Advertisement

ಪಲಿಮಾರು ಮಠಕ್ಕೆ ಉತ್ತರಾಧಿಕಾರಿ ಆಯ್ಕೆ

09:11 AM May 12, 2019 | Sriram |

ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು ಶೈಲೇಶ ಉಪಾಧ್ಯಾಯರನ್ನು ಪಟ್ಟ ಶಿಷ್ಯರನ್ನಾಗಿ ಸ್ವೀಕರಿಸುತ್ತಿದ್ದಾರೆ. ಶುಕ್ರವಾರ ಸನ್ಯಾಸಾಶ್ರಮ ಸ್ವೀಕಾರ ವಿಧಿಗಳು ನಡೆದಿದ್ದು ರವಿವಾರ ಮಠದ ಉತ್ತರಾಧಿಕಾರಿಯಾಗಿ ಸ್ವೀಕರಿಸುವ ಪ್ರಕ್ರಿಯೆಗಳು ನಡೆಯಲಿವೆ.

Advertisement

ಉಡುಪಿ: ಇದು ಕರಾರುವಾಕ್ಕಾಗಿ 40 ವರ್ಷಗಳ ಹಿಂದಿನ ಘಟನೆ, ಈಗ ಮತ್ತೆ ಮರುಕಳಿಸುತ್ತಿದೆ. ಘಟನೆ ನಡೆದ / ನಡೆಯುತ್ತಿರುವ ಸ್ಥಳ ಮಾತ್ರ ಬೇರೆ ಬೇರೆ.

ಶ್ರೀಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಗೆ ಈಗ 63 ವರ್ಷ.

ಅದಮಾರು ಮೂಲಮಠದಲ್ಲಿ ಪಲಿಮಾರು ಮಠದ ಶ್ರೀವಿದ್ಯಾಮಾನ್ಯತೀರ್ಥರು ಯತಿ ಶಿಷ್ಯರು ಮತ್ತು ಗೃಹಸ್ಥರಿಗೆ ಶಾಸ್ತ್ರಪಾಠಗಳನ್ನು ಗುರುಕುಲ ಮಾದರಿಯಲ್ಲಿ ನಡೆಸುತ್ತಿದ್ದ ಸಂದರ್ಭ ಮಂಗಳೂರು ತಾಲೂಕಿನ ಶಿಬರೂರಿನಲ್ಲಿ ಜನಿಸಿದ ರಮೇಶರಿಗೆ 23 ವರ್ಷವಾಗಿದ್ದಾಗ 1979ರ ಜೂನ್‌ 10ರಂದು ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ನೇಮಿಸಿಕೊಂಡರು.


ರಮೇಶ ತಂತ್ರಿ ಶ್ರೀವಿದ್ಯಾಧೀಶತೀರ್ಥರಾಗಿ ಪಲಿಮಾರು ಮಠದ 30ನೆಯ ಪೀಠಾಧೀಶರಾದರು. ಈಗ ಉಡುಪಿ ತಾಲೂಕು ಕೊಡವೂರು ಕಂಬಳಕಟ್ಟದ ಶೈಲೇಶ ಉಪಾಧ್ಯಾಯ 31ನೆಯ ಪೀಠಾಧಿಪತಿಗಳಾಗಲಿದ್ದಾರೆ. ಶ್ರೀವಿದ್ಯಾಧೀಶ ತೀರ್ಥರು ಅದಮಾರು ಗುರುಕುಲದಲ್ಲಿದ್ದಾಗ ಗುರುಗಳು ಆಯ್ಕೆ ಮಾಡಿಕೊಂಡಿದ್ದರೆ ತಾವೇ ಆರಂಭಿಸಿದ ಪಲಿಮಾರು ಮಠದ ಗುರುಕುಲದಲ್ಲಿ ಓದುತ್ತಿರುವ 20 ವರ್ಷ ಪ್ರಾಯದ ಶೈಲೇಶ ಉಪಾಧ್ಯಾಯರನ್ನು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಆಯ್ಕೆ ಮಾಡಿಕೊಂಡಿದ್ದಾರೆ.

ಆಗ ಅದಮಾರು ಮೂಲಮಠದಲ್ಲಿ ಶ್ರೀವಿದ್ಯಾಧೀಶತೀರ್ಥರು ನೇಮಕಗೊಂಡಿದ್ದರೆ ಈಗ ಶ್ರೀಕೃಷ್ಣಮಠದ ಪರ್ಯಾಯ ಅವಧಿಯಲ್ಲಿ ಶಿಷ್ಯರನ್ನು ಸ್ವೀಕರಿಸುತ್ತಿದ್ದಾರೆ.
ಅದಮಾರಿನಲ್ಲಿ ಶ್ರೀವಿದ್ಯಾಮಾನ್ಯತೀರ್ಥರಲ್ಲಿ ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥರು, ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರು, ಭಂಡಾರಕೇರಿ ಮಠದ ಶ್ರೀವಿದ್ಯೆàಶತೀರ್ಥ ರೊಂದಿಗೆ ವೇದಾಂತದ ಉದ್ಗ†ಂಥಗಳನ್ನು ಅಧ್ಯಯನ ನಡೆಸಿದವರು ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು. ಈಗ ಶ್ರೀವಿದ್ಯಾಧೀಶ ತೀರ್ಥರು ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥರ ಶಿಷ್ಯ ಶ್ರೀಈಶಪ್ರಿಯತೀರ್ಥರಿಗೆ ಉದ್ಗ†ಂಥಗಳನ್ನು ಪಾಠ ಹೇಳುತ್ತಿದ್ದಾರೆ. ಇವರೊಂದಿಗೆ ಮುಂದೆ ಶೈಲೇಶರೂ ಸೇರಿಕೊಳ್ಳುತ್ತಾರೆ.

