Advertisement
2019ರಲ್ಲಿ ನಡೆಯುವ ಚುನಾವಣೆಯು ವಿಚಾರ ಆಧಾರಿತ ಚುನಾವಣೆ ಆಗಲಿದೆ. ಕಾಂಗ್ರೆಸ್ ಸತ್ಯ, ನ್ಯಾಯ ಹಾಗೂ ಪ್ರೀತಿಯ ವಿಚಾರ ಆಧಾರಿತ ಚುನಾವಣೆ ಮಾಡುತ್ತಿದ್ದರೆ, ಬಿಜೆಪಿ ಸುಳ್ಳು, ಅನ್ಯಾಯ ಹಾಗೂ ದ್ವೇಷದ ಮೂಲಕ ಹೋಗುತ್ತಿದೆ. ಕಳೆದ ಐದು ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಸತ್ಯ ಹಾಗೂ ನ್ಯಾಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಭರವಸೆಗಳ ಮೇಲೆ ಭರವಸೆ ನೀಡಿದ್ದಾರೆ. ನಿಮಗೆ ಸತ್ಯ ಹಾಗೂ ನ್ಯಾಯ ಬೇಕೋ ಅಥವಾ ಅನ್ಯಾಯ, ಸುಳ್ಳು ಭರವಸೆಗಳ ಸರ್ಕಾರ ಬೇಕೋ ಎಂಬುದನ್ನು ನಿರ್ಣಯ ಮಾಡಿ ಎಂದರು.
ನೀರವ ಮೋದಿ ಮೊದಲಾದವರ ಮನೆಯ ಚೌಕಿದಾರರಾಗಿದ್ದಾರೆ. ದೇಶದ ಜನರ ಹಾಗೂ ರೈತರ ಸಂಪತ್ತು ಲೂಟಿ ಮಾಡಿ ಅಂಬಾನಿ, ನೀರವ ಮೋದಿ ಹಾಗೂ ವಿಜಯ ಮಲ್ಯ ಅವರಿಗೆ ಕೊಟ್ಟಿದ್ದಾರೆ.
ನಮ್ಮ ಸರ್ಕಾರ ಬಂದ ಮೇಲೆ ಒಂದೇ ಹೊಡೆತಕ್ಕೆ ಈ ಹಣವನ್ನು ಮರಳಿ ತರುತ್ತೇವೆ ಎಂದು ರಾಹುಲ್ ಭರವಸೆ ನೀಡಿದರು. ರೈತರಿಗೆ ಬ್ಯಾಂಕ್‌ಗಳಿಂದ ಮುಕ್ತಿ: ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕ ಬಂದರೆ ರೈತರು ಸಾಲ ಮರು ಪಾವತಿ ವಿಷಯದಲ್ಲಿ ಜೈಲಿಗೆ ಹೋಗದಂತೆ ಕಾನೂನಿನಲ್ಲಿ ಬದಲಾವಣೆ ತರಲಾಗುವುದು.
ಸಾಲ ಮರುಪಾವತಿ ವಿಷಯದಲ್ಲಿ ಈಗಿರುವ ನಿಯಮಾವಳಿಗಳನ್ನು ಸಂಪೂರ್ಣ ಮಾರ್ಪಾಡು ಮಾಡಲಾಗುತ್ತದೆ. ಇದರಿಂದ ರೈತರು ಜೈಲಿಗೆ ಹೋಗುವುದನ್ನು ತಪ್ಪಿಸಲಾಗುವುದು. ಅಷ್ಟೇ ಅಲ್ಲ ಬ್ಯಾಂಕ್‌ಗಳಿಂದ ಉಂಟಾಗುವ ತೊಂದರೆ ತಪ್ಪಿಸಲಾಗುವುದು ಎಂದರು.
