ಮುಂಬಯಿ, ಅ. 5: ವಿದ್ಯಾವಿಹಾರ್ ಶ್ರೀ ಗಾಂವ್ದೇವಿ ಅಂಬಿಕಾ ಶ್ರೀ ಆದಿನಾಥೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ಶ್ರೀ ಶರನ್ನವರಾತ್ರಿ ಮಹೋತ್ಸವವು ಸೆ. 29ರಂದು ಪ್ರಾರಂಭಗೊಂಡಿದ್ದು, ಅ. 8ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಸೆ. 30 ರಿಂದ ಅ. 3ರವರೆಗೆ ಪ್ರಾತಃಕಾಲ ಪ್ರಾರ್ಥನೆ, ದ್ವಾದಶ ನಾಳಿಕೇರ, ಮಹಾ ಗಣಪತಿ ಯಾಗ, ಶ್ರೀ ದುರ್ಗಾಹೋಮ, ಮಧ್ಯಾಹ್ನ 12ರಿಂದ ಪ್ರಸನ್ನ ಪೂಜೆ, ಅನ್ನಸಂತರ್ಪಣೆ, ಸಂಜೆ 6.30ರಿಂದ ದುರ್ಗಾ ನಮಸ್ಕಾರ ಪೂಜೆ, ರಾತ್ರಿಪೂಜೆ, ರಂಗಪೂಜೆ, ಪ್ರಸಾದ ವಿತರಣೆಯನ್ನು ಆಯೋಜಿಸಲಾಗಿತ್ತು. ಸೆ. 30ರಿಂದ ಅ. 8 ರವರೆಗೆ ಸಂಜೆ 6.30ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಪ್ರಧಾನ ಅರ್ಚಕರಾದ ಪೆರ್ಣಂಕಿಲ ಹರಿದಾಸ್ ಭಟ್ ಅವರ ಪೌರೋಹಿತ್ಯದಲ್ಲಿ ಶ್ರೀವತ್ಸ ಹರಿದಾಸ್ ಭಟ್, ಶ್ರೀ ಲಕ್ಷ್ಮೀನಾರಾಯಣ ಭಟ್, ಸತೀಶ್ ಭಟ್, ಶ್ರೀಶ ಭಟ್ ಹಾಗೂ ಪುರೋಹಿತ ವರ್ಗದವರ ಸಹಕಾರದೊಂದಿಗೆ ಜರಗಿತು. ದೇವಸ್ಥಾನದ ಅಧ್ಯಕ್ಷ ಗುರುದಾಸ ಜಿ. ಶೆಟ್ಟಿ, ಆಡಳಿತ ಮೊಕ್ತೇಸರ ಹರಿದಾಸ ಜಿ. ಶೆಟ್ಟಿ, ಟ್ರಸ್ಟಿಗಳಾದ ಲವ ಅಮೀನ್, ಕಾರ್ಯಕರ್ತರು, ಅನಂತ್ ಭಟ್, ಸುರೇಶ್ ಕರ್ಕೇರ, ಸುಬ್ರಹ್ಮಣ್ಯ ಭಟ್, ಗಣೇಶ್ ಕೋಟ್ಯಾನ್, ಜಗನ್ನಾಥ್ ಶೆಟ್ಟಿ, ಗೋಪಾಲ್ ಶೆಟ್ಟಿ, ಕೃಷ್ಣಾನಂದ ಭಟ್, ಕೇಶವ ಭಟ್, ಸಂತೋಷ್ ಪಾಂಡೆ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಚಿತ್ರ-ವರದಿ : ಸುಭಾಷ್ ಶಿರಿಯಾ