Advertisement

ಗುರುಗಳ ರೀತಿಯಲ್ಲಿ…
ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಗುರು ಶ್ರೀವಿದ್ಯಾಮಾನ್ಯತೀರ್ಥರು 1913ರಲ್ಲಿ ಜನಿಸಿ, 12 ವರ್ಷ ಪ್ರಾಯವಿದ್ದಾಗ ಶ್ರೀಭಂಡಾರಕೇರಿ ಮಠಕ್ಕೆ ನಿಯುಕ್ತಿಗೊಂಡರು. ಇವರನ್ನು ನಿಯುಕ್ತಿಗೊಳಿಸಿದ್ದು ಶ್ರೀಅದಮಾರು ಮಠದ ಶ್ರೀವಿಬುಧಪ್ರಿಯತೀರ್ಥರು. ಇದು 1925ರಲ್ಲಿ ನಡೆದದ್ದು. ಆಗ ಶ್ರೀವಿಬುಧಪ್ರಿಯತೀರ್ಥರು ಪರ್ಯಾಯ ಪೀಠಸ್ಥರಾಗಿದ್ದರು. 1969ರಲ್ಲಿ ಶ್ರೀವಿದ್ಯಾಮಾನ್ಯತೀರ್ಥರು ಭಂಡಾರಕೇರಿ ಮಠದ ಜತೆ ಪಲಿಮಾರು ಮಠದ ಅಧಿಪತಿಗಳಾಗಿಯೂ ನೇಮಕಗೊಂಡು ಎರಡು ಪರ್ಯಾಯ ಪೂಜೆಗಳನ್ನು ನಡೆಸಿದರು. 2000ರ ವರೆಗೆ ಇದ್ದ ಶ್ರೀವಿದ್ಯಾಮಾನ್ಯರು ಮೂರು ದಶಕ ಎರಡೂ ಮಠಗಳ ಅಧಿಪತಿಗಳಾಗಿದ್ದರು. ಈಗ ಶ್ರೀವಿದ್ಯಾಧೀಶತೀರ್ಥರು ಪರ್ಯಾಯ ಪೀಠದಲ್ಲಿದ್ದು ಶಿಷ್ಯ ಸ್ವೀಕಾರ ಮಾಡುತ್ತಿದ್ದಾರೆ. ಶ್ರೀಅದಮಾರು ಮಠದ ಶ್ರೀವಿಬುಧೇಶತೀರ್ಥರು ಎರಡನೆಯ ಪರ್ಯಾಯ ಕಾಲದಲ್ಲಿ (1972 ಜೂ. 15) ಶ್ರೀವಿಶ್ವಪ್ರಿಯತೀರ್ಥರನ್ನು (ಈಗಿನ ಮಠಾಧಿಪತಿ) ಉತ್ತರಾಧಿಕಾರಿಗಳಾಗಿ ನಿಯುಕ್ತಿಗೊಳಿಸಿದರು. 1972ರ ಬಳಿಕ ಪರ್ಯಾಯ ಪೂಜಾವಧಿಯಲ್ಲಿ ಉತ್ತರಾಧಿಕಾರಿ ನೇಮಕಗೊಳ್ಳುತ್ತಿರುವುದು ಇದೇ ಪ್ರಥಮ.

32ನೆಯ ಚಕ್ರದ ಮೊದಲ ಪರ್ಯಾಯದಲ್ಲಿ…
ಶ್ರೀಕೃಷ್ಣಮಠದಲ್ಲಿ ಎರಡು ವರ್ಷಗಳ ಪರ್ಯಾಯ ಪದ್ಧತಿ ಶುರುವಾದದ್ದು 1522ರಲ್ಲಿ. ಇದಕ್ಕೂ ಮುನ್ನ ಎರಡು ತಿಂಗಳ ಪದ್ಧತಿ ಇತ್ತು. 16 ವರ್ಷಗಳಿಗೊಮ್ಮೆ ಉರುಳುವ ಚಕ್ರ ಆರಂಭಗೊಳ್ಳುವುದು ಶ್ರೀಪಲಿಮಾರು ಮಠದಿಂದ. ಇದು ಮಧ್ವಾಚಾರ್ಯರಿಂದ ನೇಮಕಗೊಂಡ ಎಂಟು ಸನ್ಯಾಸಿ ಶಿಷ್ಯರ ಆಶ್ರಮ ಜ್ಯೇಷ್ಠತೆ ಆಧಾರದಲ್ಲಿ ನಡೆಯುತ್ತಿದೆ. 32ನೆಯ ಚಕ್ರದ ಮೊದಲ ಪರ್ಯಾಯದಲ್ಲಿ ಶ್ರೀವಿದ್ಯಾಧೀಶತೀರ್ಥರು ಶಿಷ್ಯ ಸ್ವೀಕಾರ ನಡೆಸುತ್ತಿದ್ದಾರೆ.


