Advertisement
ತನ್ನ ಬಾಳ್ವೆಯ 100ನೇ ಮತ್ತು ಇಲ್ಲಿ ಐದನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದ ಜೊಕೋವಿಕ್ ಅವರನ್ನು ಸಿನ್ನರ್ 7-6 (4), 6-3 ಸೆಟ್ಗಳಿಂದ ಉರುಳಿಸಿ ದರು. ಈ ಮೂಲಕ ಅವರು ಎಟಿಪಿ ಟೂರ್ ವರ್ಷಾಂತ್ಯದಲ್ಲಿ ನಂಬರ್ ವನ್ ಸ್ಥಾನವನ್ನು ಉಳಿಸಿಕೊಳ್ಳಲು ಯಶಸ್ವಿಯಾದರು.
Related Articles
ವನಿತೆಯರ ಸಿಂಗಲ್ಸ್ ಫೈನಲ್ನಲ್ಲಿ ಚೀನದ ಝೆಂಗ್ ಕ್ವಿನ್ವೆನ್ ಅವರನ್ನು 6-3, 5-7, 6-3 ಸೆಟ್ಗಳಿಂದ ಸೋಲಿ ಸಿದ ಅರಿನಾ ಸಬಲೆಂಕಾ ಸತತ ಮೂರನೇ ವರ್ಷ ಇಲ್ಲಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು. ಇದು ಈ ಋತುವಿನಲ್ಲಿ ಅವರ ನಾಲ್ಕನೇ ಪ್ರಶಸ್ತಿ ಯಾಗಿದೆ. ಇದರಲ್ಲಿ ಆಸ್ಟ್ರೇಲಿಯನ್ ಮತ್ತು ಯುಎಸ್ ಓಪನ್ ಪ್ರಶಸ್ತಿ ಸೇರಿಕೊಂಡಿದೆ.
Advertisement