ಮುಂಬಯಿ: ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಫೋರ್ಟ್ ಇದರ 74ನೇ ವಾರ್ಷಿಕ ಮಹಾಪೂಜೆ ನಲಸೊಪರ ಪಶ್ಚಿಮದ ಶ್ರೀ ಪ್ರಸ್ಥ ಕಾಂಪ್ಲೆಕ್ಸ್ ಎದುರಿನ ಶ್ರೀಪ್ರಸ್ಥ ಶನಿತೀರ್ಥ ಸ್ಥಳದಲ್ಲಿ ಜ. 13ರಂದು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ನೆರವೇರಿತು.
ಧಾರ್ಮಿಕ ಕಾರ್ಯಕ್ರಮವಾಗಿ ಮುಂಜಾನೆ 8 ರಿಂದ ಗಣಹೋಮ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ದುರ್ಗಾಹೋಮ, ನವಗ್ರಹ ಶಾಂತಿ, ಆಶ್ಲೇಷ ಬಲಿ ಮೊದಲಾದ ಕಾರ್ಯಕ್ರಮ ಜರಗಿತು. ಅಪರಾಹ್ನ ಮೀರಾರೋಡ್ ಶ್ರೀ ಲಕ್ಷ್ಮೀನಾರಾಯಣ ಭಜನ ಮಂಡಳಿಯವರಿಂದ ಭಜನೆ, ಸಂಜೆ 6ರಿಂದ ಉಮೇಶ್ ಮೆಂಡನ್ ಮತ್ತು ಅರ್ಚಕ ವೃಂದದ ಪೌರೋಹಿತ್ಯದಲ್ಲಿ ಕಲಶ ಪ್ರತಿಷ್ಠಾಪನೆಗೊಂಡಿತು.
ಅಹೋರಾತ್ರಿ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಸದಸ್ಯರಿಂದ ಗ್ರಂಥ ಪಾರಾಯಣ ನಡೆಯಿತು. ಪದಾಧಿಕಾರಿಗಳಾದ ಉಮೇಶ್ ಮೆಂಡನ್, ವರದರಾಜ ಶೆಟ್ಟಿ, ಸುಂದರ ಬೆಳ್ಚಡ, ಮಹಾಲಿಂಗ ಗಾಣಿಗ, ರಮೇಶ್ ಕೊಠರಿ, ವಸಂತ್ ಶೆಟ್ಟಿ, ದೇವರಾಜ್ ರಾವ್, ರಮೇಶ್ ಪೂಜಾರಿ, ಶ್ರೀನಿವಾಸ ಆಳ್ವ, ನಂದಕುಮಾರ್ ಕುಂಬ್ಳೆ, ಭಾಸ್ಕರ ಬಂಗೇರ, ರಘು ಪುತ್ರನ್, ಸಂಜೀವ ಸಾಲ್ಯಾನ್, ರಾಮಗೊಂಡ, ಸುನೀಲ್ ಶೆಟ್ಟಿ, ಜಯ ಪೂಜಾರಿ, ಸದಾಶಿವ ಕೋಟ್ಯಾನ್, ಸದಾನಂದ ಪೂಜಾರಿ, ಸಂತೋಷ್ ಪೂಜಾರಿ, ಮಹಿಳಾ ವಿಭಾಗದ ಶಕುಂತಳಾ ಮೆಂಡನ್, ಶಕುಂತಳಾ ಶೆಟ್ಟಿ, ಗಿರಿಜಾ ಗಾಣಿಗ, ಸುಜಾತಾ ಪುತ್ರನ್, ಸುಜಾತಾ ಶೆಟ್ಟಿ, ಭವಾನಿ ಕರ್ಕೇರ, ಜಯಂತಿ ಪುತ್ರನ್, ದಯಾಮಂತಿ ಕುಂಬ್ಳೆ, ಮಲ್ಲಿಕಾ ಪೂಜಾರಿ, ಸುಮಿತ್ರಾ ಶೆಟ್ಟಿ, ತಿಲೋತ್ತಮ ಅಮೀನ್, ಸುಮನ್ ಬಂಗೇರ, ಪ್ರೇಮಾ ಶೆಟ್ಟಿ, ರತಿ ಶೆಟ್ಟಿ ಮೊದಲಾದವರು ಸಹಕರಿಸಿದರು.
