Advertisement

ಸಾಧನೆಗೆ ನಿರಂತರ ಪ್ರಯತ್ನ ಅಗತ್ಯ

04:31 PM Oct 13, 2019 | Naveen |

ಶಹಾಪುರ: ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ತಲುಪಲು ನಿರಂತರ ಪ್ರಯತ್ನ ಅಗತ್ಯವಿದೆ. ಅಭೂತ ಪೂರ್ವ ಸಾಧನೆ ಮಾಡಲು ಪ್ರೇರಣೆಯೇ ಮೂಲ ಕಾರಣ. ಅಂತಹ ಪ್ರೇರಣೆಯನ್ನು ಈ ಕಾರ್ಯಕ್ರಮ ನೀಡಲಿ ಎಂದು ಖ್ಯಾತ ಮಕ್ಕಳ ತಜ್ಞ ಡಾ| ಸುದತ್‌ ದರ್ಶನಾಪುರ ಹೇಳಿದರು.

Advertisement

ನಗರದ ಸಾಯಿ ವಿದ್ಯಾನಿಕೇತನ ವಸತಿ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಬೀದರ, ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ಯಾದಗಿರಿ, ಶಹಾಪುರ ಘಟಕ ಮತ್ತು ದಿ.ಬಾಪುಗೌಡ ದರ್ಶನಾಪುರ ಎಜ್ಯುಕೇಶನ್‌ ಟ್ರಸ್ಟ್‌ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಸಂಪನ್ಮೂಲ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಪಠ್ಯಾಧಾರಿತ ವಿಷಯಗಳ ಬೋಧನಾ ಶಿಬಿರ ಹಾಗೂ ಮೌಲ್ಯ ಶಿಕ್ಷಣ ಪ್ರೇರಣಾ ಕಮ್ಮಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಕಠಿಣವೆನಿಸುವ ವಿಷಯಗಳನ್ನು ಸಂಪನ್ಮೂಲ ಶಿಕ್ಷಕರು ಸರಳ ವಿಧಾನಗಳನ್ನು ಬಳಸಿ ಬೋಧನೆ ಮಾಡಿದಾಗ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಲು ಪೂರಕವಾಗುತ್ತದೆ ಎಂದರು.

ಕಲ್ಯಾಣ ಕರ್ನಾಟಕ ಪ್ರತಿಷ್ಠಾಪನ ಸಂಸ್ಥಾಪಕ ಅಧ್ಯಕ್ಷ ಬಸವಕುಮಾರ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಕೀಳರಿಮೆ ತೊರೆದು ಆತ್ಮವಿಶ್ವಾಸ ಹಾಗೂ ಕಠಿಣ ಪರಿಶ್ರಮದಿಂದ ಮುನ್ನಡೆದರೆ ಯಶಸ್ಸು ನಿಶ್ಚಿತ. ವಿದ್ಯಾರ್ಥಿಗಳು ಯೋಗ, ಧ್ಯಾನಗಳನ್ನು ರೂಢಿಸಿಕೊಂಡು ಏಕಾಗ್ರತೆಯಿಂದ ನಿರಂತರವಾಗಿ ಅಭ್ಯಾಸ ಮಾಡಿದರೆ ಉತ್ತಮ ಫಲಿತಾಂಶ ಗಳಿಸಬಹುದು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಸಂಬಂಧಿ ಸಿದಂತೆ ಆಸರೆ ಎಂಬ ಕಿರು ಹೊತ್ತಿಗೆ ಬಿಡುಗಡೆಗೊಳಿಸಲಾಯಿತು. ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಖಾಜಾ ಖಲೀಲ್‌, ಸಾರ್ವಜನಿಕ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ವೀರಣ್ಣ ಕುಂಬಾರ, ನೋಡಲ್‌ ಅಧಿಕಾರಿ ಮಲ್ಲಪ್ಪ ಯರಗೋಳ, ತಾ.ಪಂ. ಕಾರ್ಯನಿರ್ವಾಕ ಅಧಿಕಾರಿ ಪಂಪಾಪತಿ ಹಿರೇಮಠ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಭಿಮನಗೌಡ ತಳೇವಾಡ, ಕೆಕೆಪಿಯ ಕಲಬುರಗಿ ಜಿಲ್ಲಾಧ್ಯಕ್ಷ ಡಿ.ಎನ್‌. ಪಾಟೀಲ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

Advertisement

ಮುಖಂಡ ವಿಶ್ವನಾಥರೆಡ್ಡಿ ದರ್ಶನಾಪುರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಯಪ್ಪಗೌಡ ಹುಡೇದ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಕಾವಲಿ, ಜಾನಪದ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಮಡಿವಾಳಪ್ಪ ಪಾಟೀಲ, ಪ್ರಾಚಾರ್ಯ ಸಿ.ಎಸ್‌. ದೇಸಾಯಿ, ಸಹ ಶಿಕ್ಷಕರಾದ ಶಿವಾನಂದ ಜಮಾದಾರ, ಭವನಗೌಡ ಬೆಳ್ಳಿಕಟ್ಟಿ, ನಾಗಪ್ಪ ಪ್ರಭು, ರವಿ ಚಿನ್ನುಗುಡಿ, ವೀರಣ್ಣ ಕೊಳ್ಳಿ, ಶಿವಾನಂದ ಜಾಯಿ, ಪ್ರಕಾಶ ದೇಶಮುಖ ಉಪಸ್ಥಿತರಿದ್ದರು.

ಶಿಕ್ಷಕ ರಾಜಾಸಾಹೇಬ ಬಳಿಗಾರ ನಿರೂಪಿಸಿದರು. ಪ್ರಶಾಂತ ಯಾಳಗಿ ಸ್ವಾಗತಿಸಿದರು. ದೈಹಿಕ ಶಿಕ್ಷಕ ವೀರಭದ್ರ ಬಡಿಗೇರ ವಂದಿಸಿದರು. ಸುಮಾರು 50 ಪ್ರೌಢ ಶಾಲೆಗಳ 245 ವಿದ್ಯಾರ್ಥಿಗಳು
ಶಿಬಿರದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next