Advertisement

Shakti Yojana: ಕರಾವಳಿಯ 2.8 ಕೋಟಿ ಮಹಿಳೆಯರಿಂದ ಉಚಿತ ಪ್ರಯಾಣ

01:34 AM Jan 25, 2024 | Team Udayavani |

ಮಂಗಳೂರು: ರಾಜ್ಯ ಸರಕಾರದ ಶಕ್ತಿ ಯೋಜನೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಎಸ್ಸಾರ್ಟಿಸಿಯ ಮಂಗಳೂರು ಮತ್ತು ಪುತ್ತೂರು ವಿಭಾಗದಿಂದ ಕಳೆದ ಏಳು ತಿಂಗಳಿನಲ್ಲಿ 2.8 ಕೋಟಿ ಮಹಿಳೆಯರಿಗೆ ಉಚಿತ ಟಿಕೆಟ್‌ ನೀಡಲಾಗಿದ್ದು, ಸುಮಾರು 91.15 ಕೋಟಿ ರೂ. ಆದಾಯ ಗಳಿಸಿದೆ.

Advertisement

ಜೂನ್‌ನಿಂದ ಪ್ರತೀ ತಿಂಗಳು ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಜೂನ್‌ 20,87,658 ಮಂದಿ, ಜುಲೈ 36,72,399, ಆಗಸ್ಟ್‌ 39,47,379, ಸೆಪ್ಟಂಬರ್‌ 37,49,167, ಅಕ್ಟೋಬರ್‌ 38,81,817, ನವೆಂಬರ್‌ 38,64,993, ಡಿಸೆಂಬರ್‌ 41,13,321 ಮಂದಿ ಮತ್ತು ಜನವರಿಯಲ್ಲಿ ಸದ್ಯ 26,94,261 ಮಂದಿ ಪ್ರಯಾಣಿಸಿದ್ದಾರೆ. ಒಟ್ಟು 2,80,10,995 ಮಂದಿ ಮಹಿಳೆಯರು ಸಂಚರಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next