Advertisement

ಸಮಾಜಮುಖಿ ಕಾರ್ಯಗಳಲ್ಲಿ ಶಕುಂತಲಾ

12:45 PM Mar 08, 2018 | Team Udayavani |

ಉಜಿರೆ ಎಸ್‌.ಡಿ.ಎಂ. ಕಾಲೇಜಿನಲ್ಲಿ ಎನ್ನೆಸ್ಸೆಸ್‌ ಹಿರಿಯ ಯೋಜನಾಧಿಕಾರಿಯಾಗಿರುವ ಶಕುಂತಳಾ ಅವರು ರಾಜ್ಯ ಸರಕಾರದ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ 2016ರ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ.

Advertisement

ಇವರು ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ರಕ್ತದಾನ, ಜಲಸಂರಕ್ಷಣೆ, ಸ್ವಚ್ಛತಾಕಾರ್ಯ, ರಾಜ್ಯಮಟ್ಟದ ಯುವಜನೋತ್ಸವ
ಸಂಘಟನೆಗಳಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಇವರು ಸ್ನಾತ್ತಕೋತ್ತರ ಪದವೀಧರರು ಜಿನರಾಜಯ್ಯ ಹಾಗೂ ಪ್ರೇಮಾ ದಂಪತಿಯ ಪುತ್ರಿ. ಇವರಿಗೆ ಇಬ್ಬರು ಮಕ್ಕಳು.

‘ಯಾವುದೇ ಸಾಧನೆ ಮಾಡಬೇಕಾದರೆ ಹಿರಿಯರ, ಕಿರಿಯರ ಸಹಕಾರ ಮುಖ್ಯ. ಅದು ನನಗೆ ನಮ್ಮ ಸಂಸ್ಥೆಯಿಂದ ಲಭಿಸಿದೆ. ವಿದ್ಯಾರ್ಥಿಗಳು ಹಾಗೂ ಸಮಾಜಕ್ಕೆ ಸೇವಾಮನೋಭಾವ ಮೂಡಿಸುವ ಉದ್ದೇಶದಿಂದ ಕಾಲೇಜು ವತಿಯಿಂದ ಹಲವಾರು ಕಾರ್ಯಕ್ರಮ ಸಂಘಟಿಸಲಾಗಿದ್ದು, ಸಾಧನೆಗೆ ಸಂಸ್ಥೆಯ ಸಹಕಾರ ಅಪಾರ’ ಎನ್ನುತ್ತಾರೆ ಶಕುಂತಲಾ.

ಕುಟುಂಬದ ಜವಾಬ್ದಾರಿ
‘ಮಕ್ಕಳು ಸಣ್ಣವರಾದ್ದರಿಂದ ಸ್ವಲ್ಪ ಕಷ್ಟವಾಯಿತು. ಮುಖ್ಯವಾಗಿ ವಾರ್ಷಿಕ ವಿಶೇಷ ಶಿಬಿರದ ಸಂದರ್ಭ ಏಳೂ ದಿನಗಳ ಕಾಲ ಮನೆಯಿಂದ ದೂರವಿರಬೇಕಾಗಿತ್ತು. ಕುಟುಂಬ ನೀಡಿದ ಸಹಕಾರ, ಪ್ರೋತ್ಸಾಹದಿಂದ ಎಲ್ಲವೂ ಸಾಧ್ಯವಾಯಿತು’ ಎಂದು ಶಕುಂತಲಾ ಸ್ಮರಿಸಿಕೊಳ್ಳುತ್ತಾರೆ.

ಶ್ರೇಷ್ಠ ಮಹಿಳಾಧಿಕಾರಿ
ರಾಜ್ಯ ಎನ್ನೆಸ್ಸೆಸ್‌ ಪ್ರಶಸ್ತಿ ಘೋಷಣೆಯಾಗಿದ್ದು, ಶಕುಂತಲಾ ಅವರಿಗೆ ಶ್ರೇಷ್ಠ ಮಹಿಳಾಧಿಕಾರಿ ಪ್ರಶಸ್ತಿ ಒಲಿದು ಬಂದಿದೆ. ಮಹಿಳಾ ದಿನಾಚರಣೆ ಸುಸಂದರ್ಭದಲ್ಲಿ ಅವರ ಸಾಧನೆಯ ಮೆಲುಕು ಇಲ್ಲಿದೆ.

Advertisement

ಪ್ರೋತ್ಸಾಹ ಅಗತ್ಯ
ಮಹಿಳೆಯರಿಗೆ ಸೂಕ್ತ ಅವಕಾಶ ಸಿಕ್ಕಿದಲ್ಲಿ ಯಾವುದೇ ಸಾಧನೆ ಬೇಕಾದರೂ ಮಾಡಲು ಸಾಧ್ಯ. ಕುಟುಂಬದ ಜವಾಬ್ದಾರಿ ಜತೆಗೆ ಸಮಾಜದಲ್ಲಿ ಉನ್ನತ ಮಟ್ಟಕ್ಕೇರುವ ಸಾಮರ್ಥ್ಯ ಮಹಿಳೆಯರಿಗಿದೆ. ಮಹಿಳೆಯರಿಗೆ ಸೂಕ್ತ ಅವಕಾಶಗಳನ್ನು ನೀಡುವುದರ ಜತೆಗೆ ಅವರ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಒದಗಿಸುವ ಕೆಲಸವಾಗಬೇಕಿದೆ.
– ಶಕುಂತಲಾ

 ಹರ್ಷಿತ್‌ ಪಿಂಡಿವನ 

Advertisement

Udayavani is now on Telegram. Click here to join our channel and stay updated with the latest news.

Next