Advertisement

ಶಹಜಹಾನ್‌ಪುರ: ಆಂಜನೇಯ ದೇಗುಲ ಸ್ಥಳಾಂತರಕ್ಕೆ ಹಿಂದೂ ಸಂಘಟನೆಗಳ ವಿರೋಧ

07:49 PM Sep 22, 2022 | Team Udayavani |

ಶಹಜಹಾನ್‌ಪುರ: ಉತ್ತರಪ್ರದೇಶದ ಶಹಜಹಾನಪುರದಲ್ಲಿನ ಆಂಜನೇಯನ ದೇವಸ್ಥಾನವೊಂದನ್ನು ಸ್ಥಳಾಂತರಿಸುವ ಯತ್ನಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಹಿಂದೂ ಸಂಘಟನೆಗಳು, ಸ್ಥಳೀಯರು ಪ್ರತಿಭಟನೆ ನಡೆಸಿದ ಪರಿಣಾಮ 32 ಮಂದಿಯನ್ನು ಜಿಲ್ಲಾಡಳಿತ ವಶಕ್ಕೆ ತೆಗೆದುಕೊಂಡಿದೆ.

Advertisement

ಸ್ಥಳದಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ತಿಹಾರ್‌ ಪ್ರದೇಶದ ಕಚಿಯನಿ ಖೇಡಾದಲ್ಲಿನ ಆಂಜನೇಯ ದೇವಸ್ಥಾನ ಶತಮಾನದಿಂದ ಅಸ್ತಿತ್ವದಲ್ಲಿದೆ. ದೆಹಲಿ- ಲಕ್ನೋ ನಡುವೆ ಹೆದ್ದಾರಿ ನಿರ್ಮಾಣದ ನಿಮಿತ್ತ ದೇಗುಲವನ್ನು 80 ಮೀಟರ್‌ ದೂರಕ್ಕೆ ಸ್ಥಳಾಂತರಿಸಲು ಸೆ.17ರಿಂದಲೇ ಪ್ರಯತ್ನಗಳು ನಡೆದಿವೆ.

ಕುತೂಹಲಕಾರಿ ಅಂಶವೆಂದರೆ ವರ್ಷಗಳ ಹಿಂದೆಯೇ ಸ್ಥಳಾಂತರದ ನಿರ್ಧಾರವಾಗಿತ್ತು. ಜಿಲ್ಲಾಧಿಕಾರಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ “ಕಾನೂನಿಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯದ ಬಳಿಕವೇ ಸ್ಥಳಾಂತರಕ್ಕೆ ನಿರ್ಧರಿಸಲಾಗಿದೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next