Advertisement

ಮನಸ್ಸು ಹತೋಟಿಯಲ್ಲಿ ಇಟ್ಟುಕೊಳ್ಳಿ

05:32 PM Mar 07, 2020 | Naveen |

ಶಹಾಪುರ: ಮಂಗನಂತಿರುವ ಈ ಮಾಯದ ಮನಸ್ಸನ್ನು ಏಕಾಗ್ರತೆ ಮೂಲಕ ಹತೋಟಿಯಲ್ಲಿ ಇಟ್ಟುಕೊಳ್ಳಬಹುದು. ಆದರೆ ಮನಸ್ಸನ್ನು ಸಮಾಧಾನಿಸಲು ಸಂತೃಪ್ತಿಸಲು ಸಾಧ್ಯವಿಲ್ಲ ಎಂದು ಇಂಡಿ ಓಂಕಾರಾಶ್ರಮ ಸಿದ್ಧಾರೂಢ ಮಠದ ಡಾ| ಸ್ವರೂಪಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಭೀಮರಾಯನ ಗುಡಿ ಸಾಧಕ ಸಿದ್ಧಾಶ್ರಮ ಸಿದ್ಧಾರೂಡ ಮಠದಲ್ಲಿ ನಡೆಯುತ್ತಿರುವ ಮೂರನೇ ದಿನದ ಜ್ಞಾನ ದಾಸೋಹದಲ್ಲಿ “ಮನಸ್ಸಿಗೆ ಬಂದಂತೆ
ನಡೆಯದಿರು’ ಎಂಬ ವಿಷಯ ಕುರಿತು ಅವರು ಮಾತನಾಡಿದರು.

ಚಿತ್ರ ವಿಚಿತ್ರವಾಗಿ ವರ್ತಿಸುವ ಈ ಸುಂದರ ಮನಸ್ಸು ಭಗವಂತನನ್ನು ಸ್ಮರಿಸುವಂತೆಯೂ ಮತ್ತು ಮರೆಸುವಂತೆಯೂ ಮಾಡುವ ಶಕ್ತಿ ಇದೆ. ಈ ಮನಸ್ಸಿಗೆ ಉತ್ತಮ ಸಂಸ್ಕಾರ ನೀಗಿಸುವ ಮೂಲಕ ಮನಸ್ಸನ್ನು ಪ್ರತಿಬಂಧನೆ ಮಾಡಬಹುದು. ಸ್ವಾಭಾವಿಕವಾಗಿ ಚಂಚಲತೆ ಹೊಂದಿರುವ ಮನಸ್ಸು ಸಂತೃಪ್ತಿ ಹೊಂದಲು ಆಗದು. ಆದರೆ ಈ ಮನಸ್ಸನ್ನು ಶಿವಸ್ಮರಣೆಯಿಂದ ಬಂಧಿಸಿ ದಂಡಿಸಿ ಪ್ರಯತ್ನಿಸಲು ಮುಂದಾದರೆ ಬದುಕು ಒಂದಿಷ್ಟು ಸಾರ್ಥಕತೆ ಪಡೆದುಕೊಳ್ಳಲಿದೆ. ಸಂತ, ಶರಣರ, ಸತ್ಪುರುಷರು ತೋರಿದ ಸನ್ಮಾರ್ಗದಿ ನಾವೆಲ್ಲ ನಡೆದುಕೊಂಡರೆ ಮಾನವ ಜನ್ಮ ಪಾವನವಾಗಲಿದೆ ಎಂದರು.

ಮನಸ್ಸನ್ನು ಗೆದ್ದವರು ಮಹಾತ್ಮರಾಗಿ ಲೋಕ ಕಲ್ಯಾಣಕ್ಕಾಗಿ ತಮ್ಮ ಬದುಕನ್ನೆ ವಿಶ್ವಶಾಂತಿಗಾಗಿ ಅರ್ಪಣೆ ಮಾಡಿದ್ದಾರೆ. ಇಂತಹ ಅಪರೂಪದ ಶರೀರಿ ಪಡೆದುಕೊಂಡ ಮನುಷ್ಯ ಜನ್ಮ ಈ ಕುಟಿಲ ಸಂಸಾರದೊಳಗೆ ಬಿದ್ದು ನಾನು ನನ್ನದೆಂಬ ಮಮಕಾರದಿಂದ ಭ್ರಾಂತಿಯಲ್ಲಿ ಮುಳುಗಿ ಸಂಸಾರಕ್ಕೆ ಅಂಟಿಕೊಂಡು ಬಲಳುವ ಬದಲು ಶಿವನಾಮ ಸ್ಮರಣೆ, ಭಗವಂತನ ಸತ್ಸಂಗದಲ್ಲಿ ತಲ್ಲೀನನಾದಲ್ಲಿ ಬದುಕು ಸಾರ್ಥಕತೆ ಪಡೆಯಲಿದೆ ಎಂದು ತಿಳಿಸಿದರು.

ಕುದರೆಯಂತೆ ಓಟ ಹೊಂದಿದ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಒಂದಿಷ್ಟು ಯೋಗ, ಧ್ಯಾನ, ಸತ್ಸಂಗ, ಭಜನೆಯಂತ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ನಮ್ಮ ಮನಸ್ಸು ನಿರ್ಮಲವಾಗಿ ಬದುಕು ಮಂಗಲಮಯವಾಗಲಿದೆ ಎಂದರು. ಬೀದರನ ಸಿದ್ಧಾರೂಢ ಮಠದ ಸದ್ಗುರು ಡಾ| ಶಿವಕುಮಾರ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾತೋಶ್ರೀ ಲಕ್ಷ್ಮೀದೇವಿ, ಜ್ಞಾನೇಶ್ವರಿ ದೇವಿ, ಮಾತಾ ನೀಲಾಂಬಿಕಾ ತಾಯಿ ಉಪಸ್ಥಿತರಿದ್ದರು. ಗೋಪಾಲರಾವ್‌ ಶಾಸ್ತ್ರಿ, ವಿನಾಯಕ ಮಹಾರಾಜರು, ಮಾತಾ ಶಂಕ್ರೆಮ್ಮ ತಾಯಿ, ವಿನಾಯಕ ಮಹಾರಾಜ, ಮಾತಾ ಶಂಕ್ರೆಮ್ಮ, ಸೊಲ್ಲಾಪುರದ ಅರುಣಾ ಮಾತಾ ಭಾಗವಹಿಸಿದ್ದರು. ದೋರನಹಳ್ಳಿಯ ಮಹೇಶ ಪತ್ತಾರ ನಿರೂಪಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next