ಶಹಾಪುರ: ತಾಲೂಕಿನ ಕಲ್ಲಂಗಡಿ ಬೆಳೆ ಕ್ಷೇತ್ರಗಳಿಗೆ ಕೃಷಿ ವಿಜ್ಞಾನಿಗಳು ಭೇಟಿ ನೀಡಿ ಕೀಟಬಾಧೆ ನಿವಾರಣೆಗೆ ಸಲಹೆ ನೀಡಿದರು.
ಬೆಳೆಗೆ ಕೀಟಗಳ ಹಾವಳಿ ಆಗುತ್ತಿದ್ದು, ಇವುಗಳ ಹತೋಟಿಗೆ 4 ಗ್ರಾಂ ಕಾರ್ಬಾರಿಲ್ ಶೇ.50 ಡಬ್ಲೂಪಿ ಅಥವಾ 0.2 ಗ್ರಾಂ ಇಮಿಡಾಕ್ಲೋಪ್ರಿಡ್ 70 ಡಬ್ಲೂಪಿ 1.0 ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು.
ರೋಗಗಳ ಬಾಧೆ ಕಂಡು ಬಂದಿದ್ದು, ಇವುಗಳ ಹತೋಟಿಗಾಗಿ 0.5 ಗ್ರಾಂ ಕಾರ್ಬೆಂಡಜಿಮ್ 50 ಡಬ್ಲೂಪಿ ಅಥವಾ 2 ಗ್ರಾಂ ಜೈನೆಬ್ 75 ಡಬ್ಲೂಪಿ ಅಥವಾ 0.33 ಗ್ರಾಂ ಬೆನೊಮಿಲ್ 50 ಡಬ್ಲೂಪಿ 1 ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು ಎಂದು ಸೂಚಿಸಿದರು.
ಕಲ್ಲಂಗಡಿ ಬೇಸಿಗೆ ಕಾಲದ ಮುಖ್ಯವಾದ ಬೆಳೆ. ಕಾಯಿ ಹಣ್ಣಾಗುವಾಗ ಒಣ ಹವೆ ಇದ್ದರೆ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಯಾದಗಿರಿ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಕಲ್ಲಂಡಗಿ ಬೆಳೆಯುತ್ತಿದ್ದಾರೆ. ಮರಕಲ್, ಕೊಳ್ಳೂರಿನಲ್ಲಿ ವೀರೇಶ, ನಿಂಗಯ್ಯ, ತಿರುಪತಿ ಹಾಗೂ ಮುಂತಾದ ರೈತರು ಸುಮಾರು 50 ಎಕರೆ ಭೂಮಿಯಲ್ಲಿ ಕಲ್ಲಂಗಡಿ ಬೆಳೆ ಬೇಸಾಯ ಮಾಡುತ್ತಿರುವ ಕುರಿತು ಮಾಹಿತಿ ಪಡೆದರು.
ಡಾ| ಶಿವಾನಂದ ಹೊನ್ನಾಳಿ, ಡಾ| ರವಿ ಪೂಜಾರಿ, ಡಾ| ಹಣಮಂತ ಜತೆಗೆ ವಿಸ್ತರಣಾ ಮುಂದಾಳು ಡಾ| ಬಿ.ಎಸ್. ರೆಡ್ಡಿ ಹಾಗೂ ರೈತರಾದ ಬನ್ನಪ್ಪ, ಮಲ್ಲಯ್ಯ ಜಲಕಂಠಿ ಇದ್ದರು. ತೋಟಗಾರಿಕೆ ಬೆಳೆಗಳ ಮಾಹಿತಿಗಾಗಿ ರೈತರಿಗೆ ಸಮಗ್ರ ತೋಟಗಾರಿಕೆ ಕೈಪಿಡಿ ನೀಡಲಾಯಿತು. ಹೆಚ್ಚಿನ ಮಾಹಿತಿಗೆ ಭೀಮರಾಯನಗುಡಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಕ್ಕೆ ಭೇಟಿ ನೀಡಬೇಕು ಅಥವಾ 7411360263, 9742027533, 9448437313 ಸಂಖ್ಯೆಗೆ
ಸಂಪರ್ಕಿಸಲು ಕೋರಲಾಗಿದೆ.