Advertisement
ಶಕ್ತಿ ಯೋಜನೆ ಆರಂಭವಾದ ಜೂ.11ರಿಂದ ಇದುವರೆಗೆ ಜಿಲ್ಲೆಯಲ್ಲಿ 1,05,76,930 ಮಹಿಳೆಯರು ಉಚಿತ ಪ್ರಯಾಣದ ಟಿಕೆಟ್‌ಗಳನ್ನು ಪಡೆದಿದ್ದಾರೆ! ರಾಜ್ಯ ಸರ್ಕಾರ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳ ಪೈಕಿ ಶಕ್ತಿ ಯೋಜನೆ ಮೊದಲಿಗೆ ಅನುಷ್ಠಾನಗೊಂಡಿತು. ಆರಂಭದಿಂದಲೂ ಮಹಿಳೆಯರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಉದ್ಯೋಗಕ್ಕಾಗಿ ದೂರದ ನಗರ, ಪಟ್ಟಣಗಳಿಗೆ ತೆರಳುವ ಮಹಿಳೆಯರಿಗೆ, ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ಯೋಜನೆಯಿಂದ ಅನುಕೂಲವಾಗಿದೆ.
Related Articles
Advertisement
ಜಿಲ್ಲೆಯಲ್ಲಿ 507 ಬಸ್: ಚಾಮರಾಜನಗರ ವಿಭಾಗವು ಒಟ್ಟು 4 ಕೆಎಸ್‌ಆರ್‌ಟಿಸಿ ಘಟಕಗಳನ್ನು ಹೊಂದಿದ್ದು, 507 ಬಸ್ ಹೊಂದಿದೆ. ಮಹಿಳಾ ಸಬಲೀಕರಣದ ಭಾಗವಾಗಿ ಶಕ್ತಿ ಯೋಜನೆ ಯಶಸ್ವಿಯಾಗಿ ಜಿಲ್ಲೆಯಲ್ಲಿ ಅನುಷ್ಠಾನವಾಗುತ್ತಿದ್ದು, ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು, ವಿದ್ಯಾರ್ಥಿನಿಯರು ನಗರಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಬಸ್‌ಗಳಲ್ಲಿ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಲು ಶಕ್ತಿ ಯೋಜನೆಯಲ್ಲಿ ಅವಕಾಶವಾಗಿದೆ.
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದರಿಂದ ಕೆಲಸ ಕಾರ್ಯದ ನಿಮಿತ್ತ ಜಿಲ್ಲಾ, ತಾಲೂಕು ಕೇಂದ್ರಕ್ಕೆ ಹೋಗಿ ಬರಲು ಭರಿಸುತ್ತಿದ್ದ ಪ್ರಯಾಣದ ಖರ್ಚು ಉಳಿತಾಯವಾಗುತ್ತಿದೆ. ಬಡ ಕುಟುಂಬದ ನಮಗೆ ಬಸ್ ಚಾರ್ಜ್‌ಗೆ ಖರ್ಚಾಗುತ್ತಿದ್ದ ಹಣ ಅಗತ್ಯ ವಸ್ತುಗಳ ಖರೀದಿಗೆ ಬಳಸಲು ಸಹಾಯಕವಾಗಿದೆ.-ನಾಗಮ್ಮ, ಭೀಮನಬೀಡು, ಗುಂಡ್ಲುಪೇಟೆ ತಾಲೂಕು.
ಜಿಲ್ಲೆಯಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಿದೆ. ವಾರಾಂತ್ಯದ ದಿನಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಬಸ್‌ಗಳನ್ನು ನಿಯೋಜಿಸಲಾಗುತ್ತಿದೆ. ಅಗತ್ಯಕ್ಕೆ ತಕ್ಕಂತೆ ನಿಗಮವು ಬಸ್‌ಗಳ ಕಾರ್ಯಾಚರಣೆಗೆ ಕ್ರಮ ವಹಿಸುತ್ತಿದೆ.-ಅಶೋಕ್‌ಕುಮಾರ್, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ, ಚಾ.ನಗರ ವಿಭಾಗ.
ತಿ.ನರಸೀಪುರ ತಾಲೂಕಿನಿಂದ ಚಾಮರಾಜನಗರಕ್ಕೆ ಪ್ರತಿನಿತ್ಯ ಉದ್ಯೋಗಕ್ಕಾಗಿ ಬರುತ್ತಿದ್ದೇನೆ. ನನಗೆ ಬರುವ ಸ್ವಲ್ಪ ತಿಂಗಳ ವೇತನದಲ್ಲಿ ಬಸ್ ದರಕ್ಕೆ ಶೇ.25 ಖರ್ಚು ಆಗುತ್ತಿತ್ತು. ಉಚಿತ ಪ್ರಯಾಣದಿಂದ ನನಗೆ ಹಣ ಉಳಿತಾಯ ಆಗಿದೆ. ಇನ್ನಿತರ ಖರ್ಚು ಸರಿದೂಗಿಸಿಕೊಳ್ಳಲು ಅನುಕೂಲವಾಗಿದೆ.-ಪದ್ಮಾ, ಖಾಸಗಿ ಸಂಸ್ಥೆ ಉದ್ಯೋಗಿ. ಚಾ.ನಗರ.
– ಕೆ.ಎಸ್.ಬನಶಂಕರ ಆರಾಧ್ಯ