Advertisement

ಶಾಹಡ್‌ ಮೂಕಾಂಬಿಕಾ ಮಂದಿರ: ಹರಿದರ್ಶನ ಯಕ್ಷಗಾನ ತಾಳಮದ್ದಳೆ

02:31 PM Aug 11, 2017 | |

ಕಲ್ಯಾಣ್‌: ರಂಗಭೂಮಿ ಫೈನ್‌ ಆರ್ಟ್ಸ್ ನೆರೂಲ್‌ ಕಲಾವಿದರಿಂದ ಆ. 6ರಂದು ಸಂಜೆ 5ರಿಂದ ಶ್ರೀ  ಮೂಕಾಂಬಿಕಾ ದೇವಿ ದೇವಸ್ಥಾನ ಶಹಾಡ್‌ ಆಯೋಜನೆಯಲ್ಲಿ ಹರಿದರ್ಶನ ತಾಳಮದ್ದಳೆ ನಡೆಯಿತು.

Advertisement

ಕಾರ್ಯಕ್ರಮದ ಪ್ರಾರಂಭದಲ್ಲಿ ದೇವಸ್ಥಾನದ ಅರ್ಚಕರಾದ ಶ್ರೀಕಾಂತ್‌ ನಾರಾಯಣ ತಂತ್ರಿ, ಮಂದಿರದ ಕಾರ್ಯಾಧ್ಯಕ್ಷ ಚಂದ್ರಕಾಂತ ಶೆಟ್ಟಿ ವಾಶಿ, ಅಧ್ಯಕ್ಷ  ಕೃಷ್ಣ ಪೂಜಾರಿ, ಉಪಾಧ್ಯಕ್ಷ  ಗೋಪಾಲ್‌ ಎಸ್‌. ಹೆಗ್ಡೆ,  ಸಲಹೆಗಾರ ಚಂದ್ರಹಾಸ ಶೆಟ್ಟಿ, ಹಿರಿಯ ಕಲಾವಿದರಾದ ಶೇಣಿ ಶ್ಯಾಮ್‌ ಭಟ್‌, ಕೆ. ಕೆ. ಶೆಟ್ಟಿ ಹಾಗೂ ಉಳಿದ ಕಲಾವಿದರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಂದಿರದ ಉಪಾಧ್ಯಕ್ಷ ಗೋಪಾಲ್‌ ಹೆಗ್ಡೆ ಅವರು ನೆರೆದ ಕಲಾಭಿಮಾನಿಗಳಿಗೆ ಹರಿದರ್ಶನದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.  ಬಾಲಕೃಷ್ಣ ಶೆಟ್ಟಿ ಆದ್ಯಪಾಡಿ ಅವರು ಕಲಾವಿದರನ್ನು ಪರಿಚಯಿಸಿದರು. ಭಾಗವತರಾಗಿ ರವಿ ಆಚಾರ್ಯ, ಮದ್ದಳೆಯಲ್ಲಿ  ಹರೀಶ್‌ ಸಾಲ್ಯಾನ್‌,  ಚೆಂಡೆ ವಾದಕರಾಗಿ ಪ್ರವೀಣ್‌ ಶೆಟ್ಟಿ ಅವರು ಸಹಕರಿಸಿದರು.

ಪಾತ್ರವರ್ಗದಲ್ಲಿ  ಮುಖ್ಯವಾಗಿ ಶೇಣಿ ಶ್ಯಾಮ್‌ ಭಟ್‌ , ಕೆ. ಕೆ. ಶೆಟ್ಟಿ, ರವಿ ಹೆಗ್ಡೆ ಹೆರ್ಮುಂಡೆ, ಅನಿಲ… ಹೆಗ್ಡೆ ಪೆರ್ಡೂರು, ಬಾಲಕೃಷ್ಣ ಆದ್ಯಪಾಡಿ ಅವರು ಪಾಲ್ಗೊಂಡಿದ್ದರು. ದೇವಸ್ಥಾನದ ವತಿಯಿಂದ ಎಲ್ಲಾ ಕಲಾವಿದರನ್ನು ಶಾಲು ಹೊದೆಸಿ, ಸ್ಮರಣಿಕೆ, ಪುಷ್ಪಗುತ್ಛವನ್ನಿತ್ತು ಸತ್ಕರಿಸಲಾಯಿತು.

ಮುಖ್ಯವಾಗಿ ಬಂಟರ ಸಂಘ ಭಿವಂಡಿ-ಬದ್ಲಾಪುರದ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸುಬ್ಬಯ್ಯ ಶೆಟ್ಟಿ, ಕರ್ನಾಟಕ ಸಂಘ ಕಲ್ಯಾಣ್‌ ಇದರ ಮಾಜಿ ಅಧ್ಯಕ್ಷ ಟಿ. ಎಸ್‌. ಉಪಾಧ್ಯಾಯ, ಕೋಶಾಧ್ಯಕ್ಷ  ಯು. ಡಿ. ಮಲ್ಯ, ಬಿಲ್ಲವರ ಸ್ಥಳೀಯ ಸಮಿತಿಯ ಭೋಜ ಪೂಜಾರಿ ಹಾಗೂ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

ಕಾರ್ಯಕ್ರಮದ ಕೊನೆಯಲ್ಲಿ ದೇವಿಗೆ ಮಂಗಳಾರತಿ ನಡೆಯಿತು. ಉದ್ಯಮಿ ಸದಾನಂದ ಪೂಜಾರಿ ನೇತೃತ್ವದಲ್ಲಿ ಭೋಜನದ ವ್ಯವಸ್ಥೆ ಯನ್ನುಯೋಜಿಸಲಾಗಿತ್ತು.ಕಲಾಭಿಮಾನಿಗಳು, ವಿವಿಧ ಸಂಘ ಟನೆಗಳ ಪದಾಧಿಕಾರಿಗಳು, ತುಳು- ಕನ್ನಡಿಗರು  ಪಾಲ್ಗೊಂಡಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next