Advertisement
ವಿಶ್ವದ 19ನೇ ರ್‍ಯಾಂಕ್ ಆಟಗಾರ್ತಿಯಾಗಿರುವ ಸಿಂಧು 21-17, 21-19 ಅಂತರದಿಂದ ಬುಸಾನನ್ ವಿರುದ್ಧ ಮೇಲುಗೈ ಸಾಧಿಸಿದರು. 50 ನಿಮಿಷಗಳ ಕಾಲ ಇವರ ಹೋರಾಟ ಜಾರಿಯಲ್ಲಿತ್ತು. ಇದು 11ನೇ ರ್‍ಯಾಂಕ್ ಆಟಗಾರ್ತಿ ಬುಸಾನನ್ ಮತ್ತು ಸಿಂಧು ನಡುವಿನ 21ನೇ ಪಂದ್ಯವಾಗಿದೆ. ಒಂದರಲ್ಲಷ್ಟೇ ಸಿಂಧು ಸೋಲನುಭವಿಸಿದ್ದಾರೆ. ಸಿಂಧು ಅವರ ಮುಂದಿನ ಸುತ್ತಿನ ಎದುರಾಳಿ ಸಿಂಗಾಪುರದ ಯೊ ಜಿಯಾ ಮಿನ್. ವನಿತೆಯರ ಮತ್ತೂಂದು ಸಿಂಗಲ್ಸ್ ಪಂದ್ಯದಲ್ಲಿ ಮಾಳವಿಕಾ ಬನ್ಸೋಡ್ ಡೆನ್ಮಾರ್ಕ್‌ನ 21ನೇ ರ್‍ಯಾಂಕ್ ಆಟಗಾರ್ತಿ ಲಿನೆ ಹೋಜ್ಮಾರ್ಕ್ ಜಾರ್ಸ್‌ಫೆಲ್ಟ್ ವಿರುದ್ಧ 20-22, 23-21, 21-16 ಅಂತರದಿಂದ ಗೆದ್ದು ಬಂದರು. ಮಾಳವಿಕಾ ಇನ್ನು ಥಾಯ್ಲೆಂಡ್‌ನ ಸುಪನಿದಾ ಕಟೆಥಾಂಗ್ ವಿರುದ್ಧ ಸೆಣಸಲಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್ ಮಲೇಷ್ಯಾದ ಲೀ ಝಿ ಜಿಯ ಅವರನ್ನು ಮಣಿಸಿ ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ಸ್ಪರ್ಧೆಯಲ್ಲಿ ಅನುಭವಿಸಿದ ಸೋಲಿಗೆ ಪ್ರತೀಕಾರ ತೀರಿಸಿದರು. ಲಕ್ಷ್ಯ ಸೇನ್ ಅವರ ಗೆಲುವಿನ ಅಂತರ 21-14, 13-21, 21-13.