Related Articles
ರಾಜ್ಯಗಳಲ್ಲಿ ಒಂದೇ ದಿನದಲ್ಲಿ ರೈತರ ಸಾಲಮನ್ನಾ ಮಾಡಲಾಗಿದೆ. ಕರ್ನಾಟಕದಲ್ಲಿ 40 ಸಾವಿರ ಕೋಟಿ ರೂ.ರೈತರ ಸಾಲ ಮನ್ನಾ ಮಾಡಲಾ ಗಿದೆ. ನರೇಂದ್ರ ಮೋದಿ ದೇಶದ ಹಣ ಲೂಟಿ ಮಾಡಿ ವಿದೇಶಕ್ಕೆ ಪರಾರಿ ಯಾದವರ ಬಗ್ಗೆ ಚಕಾರ ಎತ್ತುವುದಿಲ್ಲ. ನೋಟು ನಿಷೇಧ ದಿಂದ ದೇಶಕ್ಕೆ ದೊಡ್ಡ ಆಘಾತವಾಗಿದೆ. ಮೋದಿ ಅವರು ತಮ್ಮ ಐದು ವರ್ಷಗಳ ಸಾಧನೆಗಳ ಬಗ್ಗೆ ಪ್ರಸ್ತಾಪ ಮಾಡುತ್ತಿಲ್ಲ. ರೈತರ ಹಾಗೂ ಬಡವರ ಬಗ್ಗೆ ಹೇಳುತ್ತಿಲ್ಲ. ಕೇವಲ ಸೈನಿಕರ ವಿಷಯ ಮಾತ್ರ ಪ್ರಸ್ತಾಪಿಸುತ್ತಾ ಹುಸಿ ಮಾತುಗಳನ್ನು ಹರಿಬಿಡುತ್ತಿದ್ದಾರೆ. ಜನರು ಇದನ್ನು ನಂಬುವುದಿಲ್ಲ ಎಂದರು.
Advertisement
ವರ್ಷದಲ್ಲಿ ಎರಡು ಬಗೆಯ ಬಜೆಟ್ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅ ಧಿಕಾರಕ್ಕೆ ಬಂದರೆ ಒಂದು ವರ್ಷದ ಕಾಲಾವಧಿಯಲ್ಲಿ ಒಂದು ರಾಷ್ಟ್ರೀಯ ಹಾಗೂ ಇನ್ನೊಂದು ರೈತರ ಪರವಾಗಿ ಎರಡು ಬಗೆಯ ಬಜೆಟ್ ಮಂಡನೆ ಮಾಡಲಾಗುವುದು. ದೇಶದಲ್ಲಿ 22 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಅವುಗಳನೆಲ್ಲ ಭರ್ತಿ ಮಾಡಲಾಗುವುದು. ಪಂಚಾಯತಿಗಳಲ್ಲಿ 10 ಲಕ್ಷ ಜನರಿಗೆ ಉದ್ಯೋಗ ನೀಡಲಾಗುವುದು. ವಿದೇಶಗಳಲ್ಲಿ ಸುರಕ್ಷಿತವಾಗಿರುವ ಲೂಟಿಕೋರರಿಂದ ಹಣ ವಸೂಲಿ ಮಾಡಿ ರೈತರ ಹಾಗೂ ಬಡವರ ಖಾತೆಗಳಿಗೆ ಹಾಕಲಾಗುವುದು. ನೂತನ ತಂತ್ರಜ್ಞಾನ ಅಳವಡಿಕೆಗೆ ಆದ್ಯತೆ ನೀಡಲಾಗುವುದು. ನೂತನ ಉದ್ಯಮ ವ್ಯವಸ್ಥೆಗೆ ಹೆಚ್ಚು ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು. ನ್ಯಾಯ ಯೋಜನೆ
ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ಬಡವರ ಖಾತೆಗಳಿಗೆ ವರ್ಷಕ್ಕೆ 72000 ರೂ. ಹಣವನ್ನು ನೇರವಾಗಿ ಜಮಾ ಮಾಡಲಾಗು ವುದು. ನ್ಯಾಯ ಯೋಜನೆ ಹೆಸರಿನಲ್ಲಿ ಈ ಹಣ ಬಡವರಿಗೆ ತಲುಪ ಲಿದೆ. ಈಗಾಗಲೇ ಶೇ.20ರಷ್ಟು ಬಡ ಕುಟುಂಬಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಅನಿಲ ಅಂಬಾನಿ,
ವಿಜಯ ಮಲ್ಯ ಅವರಿಂದ ಹಣ ವಸೂಲಿ ಮಾಡಿ ಅದನ್ನು ಜನರಿಗೆ ನೀಡಲಾಗುವುದು ಎಂದರು.