Advertisement
ಸಂಭಾಷಣೆಯಲ್ಲೇನಿದೆ?ಜನವರಿ, 2018: ಶ್ರೀಲಂಕಾ, ಜಿಂಬಾಬ್ವೆ ವಿರುದ್ಧದ ತ್ರಿಕೋನ ಸರಣಿಗೆ ಶಕಿಬ್ ಬಾಂಗ್ಲಾ ತಂಡಕ್ಕೆ ಆಯ್ಕೆಯಾಗಿದ್ದರು. ಈ ವೇಳೆ ಅಗರ್ವಾಲ್‌ನಿಂದ ಶಕಿಬ್‌ಗ ವಾಟ್ಸ್‌ಆ್ಯಪ್ ಸಂದೇಶ ಬಂದಿತ್ತು. 2018, ಜ.18ರಂದು ನಡೆದ ಪಂದ್ಯದಲ್ಲಿ ಶಕಿಬ್ ಪಂದ್ಯಶ್ರೇಷ್ಠರಾಗಿದ್ದರು. ಶಕಿಬ್‌ರನ್ನು ಅಭಿನಂದಿಸಿದ್ದ ಅಗರ್ವಾಲ್, “ಈ ಬಗ್ಗೆ ನಾವು ಕೆಲಸ ಮಾಡೋಣವೇ? ಅಥವಾ ಐಪಿಎಲ್ ಮುಗಿಯುವ ವರೆಗೆ ನಾನು ಕಾಯಬೇಕಾ’ ಎಂದು ವಿಚಿತ್ರವಾಗಿ ಕೇಳಿದ್ದರು. ಇಲ್ಲಿ ಕೆಲಸವೆನ್ನುವುದು ಮಾಹಿತಿ ರವಾನೆಗೆ ಬಂದ ಬೇಡಿಕೆ. ಇದನ್ನು ಶಕಿಬ್ ಸಂಬಂಧಪಟ್ಟ ಯಾವ ತನಿಖಾಸಂಸ್ಥೆಗಳಿಗೂ ತಿಳಿಸಿರಲಿಲ್ಲ
Related Articles
ಶಕಿಬ್ ನಿಷೇಧ ಬಾಂಗ್ಲಾದ ಎಲ್ಲ ಪತ್ರಿಕೆಗಳಲ್ಲೂ ಮುಖಪುಟದ ಸುದ್ದಿಯಾಗಿದೆ.ದ ಡೈಲಿ ಸ್ಟಾರ್ ದಿನಪತ್ರಿಕೆ ಶಕಿಬ್ ಘಟನೆಯನ್ನು, ಬಾಂಗ್ಲಾ ಕ್ರಿಕೆಟ್‌ನ ಕರಾಳದಿನ ಎಂದು ವರ್ಣಿಸಿದೆ.
Advertisement
ಸಹ ಕ್ರಿಕೆಟಿಗರ ಬೆಂಬಲಶಕಿಬ್ ನಿಷೇಧ ಆಘಾತ ಸೃಷ್ಟಿಸಿದರೂ ಬಾಂಗ್ಲಾ ಕ್ರಿಕೆಟಿಗರು ತಮ್ಮ ಮಾಜಿ ಆಟಗಾರನಿಗೆ ಬೆಂಬಲ ಸೂಚಿಸಿದ್ದಾರೆ. ಮುಶ್ಫಿàಕರ್ ರಹೀಂ ಭಾವುಕ ಸಂದೇಶ ಪ್ರಕಟಿಸಿ, “ನಿನ್ನೊಂದಿಗೆ ಕಳೆದ 18 ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದೇನೆ. ನೀನಿಲ್ಲದೆ ಮೈದಾನಕ್ಕಿಳಿಯುವುದು ನನಗೆ ಬಹಳ ಕಷ್ಟ. ನೀನು ಮತ್ತೆ ಚಾಂಪಿಯನ್ ರೀತಿ ಕ್ರಿಕೆಟ್‌ಗೆ ಮರಳುತ್ತೀಯ ಎಂಬ ನಂಬಿಕೆ ಇದೆ’ ಎಂದಿದ್ದಾರೆ. ಏಕದಿನ ತಂಡದ ನಾಯಕ ಮಶ್ರಫೆ ಮೊರ್ತಜ, “ಈ ಘಟನೆಯಿಂದ ನಾನು ಹಲವು ದಿನ ನಿದ್ದೆಯಿಲ್ಲದೆ ಕಳೆಯುವುದು ಖಚಿತ. ಆದರೆ ಮತ್ತೆ ಶಾಂತಿಯಿಂದ ನಿದ್ರಿಸುವ ದಿನ ಬರಲಿದೆ. ನಿನ್ನ ನಾಯಕತ್ವದಲ್ಲೇ ಬಾಂಗ್ಲಾ 2023ರ ವಿಶ್ವಕಪ್ ಫೈನಲ್‌ನಲ್ಲಿ ಆಡುವ ಭರವಸೆ ಇದೆ’ ಎಂದಿದ್ದಾರೆ. ಐಸಿಸಿಗೆ ಯಾಕೆ ತಿಳಿಸಲಿಲ್ಲ?
ಶಕಿಬ್ ಬುಕ್ಕಿಯೊಂದಿಗೆ ನಡೆಸಿದ ಸಂಭಾಷಣೆಗಳನ್ನು ಬಾಂಗ್ಲಾ ಕ್ರಿಕೆಟ್ ಮಂಡಳಿಯಾಗಲಿ, ಐಸಿಸಿಗಾಗಲಿ ತಿಳಿಸಲಿಲ್ಲ. ಇದಕ್ಕೆ ಆ ವ್ಯಕ್ತಿ ಬಗ್ಗೆ ಕಾಳಜಿಯಿದ್ದದ್ದೇ ಕಾರಣ. ಮುಂದೆ ಮಾತನಾಡುತ್ತ ಹೋದಂತೆ ಅಗರ್ವಾಲ್ ಬುಕ್ಕಿ ಇರಬಹುದು ಎಂಬ ಸಂದೇಹ ಶಕಿಬ್‌ಗ ಬಂದಿದೆ. ಆದರೆ ಅಷ್ಟೂ ಸಂಭಾಷಣೆಗಳಲ್ಲಿ ಒಮ್ಮೆಯೂ ತಾನು ಯಾವ ಮಾಹಿತಿಯನ್ನೂ ನೀಡಿಲ್ಲ, ಹಣವಾಗಲೀ ಇನ್ನಿತರ ಯಾವುದೇ ಉಡುಗೊರೆಯನ್ನಾಗಲಿ ಪಡೆದಿಲ್ಲ ಎಂದು ಖಚಿತಪಡಿಸಿದ್ದಾರೆ.