Advertisement

ಕನ್ನಡದಲ್ಲಿ ತೆರೆ ಕಾಣಲಿದೆ ಹಾಲಿವುಡ್ ‘ಶಾಂಗ್-ಚಿ’ ಸಿನಿಮಾ

05:58 PM Aug 20, 2021 | Team Udayavani |

ಇತ್ತೀಚಿಗೆ ಪರಭಾಷೆ ಸಿನಿಮಾಗಳೂ ಕನ್ನಡಕ್ಕೆ ಡಬ್ ಆಗಿ ಬಿಡುಗಡೆ ಕಾಣುತ್ತಿವೆ. ಇದೀಗ ಮತ್ತೊಂದು ಹಾಲಿವುಡ್ ಸಿನಿಮಾ ಕನ್ನಡ ಭಾಷೆಗೆ ಡಬ್ ಆಗಿ ತೆರೆ ಕಾಣಲು ಸಜ್ಜಾಗಿದೆ.

Advertisement

ಪ್ರಸಿದ್ಧ ಸಿನಿಮಾ ನಿರ್ಮಾಣ ಸಂಸ್ಥೆ ಮಾರ್ವೆಲ್ ಸ್ಟುಡಿಯೋಸ್‌ ನಿರ್ಮಿಸಿರುವ ‘ಶಾಂಗ್-ಚಿ’ ಇದೆ ಸೆಪ್ಟೆಂಬರ್ 3 ಬಿಡುಗಡೆಯಾಗಲಿದೆ. ವಿಶೇಷ ಏನಂದರೆ ಈ ಚಿತ್ರ ಕನ್ನಡ ಸೇರಿದಂತೆ ಇಂಗ್ಲಿಷ್, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ತೆರೆ ಕಾಣಲಿದೆ.

ಈ ಸಿನಿಮಾದಲ್ಲಿ ಸಿಮು ಲಿಯು, ಆಕ್ವಾಫಿನಾ, ಮೆಂಗೀರ್ ಜಾಂಗ್, ಫಲಾ ಚೆನ್, ಫ್ಲೋರಿಯನ್ ಮುಂಟೇನು, ಬೆನೆಡಿಕ್ಟ್ ವಾಂಗ್, ಯುಯೆನ್ ವಾ, ರೋನಿ ಚಿಯೆಂಗ್, ಝಾಕ್ ಚೆರ್ರಿ, ಡಲ್ಲಾಸ್ ಲಿಯು, ಮಿಕ್  ಯೋಹ್ ಮತ್ತು ಟೋನಿ ಲೆಯುಂಗ್ ಮುಂತಾದವರು ಅಭಿನಯಿಸಿದ್ದಾರೆ.

ಮಾರ್ವೆಲ್ ಸ್ಟುಡಿಯೋಸ್ ನ “ಶಾಂಗ್-ಚಿ ಮತ್ತು ಲೆಂಡ್ ಲೆಜೆಂಡ್ ಆಫ್ ದಿ ಟೆನ್ ರಿಂಗ್ಸ್” ನಲ್ಲಿ ಸಿಮು ಲಿಯು ಶಾಂಗ್-ಚಿ ಆಗಿ ನಟಿಸಿದ್ದಾರೆ, ಅವರು ನಿಗೂಢವಾದ ಟೆನ್ ರಿಂಗ್ಸ್ ಒಳಗಿನ ಜಾಲಕ್ಕೆ ಸಿಲುಕಿದಾಗ ಅವರು ಅನುಭವಿಸಿದ ಘಟನಾವಳಿಗಳೇ ಚಿತ್ರದ ಕಥಾವಸ್ತು.

ಇನ್ನು ಸಾಂಗ್ ಚಿ ಚಿತ್ರವನ್ನು ಡೆಸ್ಟಿನ್ ಡೇನಿಯಲ್ ಕ್ರೆಟನ್ ನಿರ್ದೇಶಿಸಿದ್ದಾರೆ.    ಕೆವಿನ್ ಫೀಗೆ ಮತ್ತು ಜೊನಾಥನ್ ಶ್ವಾರ್ಟ್ಜ್ ನಿರ್ಮಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next