Advertisement

ವಿಶ್ವ ಟಿ20 ಇಲೆವೆನ್‌: ಮಾರ್ಗನ್‌ ಗಾಯಾಳು; ಅಫ್ರಿದಿ ನಾಯಕ

06:00 AM May 31, 2018 | |

ಲಂಡನ್‌: ಪಾಕಿಸ್ಥಾನದ ಮಾಜಿ ಆಲ್‌ರೌಂಡರ್‌ ಶಾಹಿದ್‌ ಅಫ್ರಿದಿ ಐಸಿಸಿ ಟಿ20 ವಿಶ್ವ ಇಲೆವೆನ್‌ ತಂಡದ ನಾಯಕತ್ವ ವಹಿಸಲಿದ್ದಾರೆ. ಈ ತಂಡವನ್ನು ಮುನ್ನಡೆಸಬೇಕಿದ್ದ ಇಂಗ್ಲೆಂಡಿನ ಇಯಾನ್‌ ಮಾರ್ಗನ್‌ ಕೈಬೆರಳಿನ ಮೂಳೆ ಮುರಿತಕ್ಕೆ ಸಿಲುಕಿದ್ದರಿಂದ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಮೇ 31ರಂದು ವೆಸ್ಟ್‌ ಇಂಡೀಸ್‌ ವಿರುದ್ಧ ಈ ಸಹಾಯಾರ್ಥ ಪಂದ್ಯ ನಡೆಯಲಿದೆ. ಚಂಡಮಾರುತದ ಹಾವಳಿಗೆ ಸಿಲುಕಿ ಹಾನಿಗೊಂಡ ಕೆರಿಬಿಯನ್‌ ದ್ವೀಪಗಳ ಕ್ರಿಕೆಟ್‌ ಸ್ಟೇಡಿಯಂಗಳ ದುರಸ್ತಿ ಕಾರ್ಯಕ್ಕೆ ನಿಧಿ ಸಂಗ್ರಹಿಸಲು ಐಸಿಸಿ ಈ ಪಂದ್ಯವನ್ನು ಆಯೋಜಿಸಿದೆ.

Advertisement

ಸಾಮರ್‌ಸೆಟ್‌ ಎದುರಿನ  “ರಾಯಲ್‌ ಲಂಡನ್‌ ಒನ್‌ ಡೇ ಕಪ್‌’ ಪಂದ್ಯದ ವೇಳೆ ಮಾರ್ಗನ್‌ ಕೈಬೆರಳಿನ ಮೂಳೆ ಮುರಿತಕ್ಕೊಳಗಾಗಿದ್ದರು. ಜೂ. 10ರಂದು ಸ್ಕಾಟ್ಲೆಂಡ್‌ ವಿರುದ್ಧ ಇಂಗ್ಲೆಂಡ್‌ ಏಕೈಕ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಡಲಿದ್ದು, ಅಷ್ಟರಲ್ಲಿ ಮಾರ್ಗನ್‌ ಚೇತರಿಸಿಕೊಳ್ಳುವ ನಿರೀಕ್ಷೆ ಹೊಂದಿದ್ದಾರೆ. ಬಳಿಕ ಪ್ರವಾಸಿ ಆಸ್ಟ್ರೇಲಿಯ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್‌ ಪಾಲ್ಗೊಳ್ಳಲಿದೆ.

ವಿಶ್ವ ಟಿ20 ಇಲೆವೆನ್‌ ತಂಡ ಪ್ರಕಟಗೊಂಡ ಬಳಿಕ ಸಾಕಷ್ಟು ಬದಲಾವಣೆ ಸಂಭವಿಸುತ್ತಲೇ ಇದೆ. ಮೊನ್ನೆಯಷ್ಟೇ ಹಾರ್ದಿಕ್‌ ಪಾಂಡ್ಯ ಬದಲು ಮೊಹಮ್ಮದ್‌ ಶಮಿ ಅವರನ್ನು ಸೇರಿಸಿಕೊಳ್ಳಲಾಗಿತ್ತು. ಇಯಾನ್‌ ಮಾರ್ಗನ್‌ ಬದಲು ಸ್ಯಾಮ್‌ ಬಿಲ್ಲಿಂಗ್ಸ್‌ ಅವರನ್ನು ಸೇರಿಸಿಕೊಳ್ಳಲಾಗಿದೆ. ಇಂಗ್ಲೆಂಡಿನ ಸ್ಯಾಮ್‌ ಕರನ್‌, ಟೈಮಲ್‌ ಮಿಲ್ಸ್‌ ಅವರನ್ನೂ ಸೇರಿಸಿಕೊಂಡು ತಂಡದ ಸದಸ್ಯರ ಬಲವನ್ನು 14ಕ್ಕೆ ಹೆಚ್ಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next