Advertisement
ಕುಂದಾಪುರದ ಕೆ. ರಾಘವೇಂದ್ರ ಆಚಾರ್ ಮತ್ತು ಮಾಲಾ ದಂಪತಿ ಪುತ್ರಿ ಶ್ಲಾಘಾ. ಮೂರನೇ ವಯಸ್ಸಿನಲ್ಲಿ ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನ ದಲ್ಲಿ ನೃತ್ಯ ಪ್ರದರ್ಶನ ನೀಡಿ ಬಳಿಕ ವಿವಿಧ ಸಂಘ – ಸಂಸ್ಥೆ , ಶಾಲಾ – ಕಾಲೇಜಿನಲ್ಲಿ 200ಕ್ಕೂ ಹೆಚ್ಚಿನ ನೃತ್ಯ ಪ್ರದರ್ಶನವನ್ನು ನೀಡಿದ್ದಾಳೆ. ಪ್ರಸ್ತುತ ತೆಕ್ಕಟ್ಟೆ ವಿಶ್ವ ವಿನಾಯಕ ಸಿಬಿಎಸ್‌ಇ ಶಾಲೆಯಲ್ಲಿ ಮೂರನೇ ತರಗತಿ ವಿದ್ಯಾರ್ಥಿನಿ.
2016ರಲ್ಲಿ ರವಿ ಬಸ್ರೂರು ಅವರ ಕಟಕ ಸಿನೆಮಾಕ್ಕಾಗಿ ನಡೆದ ಆಡಿಷನ್‌ನಲ್ಲಿ ಶ್ಲಾಘಾ ಆಯ್ಕೆಯಾದಳು. ಇದೆ ಸಂದರ್ಭ ಸಚಿನ್ ಬಸ್ರೂರು ಅವರ “ಅಮ್ಮ’ ಆಲ್ಬಮ್ ಸಾಂಗ್‌ನಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಇತ್ತೀಚೆಗೆ ಗಿರ್ಮಿಟ್ ಸಿನೆಮಾದಲ್ಲಿ ನಾಯಕಿಯ ಪಾತ್ರದಲ್ಲಿ ಅಭಿನಯಿಸಿದ್ದಾಳೆ. ಶೇಷಾದ್ರಿ ಅವರ ಮೂಕಜ್ಜಿಯ ಕನಸುಗಳು ಸಿನೆಮಾ ದಲ್ಲೂ ನಟಿಸಿದ್ದಾಳೆ. ಜತೆಗೆ ಕೆಲವು ಕಿರುಚಿತ್ರದಲ್ಲೂ ಅಭಿನಯಿಸಿದ್ದಾಳೆ. ಮುಂದೆ ಕಟಕ-2 ಸಿನೆಮಾದಲ್ಲಿ ಅಭಿನಯಿಸಲಿದ್ದು, ಧಾರಾ ವಾಹಿಗಳಲ್ಲೂ ಅವಕಾಶ ಸಿಗುತ್ತಿವೆ. ಪ್ರಶಸ್ತಿ, ಸಮ್ಮಾನ
“ಕಟಕ’ ಚಿತ್ರಕ್ಕೆ ಅತ್ಯುತ್ತಮ ಬಾಲನಟಿ ಅಂತಾರಾಷ್ಟ್ರೀಯ ಸೈಮಾ ಪ್ರಶಸ್ತಿ. ಮೂಡುಬಿದಿರೆಯಲ್ಲಿ ನಡೆದ ಬೆಳದಿಂಗಳ ತುಳು ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ. 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ, ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ -ಸಂಸ್ಥೆ ಶಾಲಾ ಕಾಲೇಜು ಮೂಲಕ ಸಮ್ಮಾನ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿದ್ದಾಳೆ.
Related Articles
ಸಿನೆಮಾದ ನಟನೆಗೆ ತಂದೆ ತಾಯಿ ಮಾರ್ಗದರ್ಶನ ನೀಡುತ್ತಿದ್ದು ಆರಂಭದಲ್ಲಿ ಕಷ್ಟ ಅನಿಸುತ್ತಿತ್ತು. ಸ್ನೇಹಿತರು ಶಿಕ್ಷಕರು ಸಿನೆಮಾದ ಬಗ್ಗೆ ವಿಚಾರಿಸುತ್ತಿದ್ದು ಜನರು ಗುರುತಿಸಿ ಮಾತನಾಡಿಸುವಾಗ ಖುಷಿ ಅನಿಸುತ್ತದೆ. ಯಶ್, ಪುನೀತ್ ಹಾಗೂ ರಾಧಿಕಾ ಪಂಡಿತ್ ಅವರು ಇಷ್ಟದ ನಟ ನಟಿಯರು.
– ಶ್ಲಾಘಾ ಸಾಲಿಗ್ರಾಮ
ಬಾಲ ನಟಿ
Advertisement
- ಕಾರ್ತಿಕ್ ಚಿತ್ರಾಪುರ