Advertisement

ಟಿ20ಯಲ್ಲಿ 300 ವಿಕೆಟ್‌ ಕಿತ್ತ ಶಕಿಬ್‌

06:00 AM Apr 26, 2018 | Team Udayavani |

ಹೊಸದಿಲ್ಲಿ: ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ಮುಂಬೈ ಇಂಡಿಯನ್ಸ್‌ ವಿರುದ್ಧ ರೋಹಿತ್‌ ಶರ್ಮ ಅವರ ವಿಕೆಟ್‌ ಪಡೆಯುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ 300 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದಾರೆ. 

Advertisement

ಈ ಸಾಧನೆ ಮಾಡಿದ ಬಾಂಗ್ಲಾದ ಮೊದಲಿಗ ಮತ್ತು ಒಟ್ಟಾರೆ 5ನೇ ಕ್ರಿಕೆಟಿಗರಾಗಿದ್ದಾರೆ. ಇದಕ್ಕೂ ಮುನ್ನ ವೆಸ್ಟ್‌ ಇಂಡೀಸ್‌ನ ಡ್ವೇನ್‌ ಬ್ರಾವೋ (414), ಶ್ರೀಲಂಕಾದ ಲಸಿತ್‌ ಮಾಲಿಂಗ (348), ವೆಸ್ಟ್‌ ಇಂಡೀಸ್‌ನ ಸುನೀಲ್‌ ನಾರಾಯಣ್‌ (324), ಪಾಕಿಸ್ಥಾನದ ಶಾಹಿದ್‌ ಅಫ್ರಿದಿ (300) ಈ ಸಾಧನೆ ಮಾಡಿದ್ದರು.  ಶಕಿಬ್‌ ಇದಕ್ಕೂ ಮುನ್ನ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್‌ ರೈಡರ್ ತಂಡದಲ್ಲಿ ಆಡುತ್ತಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next