Advertisement

Bangladesh; ರಾಜಕೀಯ ಇನ್ನಿಂಗ್ಸ್ ನಲ್ಲೂ ಉತ್ತಮ ಆರಂಭ: ಚುನಾವಣೆ ಗೆದ್ದ ಶಕಿಬ್ ಅಲ್ ಹಸನ್

11:47 AM Jan 08, 2024 | Team Udayavani |

ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ಶಕಿಬ್ ಅಲ್ ಹಸನ್ ಅವರು ಬಾಂಗ್ಲಾದೇಶ ಸಂಸತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಅವಾಮಿ ಲೀಗ್ ಪಕ್ಷದ ಪರವಾಗಿ ಮಗುರಾ-1ರಲ್ಲಿ ಚುನಾವಣೆ ಸ್ಪರ್ಧಿಸಿದ್ದ ಶಕೀಬ್ ಅಲ್ ಹಸನ್ ಅದ್ಭುತ ಗೆಲುವು ಕಂಡಿದ್ದಾರೆ. ಈ ಮೂಲಕ ರಾಜಕೀಯ ಇನ್ನಿಂಗ್ಸ್ ನಲ್ಲಿಯೂ ಉತ್ತಮ ಆರಂಭ ಪಡೆದಿದ್ದಾರೆ.

Advertisement

ಶಕಿಬ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಜಿ ರೆಜಾಲ್ ಹೊಸೈನ್ ವಿರುದ್ಧ 1,50,000 ಮತಗಳ ಅಂತರದಿಂದ ಮೇಲುಗೈ ಸಾಧಿಸಿದರು. ಹೊಸೈನ್ 45,993 ಮತಗಳನ್ನು ಮಾತ್ರ ಪಡೆದರು. ಚುನಾವಣಾ ಪ್ರಚಾರಕ್ಕಾಗಿ ಶಕಿಬ್ ಅವರು ಕ್ರಿಕೆಟ್‌ನಿಂದ ರಜೆ ಪಡೆದಿದ್ದರು.

ಗಮನಾರ್ಹವಾಗಿ, ಬಾಂಗ್ಲಾದೇಶದ ಪ್ರಧಾನಿ ಅವಾಮಿ ಲೀಗ್‌ ಶೇಖ್ ಹಸೀನಾ ಅವರು ಮತ್ತೊಂದು ಅವಧಿಗೆ ಆಯ್ಕೆಯಾಗಿದ್ದಾರೆ. ಅವರ ಪಕ್ಷವು ಸಂಸತ್ತಿನ 300 ಸ್ಥಾನಗಳಲ್ಲಿ 200 ಸ್ಥಾನಗಳನ್ನು ಗೆದ್ದಿದೆ.

ಕಳೆದ ಏಕದಿನ ವಿಶ್ವಕಪ್ ನಲ್ಲಿ ಶಕಿಬ್ ಅಲ್ ಹಸನ್ ಅವರು ಬಾಂಗ್ಲಾದೇಶ ತಂಡವನ್ನು ಮುನ್ನಡೆಸಿದ್ದರು. ಹತ್ತು ತಂಡಗಳ ಕೂಟದಲ್ಲಿ ಎಂಟನೇ ತಂಡವಾಗಿ ಬಾಂಗ್ಲಾ ಕೂಟ ಮುಗಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next