Advertisement

ಶಕೀಲಾ ಜೀವನ ಸಿನಿಮಾ ಇಂದ್ರಜಿತ್‌ ನಿರ್ದೇಶನ

07:30 AM Mar 09, 2018 | Team Udayavani |

ನವದೆಹಲಿ: 90ರ ದಶಕದಲ್ಲಿ ಮಲಯಾಳಂ ಚಿತ್ರರಂಗವನ್ನು ಆಳಿದ ವಯಸ್ಕರ ಚಿತ್ರಗಳ ತಾರೆ ಶಕೀಲಾ ಅವರ ಬದುಕಿನ ನೈಜ ಘಟನೆಗಳನ್ನಾಧರಿಸಿದ ಸಿನಿಮಾ ಮುಂದಿನ ತಿಂಗಳಿಂದ ಆರಂಭವಾಗಲಿದೆ. ಅದರಲ್ಲಿ ಬಾಲಿವುಡ್‌ನ‌ಟಿ ರಿಚಾ ಛಡ್ಡಾ ಶಕೀಲಾ ಪಾತ್ರ ನಿರ್ವಹಿಸಲಿದ್ದಾರೆ. ಕನ್ನಡದ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ನಿರ್ದೇಶಿಸಲಿರುವ ಈ ಚಿತ್ರದ ಚಿತ್ರಕಥೆ ಹಾಗೂ ನಿರ್ಮಾಣ ಪೂರ್ವ ತಯಾರಿಗಳನ್ನು ಮಾಡಲಾಗುತ್ತಿದ್ದು, ಮುಂದಿನ ತಿಂಗಳು ಶೂಟಿಂಗ್‌ ಆರಂಭವಾಗಲಿದೆ. ಹದಿನಾರನೇ ವಯಸ್ಸಿಗೇ ಚಿತ್ರರಂಗಕ್ಕೆ ಕಾಲಿಟ್ಟ ಶಕೀಲಾ, ಕನ್ನಡ, ಮಲಯಾಳಂ, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದರು. ವಿಶೇಷವಾಗಿ ವಯಸ್ಕರ ಸಿನಿಮಾಗಳಲ್ಲಿ ನಟಿಸಿ ದಾಖಲೆ ಬರೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next