ತೆಕ್ಕಟ್ಟೆ: ಮುಂಬಯಿಂದ ಆಗಮಿಸಿ ಕುಂಭಾಸಿ ಕ್ವಾರಂಟೈನ್‌ನಲ್ಲಿ ಇದ್ದು ಅವಧಿ ಮುಗಿದ ಬಳಿಕ ಮನೆಗೆ ಬಂದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಅವರು ಕೆದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾನಾಡಿ ಬೆಳಗೋಡು ಅವರ ನಿವಾಸ ಸೇರಿದಂತೆ ಒಟ್ಟು ನಾಲ್ಕು ಮನೆಗಳಿಗೆ ಜೂ.4 ರಂದು ಸೀಲ್‌ಡೌನ್ ಮಾಡಲಾಗಿದೆ.
ಕ್ವಾರಂಟೈನ್ ಮುಗಿಸಿ ಬರುವ ಸಮಯದಲ್ಲಿ ಗಂಟಲು ದ್ರವ ಪರೀಕ್ಷೆಯ ವರದಿ ಬಂದಿರಲಿಲ್ಲ ಮನೆಗೆ ಬಂದ ಏಳು ದಿನಗಳ ನಂತರ ವರದಿ ಬಂದಿದ್ದು ಅದರಲ್ಲಿ ಸೋಂಕು ದೃಢಪಟ್ಟಿದೆ ಇದರಿಂದ ವ್ಯಕ್ತಿ ವಾಸವಾಗಿದ್ದ ಮನೆ ಸಹಿತ ಸೀಲ್ ಡೌನ್ ಮಾಡಿದ್ದು ವ್ಯಕ್ತಿಯನ್ನು ಕೊವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂದರ್ಭದಲ್ಲಿ ಕೆದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಅರ್ಪಿತಾ, ಕೆದೂರು ಗ್ರಾಮ ಪಂಚಾಯತ್‌ನ ನಿಕಟಪೂರ್ವ ಅಧ್ಯಕ್ಷ ಶಾನಾಡಿ ಸಂಪತ್ ಕುಮಾರ್ ಶೆಟ್ಟಿ , ಕೋಟ ಪೊಲೀಸ್ ಸಿಬಂದಿಗಳಾದ ಸುರೇಶ್, ಪಿಡಿಒ ಜಯರಾಮ ಶೆಟ್ಟಿ, , ಆಶಾ ಕಾರ್ಯಕರ್ತರು ಹಾಗೂ ಮತ್ತಿತರರು ಹಾಜರಿದ್ದರು.
ಚಿತ್ರ: ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