Advertisement
ಸಮಾನತೆ ಸಮಾಜ ನಿರ್ಮಾಣಕ್ಕೆ ಬಸವಣ್ಣವರ ಜೊತೆಯಾಗಿ ಹೋರಾಡಿದ ಮಹಾನ್ ಶರಣ ಅಪ್ಪಣನವರು. ಬಸವಣ್ಣನವರ ಸಮಾನಾಂತರ ಶರಣರಲ್ಲಿ ಹಡಪದ ಅಪ್ಪಣನವರು ಒಬ್ಬರು ಎಂದ ಅವರು, ಸಮಾಜದ ಜನರು ಶೈಕ್ಷಣಿಕವಾಗಿ ಮುಂದೆ ಬಂದರೆ ಮಾತ್ರ ಎಲ್ಲ ರಂಗದಲ್ಲಿ ಅಭಿವೃದ್ಧಿ ಸಾಧ್ಯ ಎಂದರು.
Related Articles
Advertisement
ಮಾಜಿ ಶಾಸಕರ ರಮೇಶ ಭೂಸನೂರ ಮಾತನಾಡಿ, ಸಣ್ಣ ಸಣ್ಣ ಸಮಾಜಗಳು ಸೂಚಿತ ಅನ್ಯಾಯಕ್ಕೆ ಒಳಗಾಗಿರುವ ಸಮಾಜಗಳಲ್ಲಿ ಒಗ್ಗಟ್ಟಾಗಿ ಜಾಗೃತರಾಗುತ್ತಿದ್ದು, ಅವರಿಗೆ ಪ್ರೋತ್ಸಾಹಿಸಬೇಕು. ನನ್ನ ಅವಧಿಯಲ್ಲಿ ಸಮಾಜಕ್ಕೆ ಸಾಕಷ್ಟು ಸಹಾಯ ಮಾಡಿರುವುದಾಗಿ ತಿಳಿಸಿದ ಅವರು, ಕೆಂದ್ರ ಸಚಿವ ರಮೇಶ ಜಿಗಜಿಣಗಿ ತಮ್ಮ ಸಂಸದರ ಅನುದಾನದಲ್ಲಿ 3 ಲಕ್ಷ ಅನುದಾನ ಮಂಜೂರು ಮಾಡಿದ್ದಾರೆ ಎಂದು ತಿಳಿಸಿದರು.
ಅಶೋಕ ಮನಗೂಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಡಪದ ಸಮಾಜಕ್ಕೆ 10 ಲಕ್ಷ ಅನುದಾನವನ್ನು ಸಚಿವರ ಅನುದಾನದಿಂದ ಕೊಡಿಸುವುದಾಗಿ ಭರವಸೆ ನೀಡಿದರು. ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು,ಪ್ರಜಾಪಿತ ಬ್ರಹ್ಮಕುಮಾರಿ ರೇಣುಕಾ ಅಕ್ಕನವರು, ಶಿವುಕುಮಾರ ಗುಂದಗಿ, ರಮೇಶ ಬಂಟನೂರ ಮುಂತಾದವರು ಮಾತನಾಡಿದರು. ಬಸವರಾಜ ಧನಶ್ರೀ, ಪಿಎಸ್‌ಐ ಸಿ.ಬಿ. ಚಿಕ್ಕೋಡಿ, ಮಲ್ಲಪ್ಪ ತೋಡಕರ, ದೇವಪ್ಪ ಗುಣಾರಿ, ನಾನಾಗೌಡ ಪಾಟೀಲ, ಡಾ| ಶ್ರೀಶೈಲ ಪಾಟೀಲ, ಮಹಿಬೂಬ ಮಸಳಿ, ಅಶೋಕ ಕೋಳಾರಿ, ಪ್ರಭು ವಾಲೀಕಾರ, ಬಸವರಾಜ ತೆಲ್ಲೂರ, ಮಲ್ಲು ಅಚಲೇರಿ, ಹನುಮಂತ ಹೂಗಾರ, ಶ್ರೀಶೈಲ ಅಗಸರ, ಹಿರಗಪ್ಪ ಕಟ್ಟಿಮನಿ, ಸಮಾಜ ಅಧ್ಯಕ್ಷ ಶಂಕರ ಹಡಪದ, ಕಾರ್ಯದರ್ಶಿ ಸತೀಶ ಹಪಡದ, ತಾಲೂಕಾಧ್ಯಕ್ಷ ಮಹಾಂತೇಶ ಮೇಲಿನಮನಿ, ಸಿಂದಗಿ ಪುರಸಭೆ ಸದಸ್ಯ ಚಂದ್ರಶೇಖರ ಅಮಲಿಹಾಳ, ಶಿವಾನಂದ ಹಡಪದ ಇತರರಿದ್ದರು.