Advertisement

ಮಳೆ ನೀರನ್ನು ಇಂಗಿಸುವ ಮಹತ್ಕಾರ್ಯಕ್ಕೆ ಕೈ ಜೋಡಿಸಿ: ಆನಂದ ಸಿ.ಕುಂದರ್‌

10:14 PM Jul 01, 2019 | Sriram |

ಕೋಟೇಶ್ವರ: ಈ ಬಾರಿ ಮಳೆ ವಿಳಂಬವಾಗಿ ನೀರಿನ ಅಭಾವ ಕಂಡಿದ್ದೇವೆ. ಮಳೆಗಾಲದಲ್ಲಿ ಮಳೆ ನೀರನ್ನು ಹರಿದು ಹೋಗಲು ಬಿಡದೇ ಅದನ್ನು ತಮ್ಮ ವಠಾರದಲ್ಲಿ ಭೂಮಿಗೆ ಇಂಗಿಸುವ ಮಹತ್ಕಾರ್ಯ ಸಾರ್ವಜನಿಕರು ಕೈಜೋಡಿಸಬೇಕು ಎಂದು ಕೋಟ ಮಣೂರು ಗೀತಾನಂದ ಫೌಂಡೇಶನ್‌ ಪ್ರವರ್ತಕ ಆನಂದ ಸಿ.ಕುಂದರ್‌ ಹೇಳಿದರು.

Advertisement

ರವಿವಾರ ಸಂಜೆ ಬೀಜಾಡಿ ಗೋಪಾಡಿ ಮಿತ್ರ ಸಂಗಮ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೋಟೇಶ್ವರ ವಲಯ, ಕೋಟ ಪಡುಕರೆ ಗೀತಾನಂದ ಫೌಂಡೇಶನ್‌ ಆಶ್ರಯದಲ್ಲಿ ಬೀಜಾಡಿ ಮಿತ್ರಸೌಧದಲ್ಲಿ ನಡೆದ ಮಳೆ ನೀರು ಕೊಯ್ಲು ಕಾರ್ಯಾಗಾರ, ಪ್ರಾತ್ಯಕ್ಷಿಕೆ ಹಾಗೂ ಸಸಿ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರ ಮನೆಯಲ್ಲೂ ಮಳೆ ನೀರು ಕೊಯ್ಲು ಘಟಕವಾದರೆ ನೀರಿನ ಅಭಾವ ತಪ್ಪಿಸಬಹುದು. ಮುಂದಿನ ಪೀಳಿಗೆಗೆ ಅನುಕೂಲಕರ ವಾತಾವರಣ ಸƒಷ್ಟಿಯಾಗ ಬೇಕಾದರೆ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದರು.

ಇಂದಿನ ಯುವ ಜನತೆ ಪರಿಸರದ ಬಗ್ಗೆ ಅರಿತು ತಮ್ಮ ತಮ್ಮ ಊರಲ್ಲಿ ಸಸಿ ನೆಟ್ಟು ಬೆಳೆಸಿ, ಶುದ್ದ ಗಾಳಿ, ಸಮೃದ್ಧ ಪರಿಸರ ನಿರ್ಮಿಸಬೇಕು ಎಂದು ತಿಳಿಸಿದರು.

ಭಾರತೀಯ ಕಿಸಾನ್‌ ಸಂಘದ ಕುಂದಾಪುರ ತಾಲೂಕು ಉಪಾಧ್ಯಕ್ಷ, ಪ್ರಗತಿಪರ ಕೃಷಿಕ ಬಿ. ಶೇಷಗಿರಿ ಗೋಟ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್‌ ಸದಸ್ಯೆ ಶ್ರೀಲತಾ ಸುರೇಶ ಶೆಟ್ಟಿ, ಯೋಜನೆಯ ಜಿಲ್ಲಾ ನಿರ್ದೇಶಕ ಗಣೇಶ. ಬಿ ಅತಿಥಿಗಳಾಗಿ ಆಗಮಿಸಿದರು.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಲತಜ್ಞ ಜೋಸೆಫ್‌ ರೆಬೆಲ್ಲೊ ಸಂಪನ್ಮೂಲ ವ್ಯಕ್ತಿಯಾಗಿ ಮಳೆ ನೀರು ಕೊಯ್ಲು ಬಗ್ಗೆ ವಿವರವಾದ ಮಾಹಿತಿ ನೀಡಿದರು.

Advertisement

ಪಂಚಾಯತ್‌ ಸದಸ್ಯ, ಮಿತ್ರ ಸಂಗಮದ ಗೌರವಾಧ್ಯಕ್ಷ ಬಿ. ವಾದಿರಾಜ್‌ ಹೆಬ್ಟಾರ್‌, ಕಾರ್ಯದರ್ಶಿ ಚಂದ್ರ ಬಿ. ಎನ್‌., ಗ್ರಾಮಾಭಿವೃದ್ದಿ ಯೋಜನೆ ನಾಗರಾಜ್‌, ಯೋಜನೆಯ ಕೇಂದ್ರ ಸಮಿತಿಯ ಅಧ್ಯಕ್ಷೆ ಶೋಭಾ ಚಂದ್‌, ಬೀಜಾಡಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಶಾರದಾ ಮೊದಲಾದವರು ಉಪಸ್ಥಿತರಿದ್ದರು.

ಮಿತ್ರ ಸಂಗಮದ ಅಧ್ಯಕ್ಷ ಮಂಜುನಾಥ್‌ ಬೀಜಾಡಿ ಸ್ವಾಗತಿಸಿದರು. ಪತ್ರಕರ್ತ ಚಂದ್ರಶೇಖರ್‌ ಬೀಜಾಡಿ ನಿರೂಪಿಸಿದರು. ಗ್ರಾಮಾಭಿವೃದ್ದಿ ಯೋಜನೆಯ ಕೃಷಿ ಅಧಿ ಕಾರಿ ಚೇತನ್‌ ಕುಮಾರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next