Advertisement

ಮರಳಿದ ಶಕಿಬ್‌ಗ ಬಾಂಗ್ಲಾ ನಾಯಕತ್ವ

06:15 AM Nov 18, 2018 | |

ಢಾಕಾ: ಕಳೆದ ಏಶ್ಯ ಕಪ್‌ ವೇಳೆ ಗಾಯಾಳಾಗಿ ವಿಶ್ರಾಂತಿಯಲ್ಲಿದ್ದ ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ಈಗ ಆಡಲು ಅಣಿಯಾಗಿದ್ದಾರೆ. ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಅವರು ಬಾಂಗ್ಲಾದೇಶ ತಂಡವನ್ನು ಮುನ್ನಡೆಸಲಿದ್ದಾರೆ.

Advertisement

ನ. 22ರಿಂದ ಚಿತ್ತಗಾಂಗ್‌ನಲ್ಲಿ ನಡೆಯಲಿರುವ ಈ ಟೆಸ್ಟ್‌ ಪಂದ್ಯಕ್ಕಾಗಿ 13 ಸದಸ್ಯರ ತಂಡವನ್ನು ಪ್ರಕಟಿಸಲಾಗಿದ್ದು, ಬ್ಯಾಟ್ಸ್‌ಮನ್‌ ಸೌಮ್ಯ ಸರ್ಕಾರ್‌ ಮತ್ತು 18ರ ಹರೆಯದ ಆಫ್ಬ್ರೇಕ್‌ ಬೌಲರ್‌ ನಯೀಮ್‌ ಹಸನ್‌ ಅವರನ್ನು ಸೇರಿಸಿಕೊಳ್ಳಲಾಗಿದೆ. ಲಿಟನ್‌ ದಾಸ್‌, ಶಫಿಯುಲ್‌ ಇಸ್ಲಾಮ್‌, ನಜ್ಮುಲ್‌ ಇಸ್ಲಾಮ್‌ ಅವರನ್ನು ಕೈಬಿಡಲಾಗಿದೆ.

ಬಾಂಗ್ಲಾದೇಶ ಟೆಸ್ಟ್‌ ತಂಡ: ಶಕಿಬ್‌ ಅಲ್‌ ಹಸನ್‌ (ನಾಯಕ), ಸೌಮ್ಯ ಸರ್ಕಾರ್‌, ಇಮ್ರುಲ್‌ ಕಯೆಸ್‌, ಮೊಹಮ್ಮದ್‌ ಮಿಥುನ್‌, ಮೊಮಿನುಲ್‌ ಹಕ್‌, ಮುಶ್ಫಿಕರ್‌ ರಹೀಂ, ಅರೀಫ‌ುಲ್‌ ಹಕ್‌, ಮಹಮದುಲ್ಲ, ಮೆಹಿದಿ ಹಸನ್‌ ಮಿರಾಜ್‌, ಮುಸ್ತಫಿಜುರ್‌ ರೆಹಮಾನ್‌, ತೈಜುಲ್‌ ಇಸ್ಲಾಮ್‌, ಸಯ್ಯದ್‌ ಖಲೀದ್‌ ಅಹ್ಮದ್‌, ನಯೀಮ್‌ ಹಸನ್‌.

Advertisement

Udayavani is now on Telegram. Click here to join our channel and stay updated with the latest news.

Next