ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕತ್ವ ಗೊಂದಲ ಮುಂದುವರಿದಿದೆ. ಕೇವಲ ಒಂದು ಟಿ20 ಸರಣಿಗೆ ನಾಯಕನಾಗಿದ್ದ ಶಾಹೀನ್ ಶಾ ಅಫ್ರಿದಿ ಅವರನ್ನು ಕಳೆಗಿಳಿಸಿ ಬಾಬರ್ ಅಜಂಗೆ ಮತ್ತೆ ನಾಯಕತ್ವ ನೀಡಲಾಗಿತ್ತು. ಇದೀಗ ಟಿ20 ವಿಶ್ವಕಪ್ ಗೆ ಬಾಬರ್ ನಾಯಕತ್ವದಲ್ಲೇ ತಂಡ ಘೋಷಿಸಲಾಗಿದೆ. ಆದರೆ ತಂಡದ ಉಪನಾಯಕನ ಸ್ಥಾನವನ್ನು ಶಾಹೀನ್ ಅಫ್ರಿದಿಗೆ ನೀಡಲಾಗಿತ್ತು, ಆದರೆ ಅಫ್ರಿದಿ ಅದನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
ಆದರೆ ರಾಷ್ಟ್ರೀಯ ಆಯ್ಕೆಗಾರರು ಶಾಹೀನ್ ಶಾ ಅಫ್ರಿದಿಗೆ ಉಪನಾಯಕತ್ವವನ್ನು ನೀಡಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಶನಿವಾರ ಹೇಳಿದೆ.
ಶುಕ್ರವಾರ ಐಸಿಸಿ ಟಿ20 ವಿಶ್ವಕಪ್ ಗಾಗಿ ಪಾಕಿಸ್ತಾನ ತಂಡವನ್ನು ಆಯ್ಕೆ ಮಾಡಿದಾಗ ಅಫ್ರಿದಿಗೆ ಬಾಬರ್ ಅಜಮ್ ಉಪನಾಯಕನಾಗಲು ಅವಕಾಶ ನೀಡಲಾಯಿತು ಆದರೆ ಎಡಗೈ ವೇಗಿ ಪ್ರಸ್ತಾಪವನ್ನು ತಿರಸ್ಕರಿಸಿದರು ಎಂದು ಹಲವಾರು ವರದಿಗಳು ಹೇಳಿಕೊಂಡಿವೆ.
“ಅಫ್ರಿದಿ ಉಪನಾಯಕತ್ವದ ಸುದ್ದಿಯಿಂದ ಆಯ್ಕೆಗಾರರು ಆಘಾತಕ್ಕೆ ಒಳಗಾಗಿದ್ದಾರೆ. ಆಯ್ಕೆ ಸಮಿತಿ ಮೀಟಿಂಗ್ ಎಲ್ಲವೂ ರೆಕಾರ್ಡ್ ಆಗಿದೆ” ಎಂದು ಮೂಲವೊಂದು ಪಿಟಿಐಗೆ ಹೇಳಿದೆ.
ಆದರೆ ಕಳೆದ ಮಾರ್ಚ್ ನಲ್ಲಿ ಬಾಬರ್ ಅವರಿಗೆ ನಾಯಕತ್ವ ನೀಡುವಾಗ ಅಫ್ರಿದಿಗೆ ಉಪನಾಯಕ ಸ್ಥಾನ ನೀಡಲಾಗಿತ್ತು. ಆದರೆ ಎಡಗೈ ವೇಗಿ ಅದನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ.