Advertisement

ಶೇ. 69 ಮಳೆ ಕೊರತೆ ನಡುವೆಯೂ ಬಿತ್ತನೆಗೆ ಸಿದ್ಧತೆ

12:27 PM Jun 10, 2019 | Naveen |

ಮಲ್ಲಿಕಾರ್ಜುನ ಮುದ್ನೂರ
ಶಹಾಪುರ:
ಕಳೆದ ಎರಡು ದಿನದಿಂದ ತಾಲೂಕಿನ ಹಲವಡೆ ಮುಂಗಾರು ಮಳೆ ಸುರಿದ ಹಿನ್ನೆಲೆಯಲ್ಲಿ ಭೂಮಿ ತಂಪಾಗಿದೆ. ಅಲ್ಲದೆ ರೈತರ ಮೊಗದಲ್ಲಿ ಭರವಸೆ ಮೂಡಿದೆ.

Advertisement

ಕಳೆದ ವಾರವಷ್ಟೆ 44 ಡಿಗ್ರಿಗಿಂತಲೂ ಮಿಗಿಲು ತಾಪಮಾನ ಕಂಡಿದ್ದ ಜನರಿಗೆ ಮೃಗಶಿರ ಮಳೆ ವಾತಾವರಣವನ್ನೇ ಬದಲಾಯಿಸಿದೆ. ಬರದ ಛಾಯೆಯಿಂದ ನಲುಗಿದ್ದ ರೈತಾಪಿ ಜನರಿಗೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳಲು ಒಂದಿಷ್ಟು ಭರವಸೆ ಮೂಡಿಸಿದೆ.

ಬರ ಹಾಗೂ ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಜನರಿಗೆ ಮುಂಗಾರು ಮಳೆ ಸುರಿಯುವ ಮೂಲಕ ಪಶು ಪಕ್ಷಿಗಳಿಗೆ ಕುಡಿಯಲು ನೀರು ಆದರೂ ದೊರೆತಂತಾಗಿದೆ. ಅಲ್ಲದೆ ಕಷ್ಟದ ದಿನಗಳು ನೀರಿನ ಹಾಹಾಕಾರ ದೂರವಾಯಿತು. ಇನ್ನೇನು ಕುಡಿಯಲಾದರೂ ನೀರು ದೊರೆಯಲಿದೆ ಎಂಬ ಆಶಾಭಾವನೆ ಮೂಡಿದೆ.

ಶುಕ್ರವಾರ ರಾತ್ರಿ, ಸಗರ, ದೋರನಹಳ್ಳಿ, ಶಿರವಾಳ ಮತ್ತು ವಡಿಗೇರಾ, ಹಯ್ನಾಳ, ಗೋಗಿ ಭಾಗದಲ್ಲಿ ಮಳೆ ಚೆನ್ನಾಗಿಯಾಗಿದೆ. ರೈತರು ಈ ಭಾಗದಲ್ಲಿ ತಮ್ಮ ಭೂಮಿ ಹದ ಮಾಡಿಕೊಂಡು ಬಿತ್ತನೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.

ಜೂನ್‌ 8ರವರಗೆ ಮಳೆ ಪ್ರಮಾಣ: ವಡಿಗೇರಾ 45.8 ಮಿಮೀ ಮಳೆಯಾಗಿದೆ. ಶಹಾಪುರ 20.08 ಮಿಮೀ, ಭೀಮರಾಯನಗುಡಿ 38.2 ಮಿಮೀ, ಗೋಗಿ 79 ಮಿಮೀ, ದೋರನಹಳ್ಳಿ 16 ಮಿಮೀ, ಹಯ್ನಾಳ 23.2 ಮಿಮೀ, ಹತ್ತಿಗೂಡೂರು 41 ಮಿಮೀ ಮಳೆಯಾಗಿದೆ. ಒಟ್ಟು ತಾಲೂಕಿನಾದ್ಯಂತ ಶೇ. 37.7ರಷ್ಟು ಮಳೆಯಾಗಿದೆ. ಶೇ.69.3ರಷ್ಟು ಮಳೆ ಕೊರತೆ ಇದೆ ಎಂದು ಕೃಷಿ ಇಲಾಖೆ ಅಧಿಕಾರಿ ದಾನಪ್ಪ ಕತ್ನಾಳ ತಿಳಿಸಿದ್ದಾರೆ.

Advertisement

ಭೂಮಿ ಹದ ಮಾಡಿಕೊಳ್ಳವಷ್ಟು ಮಳೆ ಬಂದಿದೆ. ಮಳೆ ಅಭಾವದಿಂದ ಸಾಕಷ್ಟು ಸಂಕಷ್ಟ ಎದುರಿಸಿದ್ದೇವೆ. ಈ ಬಾರಿಯಾದರೂ ವರುಣಕೃಪೆ ತೋರುವುದೇ ಎಂಬುದನ್ನು ನೋಡಬೇಕಿದೆ. ಮಳೆ ಅಭಾವದ ಆತಂಕದಿಂದಲೇ ಭೂಮಿ ಹಸನು ಮಾಡುತ್ತಿದ್ದೇವೆ.
ಬಾಪುಗೌಡ ಕರಕಳ್ಳಿ, ರೈತ. 

ಹೊಲ ಹಸನು ಮಾಡಿಕೊಳ್ಳುತ್ತಿದ್ದೇವೆ. ಹೆಸರು, ಸಜ್ಜೆ ಇತರೆ ಬೆಳೆ ಬಿತ್ತನೆಗೆ ಸಿದ್ಧತೆಯಲ್ಲಿದ್ದೇವೆ. ಈ ಭಾಗದಲ್ಲಿ ಹೊಲ ಹದ ಮಾಡಿಕೊಳ್ಳುವಷ್ಟು ಮಳೆಯಾಗಿದೆ. ಹೀಗಾಗಿ ರೈತರೆಲ್ಲರೂ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇವೆ.
ಮಾಳಪ್ಪ ಸಗರ, ರೈತ.

Advertisement

Udayavani is now on Telegram. Click here to join our channel and stay updated with the latest news.

Next