Advertisement

ಕ್ವಾರಂಟೈನ್‌ ಕೇಂದ್ರದಲ್ಲಿರುವವರ ಕಿರಿಕ್‌

06:08 PM May 27, 2020 | Naveen |

ಶಹಾಪುರ: ಇಲ್ಲಿನ ಕನ್ಯಾಕೋಳೂರ ರಸ್ತೆಯಲ್ಲಿನ ವಸತಿನಿಲಯದ ಕ್ವಾರಂಟೈನ್‌ ಕೇಂದ್ರದಲ್ಲಿರುವ ಕೆಲವರು ಸಮರ್ಪಕ ಊಟ ನೀಡುತ್ತಿಲ್ಲ, ಕುಡಿವ ನೀರಿಲ್ಲವೆಂದು ತಗಾದೆ ತೆಗೆದು ಕೇಂದ್ರದ ಚಾವಿ ಮುರಿದು ಪ್ರತಿಭಟನೆ ನಡೆಸಿದ್ದಲ್ಲದೇ ನಗರದಲ್ಲಿ ಓಡಾಡಿದ ಪ್ರಸಂಗ ಇತ್ತೀಚೆಗೆ ನಡೆದಿದೆ.

Advertisement

ಕೆಲ ಅಧಿಕಾರಿಗಳು ಹೇಳುವಂತೆ, ಕ್ವಾರಂಟೈನ್‌ ಕೇಂದ್ರದಲ್ಲಿರುವವರಿಗೆ ಹೊರಗಡೆಯಿಂದ ಬುತ್ತಿ ನೀಡುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ಕೆಲ ಯುವಕರು ತಮ್ಮ ದುಶ್ಚಟಕ್ಕಾಗಿ ಇಲ್ಲಸಲ್ಲದ ಆರೋಪ ಮಾಡಿ ಚಾವಿ ಮುರಿದು ನಗರದಲ್ಲಿ ಓಡಾಡಿ ಕುಡಿದು, ಬೀಡಿ ಸಿಗರೇಟ್‌ ತೆಗೆದು ಕೊಂಡು ಕ್ವಾರಂಟೈನ್‌ ಕೇಂದ್ರಕ್ಕೆ ಮರಳಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ಕ್ವಾರಂಟೈನ್‌ನಲ್ಲಿರುವವರು ತಮಗೆ ನೀಡುವ ಅನ್ನದ ಪಾಕೆಟ್‌ನ್ನು ನಾಯಿಗೆ ಎಸೆದಂತೆ ಎಸೆಯುತ್ತಾರೆ ಎಂದು ದೂರಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ವೈರಲ್‌ ಆಗಿದೆ.

ಆತಂಕ: ಕ್ವಾರಂಟೈನ್‌ನಲ್ಲಿರುವವರು ನಗರದಲ್ಲಿ ಓಡಾಡಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ನಗರವಾಸಿಗಳಲ್ಲಿ ಆತಂಕ ಶುರುವಾಗಿದೆ. ತಾಲೂಕು ಆಡಳಿತ ಕ್ವಾರಂಟೈನ್‌ನಲ್ಲಿರುವವರನ್ನು ಯಾವುದೇ ಕಾರಣಕ್ಕೂ ಹೊರಗೆ ಬಿಡಬಾರದು. ಸೂಕ್ತ ಪೊಲೀಸ್‌ ಬಂದೋಬಸ್ತ್ ಮಾಡಬೇಕೆಂದು ಮುಖಂಡರಾದ ಅಯ್ಯಣ್ಣ ಕದರಾಪರ ಮತ್ತು ರಡ್ಡಿ ಸಗರ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next