ಆಗ ಸಹಾಯಕರು, ಈಗ ಅಧ್ವರ್ಯರು
1986-87ರಲ್ಲಿ ಶ್ರೀವಿದ್ಯಾಮಾನ್ಯತೀರ್ಥ ಶ್ರೀಪಾದರು 2ನೆಯ ಬಾರಿಗೆ ಪರ್ಯಾಯ ಪೂಜೆಯನ್ನು ಶ್ರೀಕೃಷ್ಣಮಠದಲ್ಲಿ ನಡೆಸಿದಾಗ ಅವರಿಗೆ ಸಹಾಯಕರಾಗಿ ತರಬೇತಿ ಹೊಂದಿದ ಶ್ರೀವಿದ್ಯಾಧೀಶತೀರ್ಥರಿಗೆ ಮುಂದೆ ನೂತನ ಉತ್ತರಾಧಿಕಾರಿ ಸಹಾಯಕರಾಗಿ ತರಬೇತಿ ಹೊಂದಲಿದ್ದಾರೆ.

ಶ್ರೀವಿದ್ಯಾಧೀಶತೀರ್ಥರು 2002-04ರ ಅವಧಿಯಲ್ಲಿ ಒಂದು ಬಾರಿ ಪರ್ಯಾಯ ಪೂಜೆಯನ್ನು ಯಶಸ್ವಿಯಾಗಿ ನಡೆಸಿ ಈಗ 2ನೇ ಅವಧಿಯ ಪೂಜಾಕೈಂಕರ್ಯದಲ್ಲಿದ್ದಾರೆ.

ಪಲಿಮಾರು ಮಠದ
ಗುರುಪರಂಪರೆ
1. ಶ್ರೀಹೃಷಿಕೇಶತೀರ್ಥರು
2. ಶ್ರೀಸಮಾತೆ¾àಶತೀರ್ಥರು
3. ಶ್ರೀಸಂಭವತೀರ್ಥರು
4. ಶ್ರೀಅಪರಾಜಿತತೀರ್ಥರು
5. ಶ್ರೀವಿದ್ಯಾಮೂರ್ತಿತೀರ್ಥರು
6. ಶ್ರೀರಾಜರಾಜೇಶ್ವರತೀರ್ಥರು
7. ಶ್ರೀನಿಧಿತೀರ್ಥರು
8. ಶ್ರೀವಿದ್ಯೆàಶತೀರ್ಥರು
9. ಶ್ರೀವಲ್ಲಭತೀರ್ಥರು
10. ಶ್ರೀಜಗಭೂಷಣತೀರ್ಥರು
11. ಶ್ರೀರಾಮಚಂದ್ರತೀರ್ಥರು
12. ಶ್ರೀವಿದ್ಯಾನಿಧಿತೀರ್ಥರು
13. ಶ್ರೀಸುರೇಶತೀರ್ಥರು
14. ಶ್ರೀರಾಘವೇಂದ್ರತೀರ್ಥರು
15. ಶ್ರೀರಘುನಂದನತೀರ್ಥರು
16. ಶ್ರೀವಿದ್ಯಾಪತಿತೀರ್ಥರು
17. ಶ್ರೀರಘುಪತಿತೀರ್ಥರು
18. ಶ್ರೀರಘುನಾಥತೀರ್ಥರು
19. ಶ್ರೀರಘೂತ್ತಮತೀರ್ಥರು
20. ಶ್ರೀರಾಮಭದ್ರತೀರ್ಥರು
21. ಶ್ರೀರಘುವರ್ಯತೀರ್ಥರು
22. ಶ್ರೀರಘುಪುಂಗವತೀರ್ಥರು
23. ಶ್ರೀರಘುವರತೀರ್ಥರು
24. ಶ್ರೀರಘುಪ್ರವೀರತೀರ್ಥರು
25. ಶ್ರೀರಘುಭೂಷಣತೀರ್ಥರು
26. ಶ್ರೀರಘುರತ್ನತೀರ್ಥರು
27. ಶ್ರೀರಘುಪ್ರಿಯತೀರ್ಥರು
28. ಶ್ರೀರಘುಮಾನ್ಯತೀರ್ಥರು
29. ಶ್ರೀವಿದ್ಯಾಮಾನ್ಯತೀರ್ಥರು
30. ಶ್ರೀವಿದ್ಯಾಧೀಶತೀರ್ಥರು

Advertisement

Udayavani is now on Telegram. Click here to join our channel and stay updated with the latest news.

Next