Advertisement

ವಿಜೃಂಭಣೆಯ ಶನೈಶ್ಚರ ಸ್ವಾಮಿ ಜಾತ್ರೆ

09:05 PM Jun 03, 2019 | Team Udayavani |

ಆನೇಕಲ್‌: ತಾಲೂಕಿನ ಬಂಡಾಪುರ ಗ್ರಾಮದಲ್ಲಿ ಪುರಾತನ ಕಾಲದಿಂದ ನೆಲೆಸಿರುವ ಶ್ರೀ ಶನೈಶ್ಚರ ಸ್ವಾಮಿಯ ಜಾತ್ರಾ ಮಹೋತ್ಸವ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.

Advertisement

ಬಂಡಾಪುರ ಗ್ರಾಮವು ಆಚಾರ ವಿಚಾರ ದೈವತ್ವದ ಧಾರ್ಮಿಕತೆಯಲ್ಲಿ ಹೆಸರಾದ ಒಂದು ಪುಣ್ಯ ಕ್ಷೇತ್ರವಾಗಿದೆ. ಬಂಡಾಪುರ ಗ್ರಾಮದಲ್ಲಿ ಒಟ್ಟು ನಾಲ್ಕು ದೇವಾಲಯಗಳಿದೆ ಆದರೆ ಇಲ್ಲಿ ಅತಿ ಆಶ್ಚರ್ಯಕರವಾದ ಒಂದು ಅಪರೂಪದ ಆಕರ್ಷಣೀಯ ಸಂಗತಿ ಎಂದರೆ ಶನಿ ಮಹಾತ್ಮ ಮೂರ್ತಿ ಇದೆ, ಇಡೀ ಕರ್ನಾಟಕ ರಾಜ್ಯದಲ್ಲಿಯೇ ಎಲ್ಲಿಯೂ ನಿಂತ ನಿಲುವಿನ ಶನಿ ಮಹಾತ್ಮ ಸ್ವಾಮಿಯ ಮೂರ್ತಿಯನ್ನು ಕಾಣಲು ಸಾಧ್ಯವಿಲ್ಲ.

ಸ್ವಾಮಿಯು ಸಾಕ್ಷಾತ್‌ ನೀಲವರ್ಣ ರೂಪದಲ್ಲಿ ನಿಂತು ಪ್ರತಿನಿತ್ಯಾ ಜನರ ಸಮಸ್ಯೆಗಳನ್ನ ಬಗೆಹರಿಸುತ್ತಾ ರಾಜ್ಯ ಹಾಗೂ ಹೊರರಾಜ್ಯದ ಅಪಾರವಾದ ಭಕ್ತ ಸಮ್ಮೂಹವನ್ನು ಹೊಂದಿರುವುದು ಈ ಜಾತ್ರಾ ಮಹೋತ್ಸವು ಸಾಕ್ಷಿಯಾಗಿದೆ.

ಜಾತ್ರಾ ಮಹೋತ್ಸವ ಅಂಗವಾಗಿ ಭಕ್ತಾದಿಗಳು ಹಣ್ಣು ಹೂವು, ನವಧಾನ್ಯಗಳು, ತುಳಸಿ, ಎಳ್ಳುಬತ್ತಿ ಹಾಗೂ ಕುಂಬಳಕಾಯಿಯನ್ನ ಅರ್ಚಕರಿಗೆ ಧಾನಮಾಡುವುದು ಬಹಳ ಶಿಷ್ಟವಾಗಿದೆ. ಶನೈಶ್ಚರ ಸ್ವಾಮಿಯು ದೇವಾಲಯದ ಪ್ರಧಾನ ಅರ್ಚಕರಾದ ಮಾಂಕಾಳಪ್ಪ ಸ್ವಾಮಿಗಳ ಮೈಮೇಲೆ ಬಂದು ಭಕ್ತರ ಸಮಸ್ಯೆಗಳಿಗೆ ಪರಿಹಾರ ನೀಡಿರುವ ಸಾಕ್ಷಿ ಗುಂಡೆಗಳನ್ನು ಕಾಣಬಹುದಾಗಿದೆ.

ಶ್ರೀ ಶನೈಶ್ಚರ ಸ್ವಾಮಿಯ ದೇವಾಲಯದ ಪ್ರಧಾನ ಅರ್ಚಕ ಮಾಂಕಾಳಪ್ಪ ಸ್ವಾಮಿಗಳು ಸುದ್ದಿಗಾರರೊಂದಿಗೆ ಮಾತನಾಡಿ, ಸಮಾಜದಲ್ಲಿ ಯಾರು ಅಹಂಕಾರ ಮತ್ತು ದೌರ್ಜನ್ಯಗಳನ್ನ ಮಾಡುತ್ತಾ ಸಮಾಜಕ್ಕೆ ಕೆಡುಕನ್ನು ಬಯಸುತ್ತಾರೆ ಅಂಥವರ ರಾಶಿ ಫ‌ಲದ ಮೇಲೆ ಶನಿ ಅಂಟಿಕೊಂಡು ಆತನಿಗೆ ಬುದ್ಧಿ ಕಲಿಸುವುದೇ ಸ್ವಾಮಿಯ ಕೆಲಸವಾಗಿದ್ದು,

Advertisement

ಶನೈಶ್ಚರ ಜಾತ್ರಾ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಲಕ್ಷ ದೀಪೋತ್ಸವ, ರಸಮಂಜರಿ ಹಾಗೂ ಗ್ರಾಮ ದೇವತೆಗಳ ಪಲ್ಲಕ್ಕಿ ಮತ್ತು ದ್ರೌಪದಮ್ಮ ದೇವಿಯ ಕರಗ ಮಹೋತ್ಸವ ಸಡಗರ ಸಂಭ್ರಮದಿಂದ ನಡೆಯಿತು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next