ಮುಂಬಯಿ: ಆಧುನಿಕತೆಯ ಸೋಗಿನಲ್ಲಿ ಮೂಲ ಪರಂಪರೆಯನ್ನು ನಿರ್ಲಕ್ಷಿಸುವ ಸಂಸ್ಕೃತಿ ನಮ್ಮದಾಗಬಾರದು. ಪೂರ್ವಜರ ಪ್ರತಿಯೊಂದು ಆಚರಣೆಯಲ್ಲೂ ವೈಜ್ಞಾನಿಕ ಹಿನ್ನೆಲೆ ಅಡಕವಾಗಿದೆ. ಅವರ ಪ್ರತಿಯೊಂದು ಆಧ್ಯಾತ್ಮಿಕ ಚಿಂತನೆಗಳಲ್ಲೂ ಆರಾಧನೆಗಳಲ್ಲೂ ಮನೋ ಸ್ಥೈರ್ಯ ಜಾಗೃತಿ
ಗೊಳಿಸುವ ಅಂಶಗಳಿದ್ದವು ಎಂದು ಶ್ರೀ ಶನೀಶ್ವರ ಚಾಮುಂಡೇಶ್ವರಿ ಮಂದಿರ ದಹಿಸರ್ ಇದರ ಅಧ್ಯಕ್ಷ ಕೃಷ್ಣ ಎಂ. ಶೆಟ್ಟಿ ಅಭಿಪ್ರಾಯಿಸಿದರು.
ಮಾ. 11ರಂದು ದಹಿಸರ್ ಪೂರ್ವದ ರಾವಲ್ಪಾಡಾ ರಾಧಾಕೃಷ್ಣ ನಗರದಲ್ಲಿರುವ ಶ್ರೀ ಶನೀಶ್ವರ ಚಾಮುಂಡೇಶ್ವರಿ ಮಂದಿರದ 17 ನೇ ವಾರ್ಷಿಕ ಮಹಾಪೂಜೆಗೆ ಚಾಲನೆ ನೀಡಿ ಮಾತನಾಡಿದ ಅವರು, ವಿವಿಧ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಉಚಿತವಾಗಿ ಶಾಲಾ ಪರಿಕರಗಳನ್ನು ನೀಡುತ್ತಾ ಬಂದಿದ್ದೇವೆ ಎಂದು ನುಡಿದು, 17 ವರ್ಷಗಳ ಕಾಲ ನಮ್ಮೊಂದಿಗೆ ಯಶಸ್ವಿಯಾಗಿ ಮುನ್ನಡೆಯಲು ಸಹಕರಿಸಿದವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಮಂದಿರದ ಪ್ರಧಾನ ಅರ್ಚಕ ಚೆನ್ನಪ್ಪ ವಿ. ಪೂಜಾರಿ, ಗೌರವ ಕಾರ್ಯದರ್ಶಿ ಸುರೇಶ್ ಮೊಗವೀರ, ಜತೆ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಕೋಶಾಧಿಕಾರಿ ಸುರೇಶ್ ಎಲ್. ಸುವರ್ಣ, ದೇವಿಪಾತ್ರಿ ಪ್ರಸಾದ್ ಸಾಲ್ಯಾನ್, ಭುವಾಜಿಗಳಾದ ಪ್ರಸಾದ್ ಸಿ. ಪೂಜಾರಿ, ರಮಾನಾಥ ಪೂಜಾರಿ, ಹಿರಿಯ ರಂಗಕಲಾವಿದರ ಗುಣಪಾಲ ಉಡುಪಿ, ಮಹಿಳಾ ಸದಸ್ಯೆಯರು ಉಪಸ್ಥಿತರಿದ್ದರು.
ಬೆಳಗ್ಗೆ ಸಾಂತಿಂಜ ಜನಾದìನ ಭಟ್ ಅವರ ನೇತೃತ್ವದಲ್ಲಿ ವಾಸುದೇವ ಭಟ್ ಮತ್ತು ಅನಂತಕೃಷ್ಣ ಭಟ್ ಅವರ ಪೌರೋಹಿತ್ಯದಲ್ಲಿ ಸಾಮೂ ಹಿಕ ಪ್ರಾರ್ಥನೆ, ಗಣಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆ, ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ಜರಗಿತು. ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಅಪರಾಹ್ನ ಕಲಶ ಸ್ಥಾಪನೆ, ಶನಿಗ್ರಂಥ ಪಾರಾಯಣ, ಶ್ರೀ ಚಾಮುಂಡೇಶ್ವರಿ ದೇವಿ ಆವೇಶವನ್ನು ಆಯೋಜಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಹೇಮಚಂದ್ರ ಎರ್ಮಾಳ್ ಅವರ ತಂಡದವರಿಂದ ಭಕ್ತಿರಸ ಮಂಜರಿ ಮತ್ತು ದಹಿಸರ್ ಶ್ರೀ ಸದ್ಗುರು ನಿತ್ಯಾನಂದ ಕೃಪಾಪೋಷಿತ ಯಕ್ಷಗಾನ ಕಲಾಮಂಡಳಿಯ ಕಲಾವಿದರುಗಳಿಂದ ಶ್ರೀ ಭಗವತೀ ಕ್ಷೇತ್ರ ಮಹಾತೆ¾ ಯಕ್ಷಗಾನ ಪ್ರದರ್ಶನಗೊಂಡಿತು. ಕಲಾಭಿಮಾನಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸ್ಥಳೀಯ ಸಮಾಜ ಸೇವಕರು, ದಾನಿಗಳು, ಉದ್ಯಮಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ರಾಜಕೀಯ ಧುರೀಣರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಚಿತ್ರ-ವರದಿ : ರಮೇಶ್ ಅಮೀನ್