಶಯದ ಹಿನ್ನೆಲೆಯಲ್ಲಿ ಠಾಣೆಯನ್ನು ಸ್ಯಾನಿಟೈಸೇಶನ್ ಮಾಡಲಾಗಿದೆ.