ನಾಗ್ಪುರ : ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ರಕ್ಷಿಸಲು ಮತ್ತು ಅಖಂಡ ಭಾರತದ ಸಿದ್ಧಾಂತ ವಿಚಾರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಖ್ಯಾತ ಗಾಯಕ-ಸಂಯೋಜಕ ಶಂಕರ್ ಮಹಾದೇವನ್ ಅವರು ಮಂಗಳವಾರ ಶ್ಲಾಘಿಸಿದ್ದಾರೆ.
ನಾಗ್ಪುರದ ರೇಶಿಂಬಾಗ್ ನಲ್ಲಿ ಆರ್‌ಎಸ್‌ಎಸ್ ಆಯೋಜಿಸಿದ್ದ ವಾರ್ಷಿಕ ವಿಜಯದಶಮಿ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾದ ಶಂಕರ್ ಮಹಾದೇವನ್ ಮಾತನಾಡಿ, ದೇಶಕ್ಕಾಗಿ ತಾವು ಮಾಡಿರುವ ಕೆಲಸಗಳಿಗೆ ಸಂಘದಿಂದ ಆಶೀರ್ವಾದ ತೆಗೆದುಕೊಳ್ಳಬಹುದು.
“ಸಂಘದ ಬಗ್ಗೆ ನಾನು ಏನು ಹೇಳಬಲ್ಲೆ? ನಾನು ನಿಮಗೆ ನಮಸ್ಕರಿಸಬಲ್ಲೆ. ಅಖಂಡ ಭಾರತದ ಸಿದ್ಧಾಂತ, ನಮ್ಮ ಸಂಪ್ರದಾಯಗಳು, ನಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ಆರ್‌ಎಸ್‌ಎಸ್ ಕೊಡುಗೆ ಎಲ್ಲರಿಗಿಂತ ದೊಡ್ಡದಾಗಿದೆ ಎಂದರು.
ಜ್ಞಾನ ದೇವತೆ ಸರಸ್ವತಿ ವಂದನೆಯ ನಿರೂಪಣೆಯೊಂದಿಗೆ ತಮ್ಮ ಭಾಷಣವನ್ನು ಪ್ರಾರಂಭಿಸಿ ‘ಓಂ ಅಸತೋಮ ಸದ್ಗಮಯ’ ಎಂಬ ಮಂತ್ರ ಪಠಿಸಿ ಇದು ವಿಶ್ವ ಶಾಂತಿಯ ಮಂತ್ರ ಎಂದರು.ಪ್ರತಿಯೊಬ್ಬ ಮನುಷ್ಯನ ಶಾಂತಿಗಾಗಿ ಪ್ರಾರ್ಥನೆ. ಇದು ನಮ್ಮ ದೇಶದ ಮಂತ್ರವಾಗಿದೆ”ಎಂದರು.
ಮುಂಬೈನಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೊಂದಿಗಿನ ಭೇಟಿಯನ್ನು ನೆನಪಿಸಿಕೊಂಡು, ಇದು ಒಂದು ಸಾರ್ಥಕ ಅನುಭವ ಮತ್ತು ಆತ್ಮೀಯ ಆಹ್ವಾನಕ್ಕೆ ಕೃತಜ್ಞತೆ ಸಲ್ಲಿಸಿ, ನಾನು ಅದೃಷ್ಟಶಾಲಿಯಾಗಿದ್ದೇನೆ. ಆಹ್ವಾನವು ವೈಯಕ್ತಿಕವಾಗಿತ್ತು, ಬಹಳಷ್ಟು ಪ್ರೀತಿಯಿಂದ ಸ್ವಾಗತಿಸಲಾಗಿದೆ ಎಂದರು.
ನಾಗ್ಪುರದಲ್ಲಿರುವ ಆರ್‌ಎಸ್‌ಎಸ್ ಸಂಸ್ಥಾಪಕ ಡಾ.ಕೆ.ಬಿ.ಹೆಡಗೇವಾರ್ ಅವರ ಸ್ಮಾರಕವಾದ ಹೆಡಗೇವಾರ್ ಸ್ಮೃತಿ ಮಂದಿರಕ್ಕೆ ಭೇಟಿ ನೀಡಿದರು, ಸಂಘದ ದಸರಾ ಕಾರ್ಯಕ್ರಮ ಮತ್ತು ಅದನ್ನು ಆಯೋಜಿಸಿರುವ ಸಮನ್ವಯವನ್ನು ಶ್ಲಾಘಿಸಿ, “ನಾನು ಇಂದು ಭಾರತೀಯ ಪ್ರಜೆ ಆಗಿರುವುದಕ್ಕೆ ಹೆಚ್ಚು ಹೆಮ್ಮೆಪಡುತ್ತೇನೆ” ಎಂದರು.