Advertisement

ರಾಮಾಯಣದ ಬೆನ್ನಲ್ಲೇ ಶಕ್ತಿಮಾನ್‌ ರಿಟರ್ನ್

09:40 AM Mar 31, 2020 | Hari Prasad |

21 ದಿನಗಳ ಲಾಕ್‌ಡೌನ್‌ನಲ್ಲಿ ದೂರದರ್ಶನ, ತನ್ನ ಒಂದೊಂದೇ ಕ್ಲಾಸಿಕ್‌ಗಳನ್ನು ಮರುಪ್ರಸಾರ ಮಾಡುತ್ತಿದೆ. ಈಗ ಆ ಪಟ್ಟಿಗೆ ಹೊಸ ಸೇರ್ಪಡೆ, ಮಕ್ಕಳ ಧಾರಾವಾಹಿ ಶಕ್ತಿಮಾನ್‌. ಈ ಬಗ್ಗೆ ಸ್ವತಃ ಶಕ್ತಿಮಾನ್‌ ಖ್ಯಾತಿಯ ನಟ ಮುಖೇಶ್‌ ಖನ್ನಾ ಟ್ವೀಟ್‌ ಮಾಡಿದ್ದಾರೆ.

Advertisement

ರಾಮಾಯಣ, ಮಹಾಭಾರತವನ್ನು ಜನ ಮತ್ತೆ ನೋಡಿ ಆನಂದಿಸುತ್ತಿದ್ದಾರೆ. ಆದರೆ ಲಾಕ್‌ಡೌನ್‌ನಲ್ಲಿರುವ ಜನತೆಗೆ ಇವಷ್ಟೇ ಸಿಹಿಸುದ್ದಿಗಳಲ್ಲ, ಶಕ್ತಿಮಾನ್‌ ಕೂಡ ಮರುತೆರೆಗೆ ಸಿದ್ಧಗೊಳ್ಳುತ್ತಿದೆ. ಶೀಘ್ರವೇ ಮೂಡಿ ಬರಲಿದೆ’ ಎಂದಿದ್ದಾರೆ.

90ರ ದಶಕದ ಈ ಧಾರಾವಾಹಿಯಲ್ಲಿ ಶಕ್ತಿಮಾನ್‌ ಮತ್ತು ಪಂಡಿತ್‌ ಗಂಗಾಧರ್‌ ವಿದ್ಯಾಧರ್‌ ಮಾಯಾಧರ್‌ ಓಂಕಾರನಾಥ ಶಾಸ್ತ್ರಿ ಎಂಬ ದ್ವಿಪಾತ್ರಗಳಲ್ಲಿ ಮುಖೇಶ್‌ ನಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next