Advertisement

ಆರ್‌ಬಿಐಗೆ ಶಕ್ತಿಕಾಂತ್‌ ನೇಮಕಕ್ಕೆ ಸ್ವಾಮಿ ತೀವ್ರ ಆಕ್ಷೇಪ 

02:33 PM Dec 12, 2018 | |

ಹೊಸದಿಲ್ಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ)ನ 25ನೇ ಗವರ್ನರ್‌ ಆಗಿ ಶಕ್ತಿಕಾಂತ್‌ ದಾಸ್‌ ನೇಮಕಗೊಳಿಸಿರುವುದಕ್ಕೆ  ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣ್ಯನ್‌ ಸ್ವಾಮಿ ಅವರು ಆಕ್ಷೇಪ ವ್ಯಕ್ತ ಪಡಿಸಿದ್ದು , ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವನ್ನು ಬರೆದಿದ್ದಾರೆ. 

Advertisement

ಶಕ್ತಿಕಾಂತ್‌ ದಾಸ್‌ ಅವರನ್ನು ನೇಮಕಗೊಳಿಸಿದ್ದು ತಪ್ಪು, ಅವರು ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಅವರೊಂದಿಗೆ ಭ್ರಷ್ಟ ಚಟುಟಿಕೆಗಳಲ್ಲಿ ಭಾಗಿಯಾದವರು ಮತ್ತು ಅವರನ್ನು ಕೋರ್ಟ್‌ ಕೇಸುಗಳಲ್ಲಿ ಪಾರು ಮಾಡಲು ಯತ್ನಿಸಿದವರು. ನನಗೆ ಗೊತ್ತಾಗುತ್ತಿಲ್ಲ ಯಾಕೆ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು.  ಈ ನಿರ್ಧಾರವರನ್ನು ಪ್ರಶ್ನಿಸಿ ನಾನು ಪ್ರಧಾನಿಗೆ ಪತ್ರವನ್ನು ಬರೆದಿದ್ದೇನೆ ಎಂದು ಸ್ವಾಮಿ ತಿಳಿಸಿದರು.

ಗವರ್ನರ್‌ ಸ್ಥಾನಕ್ಕೆ ಊರ್ಜಿತ್‌ ಪಟೇಲ್‌ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಅವರಿಂದ ತೆರವಾದ ಸ್ಥಾನಕ್ಕೆ ಕೇಂದ್ರ ಸರಕಾರವು ಶಕ್ತಿಕಾಂತ್‌ ದಾಸ್‌ರನ್ನು ನೇಮಕ ಮಾಡಿತ್ತು. 61 ವರ್ಷದ ಶಕ್ತಿಕಾಂತ್‌ ದಾಸ್‌ ಅವರು 3 ವರ್ಷಗಳ ಅವಧಿಗೆ ಆರ್‌ಬಿಐ ಗವರ್ನರ್‌ ಆಗಿ ಮುಂದುವರಿಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next