Advertisement

ರಾಜಸ್ಥಾನ್‌ ರಾಯಲ್ಸ್‌ ಸಾರ್ವಕಾಲಿಕ ಐಪಿಎಲ್‌ ತಂಡಕ್ಕೆ ಶೇನ್‌ ವಾರ್ನ್ ನಾಯಕ

02:03 AM Jun 14, 2020 | Sriram |

ಜೈಪುರ: ಐಪಿಎಲ್‌ ಇತಿಹಾಸದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ವಿಶಿಷ್ಟ ಸ್ಥಾನವಿದೆ. ಅದು ಪ್ರಪ್ರಥಮ ಐಪಿಎಲ್‌ ಪ್ರಶಸ್ತಿ ಎತ್ತಿದ ತಂಡ (2008). ಅಂದಿನ ಸಾರಥಿ ಶೇನ್‌ ವಾರ್ನ್. ಫೈನಲ್‌ನಲ್ಲಿ ಅದು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು 3 ವಿಕೆಟ್‌ಗಳಿಂದ ಮಣಿಸಿ ಕಿರೀಟ ಏರಿಸಿಕೊಂಡಿತ್ತು.

Advertisement

ಇದೀಗ ಈ ಫ್ರಾಂಚೈಸಿಯ ಸಾರ್ವಕಾಲಿಕ ಶ್ರೇಷ್ಠ ತಂಡವೊಂದು ಪ್ರಕಟಗೊಂಡಿದ್ದು, ಇದಕ್ಕೂ ಶೇನ್‌ ವಾರ್ನ್ ಅವರೇ ನಾಯಕರಾಗಿದ್ದಾರೆ. ಅಂದಿನ ಯುವ ಆಟಗಾರರನ್ನು ಹುರಿದುಂಬಿಸಿ, ಅವರಲ್ಲಿ ಸ್ಫೂರ್ತಿ ತುಂಬಿ, ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸುವಲ್ಲಿ ವಾರ್ನ್ ವಹಿಸಿದ ಪಾತ್ರ ಅಮೋಘ ಎಂದು ಬಣ್ಣಿಸಲಾಗಿದೆ.

ಅನಂತರ ತಂಡದ ನಾಯಕರಾದ ಅಜಿಂಕ್ಯ ರಹಾನೆ, ರಾಹುಲ್‌ ದ್ರಾವಿಡ್‌, ಶೇನ್‌ ವಾಟ್ಸನ್‌, ಜಾಸ್‌ ಬಟ್ಲರ್‌ ಮೊದಲಾದ ಸ್ಟಾರ್‌ ಆಟಗಾರರನ್ನು ಈ ತಂಡ ಹೊಂದಿದೆ.

ರಾಜಸ್ಥಾನ್‌ ರಾಯಲ್ಸ್‌ ಆಲ್‌ಟೈಮ್‌ ಇಲೆವೆನ್‌
ಅಜಿಂಕ್ಯ ರಹಾನೆ, ಜಾಸ್‌ ಬಟ್ಲರ್‌, ಸಂಜು ಸ್ಯಾಮ್ಸನ್‌, ರಾಹುಲ್‌ ದ್ರಾವಿಡ್‌, ಶೇನ್‌ ವಾಟ್ಸನ್‌, ಯೂಸುಫ್ ಪಠಾಣ್‌, ಸ್ಟುವರ್ಟ್‌ ಬಿನ್ನಿ, ಸೊಹೈಲ್‌ ತನ್ವೀರ್‌, ಶೇನ್‌ ವಾರ್ನ್ (ನಾಯಕ), ಸಿದ್ಧಾರ್ಥ್ ತ್ರಿವೇದಿ, ಮುನಾಫ್ ಪಟೇಲ್‌.

 

Advertisement
Advertisement

Udayavani is now on Telegram. Click here to join our channel and stay updated with the latest news.

Next