Advertisement

ಸಮಾಜಕ್ಕೆ ಮಠಗಳ ಕೊಡುಗೆ ಅಪಾರ

12:19 PM Mar 15, 2021 | Team Udayavani |

ಮಾಗಡಿ: ಮಾನವನ ಕಲ್ಯಾಣಕ್ಕಾಗಿ, ಸಮಾಜದ ಏಳಿಗೆಗಾಗಿ ಮಠಗಳು ಹೆಚ್ಚಿನ ಉತ್ತಮ ಕೆಲಸ ಮಾಡಿವೆ. ಶಿಕ್ಷಣ ವಂಚಿತ ಅಸಹಾಯಕ ಮಕ್ಕಳಿಗೆ ಅನ್ನ, ವಸತಿ ನೀಡುವ ಮೂಲಕ ಸಶಕ್ತರನ್ನಾಗಿ ಮಾಡಿವೆ ಎಂದು ಡಿಸಿಎಂ ಗೋವಿಂದ ಎಂ. ಕಾರಜೋಳ ತಿಳಿಸಿದರು.

Advertisement

ತಾಲೂಕಿನ ಸೋಲೂರು ಹೋಬಳಿಪಾಲನಹಳ್ಳಿ ಮಠದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ನಡೆದ ಜಾತ್ರಾ ಮಹೋತ್ಸವ ಹಾಗೂ ಶನೇಶ್ವರ ಸ್ವಾಮಿ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು,ನಾಡಿನ ಉದ್ದಗಲಕ್ಕೂ ಶಿಕ್ಷಣ ಸಂಸ್ಥೆಗಳನ್ನು ತೆರದು ಹೆಮ್ಮರವಾಗಿ ಬೆಳೆದುನಿಂತಿದ್ದು, ದೀನ, ದಲಿತರ ಮಕ್ಕಳಿಗೆ,ಅವಕಾಶ ವಂಚಿತ ಮಕ್ಕಳಿಗೆ ಶಿಕ್ಷಣನೀಡುತ್ತಿವೆ. ಶ್ರೀಮಠದಿಂದ ನಡೆಯುತ್ತಿ ರುವ ಎಲ್ಲ ಕಾರ್ಯಕ್ರಮಕ್ಕೆ ಭಕ್ತರುಭಾಗವಹಿಸಿ ಮಠದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.

ಪಾಲನಹಳ್ಳಿ ಮಠದ ಧರ್ಮಾಧಿಕಾರಿ ಶ್ರೀ ಸಿದ್ದರಾಜು ಸ್ವಾಮೀಜಿ ಮಾತನಾಡಿ, ವಿಶ್ವದಲ್ಲಿ ವಿಗ್ರಹರಾಧನೆ ಮಾಡುವ ಮೊದಲು ಪ್ರಕೃತಿ ಆರಾಧನೆ ಮಾಡಲಾಗುತ್ತಿತ್ತು. ಪ್ರತಿಯೊಬ್ಬರು ಪ್ರೀತಿ-ವಿಶ್ವಾಸದಿಂದ ಪ್ರಕೃತಿಯ ನಡುವೆಯೇ ಬದುಕಿ ಬಾಳಬೇಕು ಎಂದರು. ಮಾಜಿ ಕೇಂದ್ರ ಸಚಿವ ಕೆ.ಎಚ್‌ ಮುನಿಯಪ್ಪ ಮಾತನಾಡಿ, ಪಾಲನಹಳ್ಳಿ ಮಠಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು ಎಂದರು.

ಕೆಲಸದಲ್ಲಿ ಬದ್ಧತೆ ಇರಬೇಕು: ಮಾಜಿ ಸಚಿವ ಎಚ್‌.ಆಂಜನೇಯ ಮಾತನಾಡಿ, ಮನುಷ್ಯನಿಗೆ ಶಾಂತಿ-ನೆಮ್ಮದಿ ಬೇಕಾಗಿದ್ದು ಇತ್ತಿಚೀನ ದಿನದಲ್ಲಿ ಆಸೆಬಹಳವಾಗುತ್ತಿದೆ. ಗ್ರಾಪಂ ಚುನಾವಣೆಗೆ ಕೋಟಿಗಟ್ಟಲೆ ಹಣ ಖರ್ಚುಮಾಡುತ್ತಾ ರಾಜಕಾರಣವನ್ನು ಸೇವೆಎಂಬುದನ್ನು ಮರೆತು ಹಣಸಂಪಾದನೆ ಮಾಡುವ ವೃತ್ತಿ ಎಂದು ತಿಳಿದುಕೊಂಡಿ ದ್ದಾರೆ. ನಾವು ಮಾಡುವ ಕೆಲಸದಲ್ಲಿ ಬದ್ಧತೆ, ನಿಸ್ವಾರ್ಥ ಸೇವೆ ಇರಬೇಕು ಎಂದರು.

ನೆಲಮಂಗಲ ಶಾಸಕ ಡಾ.ಕೆ ಶ್ರೀನಿವಾಸ್‌ ಮೂರ್ತಿ ಮಾತನಾಡಿ, ಮಠದಅಭಿವೃದ್ಧಿ ಕೆಲಸಕ್ಕೆ ನಾನು ಅಳಿಲು ಸೇವೆ ಮಾಡಲು ಬದ್ಧ ಎಂದರು.

Advertisement

ಶ್ರೀ ಅಗೋರೇಶ್ವರ ಭಗವಾನ್‌, ಡಾ. ಮಧುಸೂದನಾನಂದ ಸ್ವಾಮಿ, ಸರ್ಕಾರ‌ದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಚ್‌ ಅನಿಲ್‌ಕುಮಾರ್‌, ಲಕ್ಷ್ಮೀನಾರಾಯಣ್‌, ನಿವೃತ್ತ ಕುಲಪತಿ ಪ್ರೊ. ಅನಂತ ರಾಮಯ್ಯ,  ಶಾರದಮ್ಮ, ಡಾ. ಡಿ.ಒ ಗಂಗಾಧರಸ್ವಾಮಿ, ಪುರಸಭಾಧ್ಯಕ್ಷೆಭಾಗ್ಯಮ್ಮ, ಎಲ್‌.ಎನ್‌ ಸ್ವಾಮಿ,  ಬೆಳ ಗುಂಬದ ವಿಶ್ವನಾಥ್‌, ಕಲ್ಕೆರೆ ಶಿವಣ್ಣ,ಡಾ.ಜಗದೀಶ್‌, ರಾಮಪ್ರಸಾದ್‌, ರಾಘವೇಂದ್ರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next