ಶಾಸಕ ಹಿತೇಂದ್ರ ಠಾಕೂರ್, ಮೇಯರ್ ರೂಪೇಶ್ ಜಾಧವ್, ನಗರ ಸೇವಕರಾದ ರಾಜು ರಾಧೆ, ರಾಜು ದಾಘೆ, ಕಿಶೋರ್ ಪಾಟೀಲ್, ಅತುಲ್ ಸೋಳಂಕೆ, ಭುಪೇಂದ್ರ ಪಾಟೀಲ್, ನಿಲೇಶ್ ದೇಶ್‌ಮುಖ್, ನಗರ ಸೇವಕಿ ಶುಭಾಂಗಿ ಗಾಯಕ್ವಾಡ್, ಉಮೇಶ್ ನಾಯಕ್, ಶಶಿಧರ ಕೆ. ಶೆಟ್ಟಿ, ಹರೀಶ್ ಶೆಟ್ಟಿ, ಅಶೋಕ್ ಶೆಟ್ಟಿ, ಸದಾಶಿವ ಕರ್ಕೇರ, ಪ್ರವೀಣ್ ಕಣಂಜಾರು, ಲಯನ್ ಶಂಕರ್ ಕೆ. ಟಿ., ಪುರಂದರ ಸಾಲ್ಯಾನ್, ದಯಾನಂದ ಶೆಟ್ಟಿ, ಮೋಹನ್ ಬಿ. ಶೆಟ್ಟಿ, ನಿತ್ಯಾನಂದ ಶೆಟ್ಟಿ, ಜಯಂತ್ ಪಕ್ಕಳ, ಪ್ರವೀಣ್ ಶೆಟ್ಟಿ, ಜಯ ಶೆಟ್ಟಿ ವಸಾಯಿ, ವಿಜು ರಾಣೆ, ದೇವೇಂದ್ರ ಬುನ್ನನ್, ಮೋಹನ್ ಬಂಜನ್ ಮತ್ತಿತರ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಸಹಸ್ರಾರು ಮಂದಿ ಪೂಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಮಧ್ಯ ರಾತ್ರಿವರೆಗೂ ಜರಗಿದ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು. ಪರಿಸರದ ಹೊಟೇಲ್ ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ವಿವಿಧ ಸಮುದಾಯಗಳ ಪ್ರತಿನಿಧಿಗಳು, ತುಳು- ಕನ್ನಡಿಗರು, ಕನ್ನಡೇತರರು, ವಿವಿಧ ರಾಜಕೀಯ ಮುಖಂಡರು, ಮಹಿಳೆಯರು ಉಪಸ್ಥಿತರಿದ್ದು ಧಾರ್ಮಿಕ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
1944 ರಲ್ಲಿ ಕೆಲವು ಯುವಕರಿಂದ ಸ್ಥಾಪನೆಗೊಂಡ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯು ಆಧ್ಯಾತ್ಮಿಕ ಚಿಂತನೆಯೊಂದಿಗೆ, ಸಾಮಾಜಿಕ ಕಳಕಳಿಯೊಂದಿಗೆ ಬೆಳೆದು ನಿಂತಿದೆ. ನಲಸೋಪರದ ಶನಿ ದೇವರ ಮಂದಿರದಲ್ಲಿ ದುರ್ಗಾಮಾತೆ, ಗಣಪತಿಯ ಗುಡಿಯನ್ನು ಹೊಂದಿದೆ. ದೇವಸ್ಥಾನದ ಕಾಮಗಾರಿ ಆಕರ್ಷಕ ಶಿಲ್ಪ ಕೆತ್ತನೆಯೊಂದಿಗೆ ರೂಪುಗೊಳ್ಳುತ್ತಿದೆ. ಇದು ನೆರವೇರಲು ಭಕ್ತರ ಸಹಕಾರ ಅತ್ಯಗತ್ಯವಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಲಾಯಿತು.
ಚಿತ್ರ-ವರದಿ:ರಮೇಶ್ ಅಮೀನ್