ಮುಂಬಯಿ: ಕಲಿಯು ಗದ ಆರಾಧ್ಯ ದೇವರು, ಕಷ್ಟ ಕಾರ್ಪಣ್ಯಗಳಿಂದ ಬಳಲಿದ ಜನತೆಗೆ ಕರುಣಾದೃಷ್ಟಿಯ ಶ್ರೀರಕ್ಷೆಯನ್ನಿತ್ತು ರಕ್ಷಿಸುವ ದಯಾಮಯಿ ಎಂದೆ ಕರೆಯಲ್ಪಡುವ ಶ್ರೀ ಶನೀಶ್ವರ ದೇವರ ಆರಾಧಕರಾಗಿ ಉಪನಗರ ಖಾರ್ ಪೂರ್ವದ ಜವಾಹರ್‌ನಗರ್‌ನ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ಫೆ. 17 ರಂದು ಸಮಿತಿಯ 51 ನೇ ವಾರ್ಷಿಕ ಪೂಜೋತ್ಸವ ನಡೆಯಿತು.
ಸಮಿತಿಯ ಅಧ್ಯಕ್ಷ ಶಂಕರ್ ಕೆ. ಸುವರ್ಣ ದೀಪ ಪ್ರಜ್ವಲಿಸಿ ವಾರ್ಷಿಕ ಮಹೋತ್ಸವಕ್ಕೆ ಚಾಲನೆಯನ್ನಿತ್ತರು. ಸಾಯಿಬಾಬಾ ರಸ್ತೆಯ ಜವಾಹರ್ ನಗರ್‌ನ ಪಹೇಲ್ವಾನ್ ಚಾಳ್‌ನಲ್ಲಿ ಸ್ಥಾನೀಯ ತುಳು-ಕನ್ನಡಿಗ ಭಕ್ತರುಗಳಿಂದ ಸ್ಥಾಪಿಸಿ ಸದ್ಯ ಸ್ಥಳೀಯ ಸಾಯಿಧಾಮ್ ಬಿಲ್ಡಿಂಗ್‌ನಲ್ಲಿ ಪ್ರತಿಷ್ಠಾಪಿತ ಮಂದಿರದಲ್ಲಿ ಗಣಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆ, ಕಲಶ ಪ್ರತಿಷ್ಠೆ, ಭಜನೆ, ಶನೀಶ್ವರ ಗ್ರಂಥ ಪಾರಾಯಣ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಪುರೋಹಿತ ಶ್ರೀನಿವಾಸ ಜೋಯಿಸ ಪೂಜಾಧಿಗಳನ್ನು ನೆರವೇರಿಸಿ ಮಂಗಳಾರತಿಗೈದು ನೆರೆದ ಭಕ್ತರಿಗೆ ಗಂಧ ಪ್ರಸಾದವನ್ನಿತ್ತು ಹರಸಿದರು. ಉಷಾ ಗಣೇಶ್ ಜತ್ತನ್, ಶೋಭಾ ವಸಂತ್ ಸಾಲ್ಯಾನ್ ಮತ್ತು ಪಾರ್ವತಿ ರವಿ ನಾಯ್ಕ ದಂಪತಿಗಳು ಪೂಜಾಧಿಗಳ ಯಜಮಾನತ್ವ ವಹಿಸಿದ್ದು, ಸಾಮೂಹಿಕ ಶನೀಶ್ವರ ಗ್ರಂಥ ಪಾರಾಯಣದಲ್ಲಿ ಪಾಲ್ಗೊಂಡು ಶ್ರೀ ಶನೈàಶ್ವರನ ಕೃಪೆಗೆ ಪಾತ್ರರಾದರು. ತೀರ್ಥ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆಯೊಂದಿಗೆ ವಾರ್ಷಿಕ ಪೂಜೋತ್ಸವ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಸಮಿತಿಯ ಗೌರವ ಅಧ್ಯಕ್ಷ ಶ್ರೀಧರ್ ಜೆ. ಬಂಗೇರ, ಉಪಾಧ್ಯಕ್ಷ ದೇವೇಂದ್ರ ವಿ. ಬಂಗೇರ, ಗೌರವ ಪ್ರಧಾನ ಕಾರ್ಯದರ್ಶಿ ಯೋಗೇಶ್ ಕೆ. ಹೆಜ್ಮಾಡಿ, ಗೌರವ ಕೋಶಾಧಿಕಾರಿ ನಾಗೇಶ್ ಜಿ. ಸುವರ್ಣ, ಕಾರ್ಯಾಧ್ಯಕ್ಷ ಆರ್. ಡಿ. ಕೋಟ್ಯಾನ್, ಉಪ ಕಾರ್ಯಾಧ್ಯಕ್ಷ ಜಯರಾಮ ಶೆಟ್ಟಿ, ಜೊತೆ ಕಾರ್ಯದರ್ಶಿ ರಮೇಶ್ ಎನ್. ಪೂಜಾರಿ, ಜೊತೆ ಕೋಶಾಧಿಕಾರಿ ವಿನೋದ್ ವೈ. ಹೆಜ್ಮಾಡಿ, ಮಹಿಳಾ ಸಮಿತಿ ಮುಖ್ಯಸ್ಥರುಗಳಾದ ಕೇಸರಿ ಬಿ. ಅಮೀನ್ ಮತ್ತು ಶೋಭಾ ವಿ. ಕೋಟ್ಯಾನ್, ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಮಹಿಳಾ, ಯುವ ವಿಭಾಗದ ಕಾರ್ಯಕರ್ತರು, ಸದಸ್ಯರನೇಕರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಸಂಭ್ರಮ
ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಸಂಭ್ರಮವನ್ನು ಫೆ. 19 ರಂದು ಅಪರಾಹ್ನ 3 ಗಂಟೆಯಿಂದ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಸಭಾ ಕಾರ್ಯಕ್ರಮ, ಸಮ್ಮಾನ, ಸಾಂಸ್ಕೃತಿಕ ವೈಭವ, ಗುರುನಾರಾಯಣ ಯಕ್ಷಗಾನ ಮಂಡಳಿ ಸಾಂತಾಕ್ರೂಜ್ ಮೇಳದ “ತುಳುನಾಡ ಸಿರಿ ಮಹಾತೆ¾’ ಯಕ್ಷಗಾನ ಪ್ರದರ್ಶನದೊಂದಿಗೆ ಆಚರಿಸಲಿದೆ ಎಂದು ಸದಸ್ಯರೆಲ್ಲರ ಪರವಾಗಿ ಸಮಿತಿ ಗೌರವ ಪ್ರಧಾನ ಕಾರ್ಯದರ್ಶಿ ಯೋಗೇಶ್ ಹೆಜ್ಮಾಡಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್