Advertisement
ಮಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ನಿರ್ಮಾಪಕರಲ್ಲೊಬ್ಬರಾದ ನಿತ್ಯಾನಂದ ನಾಯಕ್ ನರಸಿಂಗೆ ಅವರು, ಈ ಚಿತ್ರವನ್ನುಶ್ರೀಶ ಎಳ್ಳಾರೆ ನಿರ್ದೇಶಿಸಿದ್ದು, ನಿತ್ಯಾನಂದ ನಾಯಕ್ ನರಸಿಂಗೆ, ಉಮೇಶ್ ಪ್ರಭು ಮಾಣಿಬೆಟ್ಟು ನಿರ್ಮಾಣ ಮಾಡಿದ್ದಾರೆ. ಡಾಲ್ವಿನ್ ಕೊಳಲಗಿರಿ ಸಂಗೀತ ಚಿತ್ರಕ್ಕಿದೆ. ತುಳುನಾಡಿನ ಖ್ಯಾತ ಛಾಯಾಗ್ರಾಹಕರಾದ ಪ್ರಜ್ವಲ್ ಸುವರ್ಣ ಹಾಗೂ ಅರುಣ್ ರೈ ಪುತ್ತೂರು ಕ್ಯಾಮರಾ ಕೈಚಳಕವಿದೆ ಎಂದರು.
ಚಿತ್ರದುದ್ದಕ್ಕೂ ನಗುವಿನ ಟಾನಿಕ್ ಇದ್ದು, ಹೊಟ್ಟೆ ಹುಣ್ಣಾಗಿಸಲು ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ಉಮೇಶ್ ಮಿಜಾರ್, ಪ್ರವೀಣ್ ಮಾರ್ಕಮೆ, ಮಿಮಿಕ್ರಿ ಶರಣ್ ಜೊತೆಯಾಗುವ ಸನ್ನಿವೇಶಗಳು ನೈಜ್ಯವಾದ ಹಾಸ್ಯದ ಹೊನಲಾಗಿಸಲಿವೆ. ಶುದ್ಧವಾದ ಭಾಷೆ ಬಳಕೆ, ಉತ್ತಮವಾದ ಸಂಭಾಷಣೆ ಮನಮುಟ್ಟುವಂತಹ ನಟನೆಯನ್ನು ಹೊಂದಿರುವ ಚಿತ್ರ ಇದಾಗಿದೆ. ತುಳು ಸಿನೆಮಾದಲ್ಲಿ ವೈವಿಧ್ಯತೆ ಇರಬೇಕು ಎಂಬ ನೆಲೆಯಲ್ಲಿ ಕಾಮಿಡಿ, ಹಾರರ್, ಥ್ರಿಲ್ಲರ್, ಸಸ್ಪೆನ್ಸ್ ಹೊಂದಿರುವ ಹೊಸತನದ ಚಿತ್ರ ಶಕಲಕ ಬೂಮ್ ಬೂಮ್ ಆಗಿದೆ ಎನ್ನುತ್ತಾರೆ ಅವರು.
Related Articles
ಸುಮಾರು 150 ವರ್ಷದ ಹಳೆಯ ಮನೆಯಲ್ಲಿ ಚಿತ್ರೀಕರಣ ನಡೆಸಿದ್ದೇವೆ. ಜನರನ್ನು ಮೋಸ ಮಾಡುತ್ತ ಬದುಕುವವರು, ಸಂಪತ್ತಿನ ಆಸೆಯಿಂದ ಬಂದು, ಒಂದು ಪಾಳು ಬಿದ್ದ ಮನೆಯಲ್ಲಿ ಬಂಧಿಯಾಗುತ್ತಾರೆ..ಆ ಮನೆಯ ರಹಸ್ಯ ಏನು? ಈ ಹಿಂದೆ ಆ ಮನೆಯಲ್ಲಿ ಏನಾಗಿತ್ತು? ನ್ಯಾಯ ಗೆಲ್ಲುತ್ತದಾ? ಸತ್ಯಕ್ಕೆ ಜಯವಿದೆಯಾ? ಎನ್ನುವ ವಿಶಿಷ್ಟವಾದ ಕಥಾಹಂದರ ಹೊಂದಿರುವ ವಿಭಿನ್ನವಾದ ಚಿತ್ರ ಇದಾಗಿದೆ. ಅಂಗ ದಾನ ಮಾಡಲು www.jeevasarthakathe.karnataka.gov.in ಲಾಗಿನ್ ಆಗಿ ಇತರರ ಬಾಳಿಗೆ ಬೆಳಕಾಗಿ ಎನ್ನುವ ಸಂದೇಶವನ್ನು ನಮ್ಮ ಚಿತ್ರತಂಡದಿಂದ ಸಾರ್ವಜನಿಕರಿಗೆ ತಿಳಿಯಪಡಿಸುತ್ತಿದ್ದೇವೆ ಎಂದರು.
Advertisement
ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಪ್ರಮುಖರಾದ ಗಾಡ್ವಿನ್ ಸ್ಪಾರ್ಕಲ್, ಸುನಿಲ್ ಕಡ್ತಲ, ಲಂಚುಲಾಲ್, ಡಾಲ್ವಿನ್ ಕೊಳಲಗಿರಿ, ವಿಘ್ನೇಶ್ ಇದ್ದರು.