ದಾವಣಗೆರೆ: ಮಹಾನಗರ ಪಾಲಿಕೆಯ 20ನೇ ವಾರ್ಡ್‌ನ ಉಪ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ಜಗದೀಶ್ ಪರ ಶುಕ್ರವಾರ ಶಾಸಕರಾದ ಶಾಮನೂರು ಶಿವಶಂಕರಪ್ಪ, ಪಿ.ಟಿ. ಪರಮೇಶ್ವರನಾಯ್ಕ ಭರ್ಜರಿ ರೋಡ್ ಶೋ ನಡೆಸಿದರು.
ಉಪ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನ ಭಾರತ್ ಕಾಲೋನಿ, ಎಚ್ ಕೆ.ಆರ್.ನಗರ, ಅಣ್ಣಾ ನಗರ ಸೇರಿದಂತೆ ವಾರ್ಡ್‌ನ ಎಲ್ಲಾ ಭಾಗಗಳಲ್ಲಿ ರೋಡ್ ಶೋ ನಡೆಸಿ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಬಿಜೆಪಿಯವರ ಅ ಧಿಕಾರದ ದುರಾಸೆಯಿಂದ ಮತ್ತೆ ಚುನಾವಣೆ ಬಂದಿದೆ. ಈ ಉಪಚುನಾವಣೆಯಲ್ಲೂ ಸಹ ಕಾಂಗ್ರೆಸ್ ನ್ನು ಒಗ್ಗಟ್ಟಿನ ಮೂಲಕ ಗೆಲ್ಲಿಸಬೇಕು ಎಂದರು.
ಬಿಜೆಪಿಯವರ ಅ ಧಿಕಾರ ದಾಹದಿಂದ ದೇಶ ಮತ್ತು ರಾಜ್ಯಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲೂ ಉಪಚುನಾವಣೆ ಎದುರಾಗಿದೆ. ವಾರ್ಡಿನ ಮತದಾರರು ನೀಡಿದ ತೀರ್ಪು ಧಿಕ್ಕರಿಸಿದವರಿಗೆ ತಕ್ಕಪಾಠ ಕಲಿಸಬೇಕು ಎಂದರು. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಮಧ್ಯೆ ನೇರ ಹಣಾಹಣಿ ಇರುವುದರಿಂದ ಕಳೆದ ಬಾರಿ ಪಕ್ಷದ ಅಭ್ಯರ್ಥಿಗೆ 2ನೇ ದೊಡ್ಡ ಜಯಭೇರಿ ನೀಡಿದಂತೆ ಈ ಬಾರಿ ಬಿಜೆಪಿ ಅಭ್ಯರ್ಥಿಗೆ ಠೇವಣಿ ಸಿಗದಂತೆ ಕಾಂಗ್ರೆಸ್ ಅಭ್ಯರ್ಥಿಯನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ವಾರ್ಡಿನ ಎಲ್ಲರ ಆಶಯದಂತೆ ನೀವೇ ಹೇಳಿದ ಅಭ್ಯರ್ಥಿಗೆ ಪಕ್ಷ ಮಣೆ ಹಾಕಿದ್ದು, ತಾವುಗಳು ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ಸ್ವಾಭಿಮಾನದ ಸಂಕೇತವಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಅಚ್ಚೇದಿನ್ ಎಂದು ಹೇಳಿ ಅ ಧಿಕಾರಕ್ಕೆ ಬಂದಿರುವ ಬಿಜೆಪಿ ಇಂದು ಜನಜೀವನ ಸಾಗಿಸದಂತೆ ದಿನಬಳಕೆ ವಸ್ತುಗಳ ದರ ಹೆಚ್ಚಳ ಸೇರಿದಂತೆ ಜನವಿರೋ ಧಿ ನೀತಿಗಳನ್ನು ತಂದಿರುವುದರ ವಿರುದ್ಧ ಮತ ಚಲಾಯಿಸುವ ಮೂಲಕ ಈ ಭಾಗದ ಜನತೆ ಬಿಜೆಪಿ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ನಾಂದಿ ಹಾಡಬೇಕು ಎಂದರು. ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ಜಗದೀಶ್ ಮಾತನಾಡಿ, ಈ ಭಾಗದ ಜನರು ಸ್ವಾಭಿಮಾನದ ಪ್ರತೀಕವಾಗಿದ್ದು, ತಮ್ಮನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.
ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಶಂಕರ್, ದಿನೇಶ್ ಕೆ.ಶೆಟ್ಟಿ, ಡಿ.ಬಸವರಾಜ್, ಅಯೂಬ್ ಪೈಲ್ವಾನ್, ಕೆ.ಎ ಚ್.ಓಬಳಪ್ಪ, ಎ.ನಾಗರಾಜ್, ಜಿ.ಎಸ್. ಮಂಜುನಾಥ್, ಕೆ.ಚಮನ್‌ಸಾಬ್, ಪಾಮೇನಹಳ್ಳಿ ನಾಗರಾಜ್, ಜಿ.ಡಿ.ಪ್ರಕಾಶ್, ಜಾಕೀರ್, ಕಲ್ಲಹಳ್ಳಿ ನಾಗರಾಜ್, ಸಯೀದ್ ಚಾರ್ಲಿ, ಸವಿತಾ ಗಣೇಶ್ ಹುಲ್ಮನಿ, ಸುಧಾ ಇಟ್ಟಿಗುಡಿ ಮಂಜುನಾಥ್, ಶಿವಲೀಲಾ ಕೊಟ್ರಯ್ಯ, ಆಶಾ ಉಮೇಶ್ ಇದ್ದರು.