Advertisement
ಬುಧವಾರ ಕಲಬುರಗಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿಯೂ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದರು. ದೇಶದ ಎಲ್ಲಾ ಕಡೆ ಜನರು ಕಾಂಗ್ರೆಸ್ ಪಕ್ಷಕ್ಕೆ ರಜೆ ಕೊಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
Related Articles
Advertisement
ದೇಶ ಭಕ್ತರು ಮತ್ತು ಹುತಾತ್ಮರಿಗೆ ಕಾಂಗ್ರೆಸ್ ಪಕ್ಷ ಅಪಮಾನ ಮಾಡುತ್ತಲೇ ಬಂದಿದೆ. ಸರ್ದಾರ್ ಪಟೇಲ್ ಬಗೆಗಿನ ತಿರಸ್ಕಾರ ಕಾಂಗ್ರೆಸ್ ಪಕ್ಷಕ್ಕೆ ಹೊಸದೇನೂ ಅಲ್ಲ. ದೇಶದ ಎಷ್ಟು ಮಹನೀಯರು, ಹುತಾತ್ಮರನ್ನು ಕಾಂಗ್ರೆಸ್ ತಿರಸ್ಕರಿಸಿಲ್ಲ ಹೇಳಿ ಎಂದು ಮೋದಿ ಪ್ರಶ್ನಿಸಿದರು.
ಒಂದು ಕುಟುಂಬದ ಗಾಡಿ ನಡೆಸಲು ದೇಶ ಭಕ್ತರನ್ನು ಮರೆಸಲಾಗುತ್ತಿದೆ. ನಮ್ಮ ಸೈನಿಕರು ಪಾಕಿಸ್ತಾನದ ಒಳಹೊಕ್ಕು ಸರ್ಜಿಕಲ್ ಸ್ಟ್ರೈಕ್ ನಡೆಸಿತು. ಆದರೆ ಕಾಂಗ್ರೆಸ್ ಅದಕ್ಕೆ ಸಾಕ್ಷಿ ಕೊಡಿ ಎಂದು ಕೇಳಿತು. ನಮ್ಮ ವೀರ ಸೈನಿಕರು ಕ್ಯಾಮರಾ ತೆಗೆದುಕೊಂಡು ಹೋಗಬೇಕಾ, ಬಂದೂಕು ಹಿಡಿದುಕೊಂಡು ಹೋಗಬೇಕಾ? ಎಂದು ತರಾಟೆಗೆ ತೆಗೆದುಕೊಂಡರು.
ವೇದಿಕೆಯಲ್ಲಿ ವಂದೇ ಮಾತರಂ ಅವಮಾನಿಸುವವರು ಸೈನಿಕರ ಪರಾಕ್ರಮವನ್ನು ಗೌರವಿಸುತ್ತಾರೆಯೇ ಎಂದು ಪ್ರಶ್ನಿಸಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಫೀಲ್ಡ್ ಮಾರ್ಷಲ್ ಜನರಲ್ ತಿಮ್ಮಯ್ಯ ಅವರನ್ನು ಕಾಂಗ್ರೆಸ್ ನಡೆಸಿಕೊಂಡ ರೀತಿಯ ಬಗ್ಗೆ ಮೋದಿ ಪ್ರಸ್ತಾಪಿಸಿದರು.
ಸರ್ಜಿಕಲ್ ಸ್ಟ್ರೈಕ್ ನಂತರ ಸೇನಾಧಿಕಾರಿಯನ್ನು ರೌಡಿ ಎಂದು ಕಾಂಗ್ರೆಸ್ ಮುಖಂಡರು ಕರೆದರು. ಜನರಲ್ ತಿಮ್ಮಯ್ಯ ಅವರನ್ನು ಅಂದು ನೆಹರೂ ಅಗೌರವಯುತವಾಗಿ ರಾಜೀನಾಮೆ ಕೊಡಿಸುವಂತೆ ಮಾಡಿದರು. ಜನರಲ್ ತಿಮ್ಮಯ್ಯ ಅವರನ್ನು ಹಲವು ಬಾರಿ ಅವಮಾನಿಸಿದ್ದರು. ವೀರ ಸೇನಾನಿಯನ್ನು ನಡೆಸಿಕೊಂಡ ರೀತಿಯನ್ನು ಕರ್ನಾಟಕದ ಯುವ ಜನತೆ ಮರೆಯಬಾರದು ಎಂದು ಮನವಿ ಮಾಡಿಕೊಂಡರು.
ಭಾಷಣದ ಹೈಲೈಟ್ಸ್:
ದೇಶದ ಅರ್ಧದಷ್ಟು ತೊಗರಿ ಬೆಳೆ ಕಲಬುರಗಿ ರೈತರ ಪರಿಶ್ರಮದ್ದಾಗಿದೆ. ಕಲಬುರಗಿನ್ನು ತೊಗರಿ ಕಣಜ ಎನ್ನುತ್ತಾರೆ
*ಕಾಂಗ್ರೆಸ್ ಸರ್ಕಾರ ತೊಗರಿ ಬೆಳೆಗಾರರ ಸಂಕಷ್ಟ ಅರ್ಥ ಮಾಡಿಕೊಳ್ಳುತ್ತಿಲ್ಲ. ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಿಗಲು ಪ್ರಯತ್ನಿಸಿಲ್ಲ
*ಸ್ವಾಮಿನಾಥನ್ ವರದಿಯನ್ನು ಕಪಾಟಿನಲ್ಲಿಟ್ಟು ಬೀಗ ಹಾಕಿದವರು ಇಂದು ಹೊಟ್ಟೆಕಿಚ್ಚುಪಟ್ಟುಕೊಳ್ಳುತ್ತಿದ್ದಾರೆ.
*ಎಂಎಸ್ ಪಿ ಮೂಲಕ ನಾವು 10ಪಟ್ಟು ಹೆಚ್ಚು ಬೆಲೆಯನ್ನು ಒದಗಿಸಿಕೊಟ್ಟಿದ್ದೇವೆ. ಹೊಲಗಳು ಒಣಗಿರೋದಕ್ಕೆ ಕಾಂಗ್ರೆಸ್ ಸರ್ಕಾರ ಹೊಣೆ.
*ಸೇನೆಯಲ್ಲಿ ಅಪೂರ್ವ ಸೇವೆ ಸಲ್ಲಿಸಿದವರು ಕರ್ನಾಟಕದ ಯೋಧರು.