Advertisement

Shakib Fans: ಶಕೀಬ್‌ ಅಭಿಮಾನಿಗಳಿಗೆ ವಿರೋಧಿ ಗುಂಪಿನಿಂದ ಹಲ್ಲೆ

09:06 AM Oct 22, 2024 | Team Udayavani |

ಢಾಕಾ: ಬಾಂಗ್ಲಾದೇಶದ ಆಲ್‌ ರೌಂಡರ್‌ ಶಕೀಬ್‌ ಅಲ್‌ ಹಸನ್‌ ಅವರ ಅಭಿಮಾನಿಗಳಿಗೆ ಢಾಕಾದಲ್ಲಿ ಪ್ರತಿಭಟನಾ ನಿರತ ಮತ್ತೂಂದು ಗುಂಪು ಹಲ್ಲೆ ನಡೆಸಿದ್ದಾಗಿ ವರದಿಯಾಗಿದೆ.

Advertisement

ಢಾಕಾದಲ್ಲಿ ಬಾಂಗ್ಲಾ-ದಕ್ಷಿಣ ಆಫ್ರಿಕಾ ನಡುವಿನ ಮೊದಲನೇ ಟೆಸ್ಟ್‌ ಪಂದ್ಯಕ್ಕೂ ಮುನ್ನ ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಶಕೀಬ್‌, ತವರಿನಲ್ಲಿ ವಿದಾಯ ಪಂದ್ಯ ಆಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಅಭಿಮಾನಿಗಳಿಗೆ, ಶಕೀಬ್‌ ವಿರೋಧಿ ಗುಂಪೊಂದು ಕಬ್ಬಿಣದ ಸಲಾಕೆ ಮತ್ತು ಬಿದಿರಿನ ಕೋಲುಗಳಿಂದ ಹಲ್ಲೆ ನಡೆಸಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next